ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮಾತು ಸಾಧನೆ ಆಗದಿರಲಿ, ಸಾಧನೆ ಮಾತಾಗಲಿ..

Share Below Link

ಚಿಕ್ಕಮಗಳೂರು : ಮಾತು ಸಾಧನೆ ಆಗಬಾರದು, ಸಾಧನೆ ಮಾತಾಗ ಬೇಕು, ಈ ನಿಟ್ಟಿನಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಅನುಸರಿಸಬೇಕು ಎಂದು ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಜಿ ಬಿಜೆಪಿ ವತಿಯಿಂದ ಇಂದು ನೂತನ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾಯಿತು, ಇದಕ್ಕೆ ನಾವು ಆತ್ಮಾವಲೋಕನ ಮಾಡಿಕೊಳ್ಳ ಬೇಕಿದೆ, ಆದರೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಹಾಗೂ ವಿಧಾನ ಪರಿಷತ್‌ನಲ್ಲಿ ಭಾರೀ ಅಂತರದಲ್ಲಿ ಗೆಲ್ಲಿಸುವ ಮೂಲಕ ಕಾರ್ಯಕರ್ತರು ಹಾಗೂ ಮತದಾರರು ಮನ್ನಣೆ ನೀಡಿzರೆ, ವಿದ್ಯಾವಂತರು, ಪ್ರeವಂತರು ಹಾಗೂ ಜನ ಸಾಮಾನ್ಯರ ನಿರೀಕ್ಷೆ ಗಳನ್ನು ಚುನಾಯಿತರು ಈಡೇರಿಸ ಬಲ್ಲರು ಎಂಬ ವಿಶ್ವಾಸವಿದೆ ಎಂದರು.
ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಮಾತನಾಡಿ, ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿzರೆ, ಜನರು ಹಾಗೂ ಶಿಕ್ಷಕರಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಿ, ಪರಿಹಾರ ನೀಡಲು ಬದ್ಧನಿರುವೆ, ಹಾಗೆಯೇ ನಿಮ್ಮೆಲ್ಲರ ಧ್ವನಿಯಾಗಿ ಸಧನದ ಒಳಗೆ ಮತ್ತು ಹೊರಗೆ ಪಾವಿತ್ರ್ಯತೆಯನ್ನು ಕಾಪಾಡುವೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಇದು ಎಲ್ಲರ ಪ್ರಯತ್ನದ ಗೆಲುವು, ಕಾರ್ಯಕರ್ತರ ಶಕ್ತಿಯ ಗೆಲುವು, ಇದು ಪದವೀಧರರ ಗೆಲುವು. ನಮ್ಮ ಪಕ್ಷದ ಸಂಘಟನೆ ಕೇಂಧ್ರ ಬಿಂದುವೇ ಕಾರ್ಯಕರ್ತರು, ಅವರ ಹುಮ್ಮಸ್ಸು, ಹುರುಪು, ಯಾವ ಪಕ್ಷದಲ್ಲೂ ಕಾಣಲು ಸಾಧ್ಯವಿಲ್ಲ ಎಂದ ಅವರು, ನಿಷ್ಟಾವಂತ ಕಾರ್ಯಕರ್ತರೂ ಬೆಳೆಯಬೇಕು, ಅವರನ್ನು ಬೆಳೆಸಬೇಕು, ಹಾಗೆಯೇ ಜನರು ಹಾಗೂ ಪದವೀಧರ ಮತದಾರರು ಪ್ರೀತಿ, ವಿಶ್ವಾಸದಿಂದ ಹರಸಿzರೆ, ಅವರ ನಿರೀಕ್ಷೆಗಳಿಗೆ ತಕ್ಕಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಹೇಳಿದರು.
ನೂತನ ಸಂಸದ ಕೋಟ ಶ್ರೀನಿವಾಸ ಪೂಜರಿ ಹಾಗೂ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾದ ಸಿ.ಟಿ.ರವಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಜಿ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಪ್ರಮುಖರಾದ ರಂಗನಾಥ್, ಪುಷ್ಪರಾಜ್, ಕಲ್ಮುರಡಪ್ಪ, ಪ್ರೇಮ್ ಕುಮಾರ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ನಗರ ಮತ್ತು ಮಂಡಲ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು. ಇದಕ್ಕೂ ಮೊದಲು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *