ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ತವ್ಯದಲ್ಲಿ ನಿಷ್ಠೆ ಪ್ರಾಮಾಣಿಕತೆ ಇರಲಿ….

Share Below Link

ಹೂವಿನಹಡಗಲಿ: ಪಟ್ಟಣದ ಪುರ ಸಭೆಯ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ ಕಾರ್ಯ ಕ್ರಮವು ಸಂಘದ ಅಧ್ಯಕ್ಷರಾದ ಶ್ರೀಯಮುನಪ್ಪ ಇವರ ಅಧ್ಯಕ್ಷತೆ ಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನ ಮುಖ್ಯಾಧಿಕಾರಿ ಹೆಚ್.ಸಿ.ಮಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಇಂದಿನ ಕಾರ್ಯಕ್ರಮ ಚಿಕ್ಕದಾಗಿದ್ದರೂ ಚೊಕ್ಕವಾಗಿದೆ,ಇನ್ನೂ ಅದ್ದೂರಿ ಯಾಗ ಮಾಡಬಹುದಾಗಿತ್ತು. ನನ ಗೆ ಅನೇಕ ಇಲಾಖೆಗಳಲ್ಲಿ ಅವಕಾಶ ಗಳಿದ್ದರೂ ,ಎ ಇಲಾಖೆಗಳಿ ಗಿಂತ ಪೌರ ಕಾರ್ಮಿಕರೊಂದಿಗೆ ಬಾಂಧವ್ಯ ತೃಪ್ತಿ ನೀಡಿದ್ದು ಇದೇ ಇಲಾಖೆ ಯಲ್ಲಿಯೇ ಮುಂದುವರಿ ಯುವ ಆಶಯ ನನಗೆ. ನಿಮ್ಮ ಕರ್ತವ್ಯದಲ್ಲಿ ಪ್ರಾಮುಖ್ಯತೆ,ನಿಷ್ಠೆ ಪ್ರಾಮಾ ಣಿಕತೆ ಇರಲಿ. ಅಧಿಕಾರಿ ಗಳೆಂಬ ಅಂಜಿಕೆ ಬೇಡ, ಮುಜು ಗುರ ಬೇಡ ನಾವೆಲ್ಲರೂ ಒಂದೆ. ಯಾವ ಸಮ ಯದಲ್ಲಿ ಬೇಕಾದರೂ ನನ್ನ ಸಹಾಯ ಪಡೆಯ ಬಹುದು. ನೀವು ದುಶ್ಚಟದಿಂದ ದೂರವಾ ಗಿರಿ.ನಿಮ್ಮ ಆರೋಗ್ಯ ಕಾಯ್ದು ಕೊ ಂಡಲ್ಲಿ ಮಾತ್ರ ಇತರರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಆರೋಗ್ಯ ಸಹಾಯಕ ಶ್ರೀ ಮಾರುತಿ ನಿಮಗೇ ಏನೇ ಸೌಲಭ್ಯ ಗಳ ಅವಶ್ಯಕತೆ ಇದ್ದರೂ ಗಮನಕ್ಕೆ ತಂದಲ್ಲಿ ಮುಖ್ಯಾಧಿಕಾರಿಗಳ ಸಹಾಯ ಸಹಕಾರದೊಂದಿಗೆ ಒದಗಿಸಲು ಬದ್ದರು.
ಶ್ರೀ ಮೈಲಾರಪ್ಪನವರು ,ಇಂದು ನಮಗೆ ಹಬ್ಬದ ವಿಶೇಷ ದಿನ.ಸರ್ಕಾರ ಇಂಥ ಸೌಲಭ್ಯ ಕಲ್ಪಿಸಿದೆ.ಕಾರ್ಮಿಕರಾದ ನಾವು ಆರ್ಥಿಕವಾಗಿ ಹಿಂದಿಗಿಂತ ಇಂದು ಅಭಿವೃದ್ದಿಯಾಗುತ್ತಿದ್ದು,ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬೆಳೆ ಯುತ್ತಿ ಲ್ಲವೆಂಬುದೇ ವಿಷಾಧ ನೀಯ ಸಂಗತಿ.ಆವು ಬೆಳೆಯ ಬೇಕು ಅಲ್ಲದೆ ನಮ್ಮ ಪರಿಸರವನ್ನೂ ಬೆಳಸ ಬೇಕು.ಅದಕ್ಕಾಗಿ ನೀವುಗಳು ನಮ್ಮಲ್ಲಿರುವ ಆರೋಗ್ಯ ನಿರೀಕ್ಷ ಕರು ,ಇತರೆ ಪರಿಣಿತರಿಂದ ಪ್ರಗತಿ ಯ ಬಗ್ಗೆ ಸೂಕ್ತ ತರಬೇತಿ ಪಡೆಯ ಬೇಕು.ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕೊಟ್ಟಾಗ ಮಾತ್ರ ನಿಮ್ಮ ಕುಟುಂಬದ ಪ್ರಗತಿ ಸಾಧ್ಯ ಎಂದ ತಿಳಿಸಿದರು.
ಹಿರಿಯ ಆರೋಗ್ಯಾಧಿಕಾರಿ ಶ್ರೀ ಸೋಮಶೇಖರ ಮಡದ ಅವರು, ನಾನು ಹಲವಾರು ಕಡೆ ಕಾರ್ಯ ನಿರ್ವಹಿಸಿ ಬಂದಿರುವೆ ಆದರೆ ಹೂವಿನಹಡಹಲಿ ಪೌರ ಕಾರ್ಮಿಕರ ಕೆಲಸ ನನಗೆ ತೃಪ್ತಿದಿದೆ. ತ್ಯಾಜ್ಯ ನಿರ್ವಹಣೆಯೇ ನಮ್ಮಗುರಿ ಅದನ್ನು ನೀವು ಪ್ರಾಮಾಣಿಕವಾಗಿ ಮಾಡಿತ್ತಿರುವಿರಿ.ಕಿವಿ ಮಾತು ನೆನ ಪಿಡಿ – ಮೊದಲು ನಿಮ್ಮ ಸುರ ಕ್ಷತೆಗೆ ಆದ್ಯತೆ ಕೊಡೋಣ.ಪ್ರಾ ಮಾಣಿಕತೆ ಕರ್ತವ್ಯ ದಕ್ಷತೆ ನಿಮ್ಮ ದಾಗಲಿ ಎಂದರು.
ಇದೇ ಸಂದರ್ಭದಲ್ಲಿ ಕಾರ್ಮಿ ಕರ ಪರವಾಗಿ ವಿಜಯ್ ಮಾತ ನಾಡಿದರು,ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಸರ್ಕಾರ ಪೌರ ಕಾರ್ಮಿಕರಿಗೆ ನೀಡಿದ ಸಮವಸ್ತ್ರ ವಿತರಣೆ ಮಾಡಿದರು ಅಲ್ಲದೆ ಈ ವರ್ಷದ ಅತ್ತುತ್ತಮ ಪೌರಕಾ ರ್ಮಿಕ ರಾಜಪ್ಪ ಇವರಿಗೆ ಗೌರವ ಸನ್ಮಾನ.ಹಾಗೂ ಕಾರ್ಮಿಕರ ಉತ್ತೇಜನಕ್ಕಾಗಿ ಕ್ರಿಕೆಟ್ ಹಾಗೂ ಕಬ್ಬಡ್ಡಿ ಪಂದ್ಯಗಳನ್ನ ಆಯೊ ಜಿಸಿದ್ದು ,ವಿಜೇತರಿಗೆ ಬಹು ಮಾ ನ ನೀಡಿ ಗೌರವಿಸಲಾಯಿತು. ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪಹಾರ ಹಾಕಿ ಗೌರವ ಸಲ್ಲಸಿ ದರು. ಕಾರ್‍ಯ ಕ್ರಮದಲ್ಲಿ ನಾಗರಾಜ, ಗಾಳಮ್ಮ, ಬಸವರಾಜ ರಾಮ ಮೂರ್ತಿ ಹಾಗೂ ಇತರೆ ಎಲ್ಲ ಆಧಿಕಾರಿಗಳು ಹಾಗೂ ಕಾರ್ಮಿಕರು ಭಾಗವಹಿಸಿ ದ್ದರು. ಹಿರಿಯ ಆರೊ ಗ್ಯಾಧಿಕಾರಿ ಸೋಮಶೇಖರ ಮಲ್ಯಾಡದ ಇ ವರು ಕಾರ್‍ಯಕ್ರಮ ನಡೆಸಿ ಕೊಟ್ಟರು.