ಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರಾರ್ಥನಾ ಮಂದಿರಗಳು ಸಮಾಜದಲ್ಲಿ ಸುಧಾರಣೆಗೆ ಮುಂದಾಗಲಿ…

Share Below Link

ಶಿವಮೊಗ್ಗ : ಪ್ರಾರ್ಥನಾ ಮಂದಿರಗಳು ಸಮಾಜದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯರುಪ್ತಾರಾಗಬೇಕು ಎಂದು ವಿಧಾನ ಪರಿಷತ್ ಸದ್ಯೆ ಬಲ್ಕಿಷ್ ಬಾನು ಕರೆ ನೀಡಿದರು.
ನಗರದ ಮಲ್ನಾಡ್ ಸ್ಕಿಲ್ ಸೆಂಟರ್‌ನಲ್ಲಿ ಅಯೋಜಿಸಿದ್ದ ಯುವಜನರ ಉನ್ನತಿಗಾಗಿ ಸಮಾಜದ ಪಾತ್ರ ವಿಷಯ ಕುರಿತ ಕಾರ್‍ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಯುವಜನರ ಏಳಿಗಾಗಿ ಪೋಷಕರು ಎಷ್ಟು ಮುಖ್ಯವೋ ನಾವು ವಾಸಿಸುವ ಸಮಾಜವು ಬಹಳ ದೊಡ್ಡ ಪಾತ್ರ ವಹಿಸಿದೆ. ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿದ್ಯಾವಂತರು ಮುಂದೆ ಬರಬೇಕೆಂದು ಅಭಿಪ್ರಾಯ ಪಟ್ಟರು.
ಸರ್ಕಾರ ಯುವಕರ ಭವಿಷ್ಯ ಸುಧಾರಿಸಲು ಪ್ರಯತ್ನಿಸುತ್ತಿದೆ. ಇಂದಿನ ಯುಗದಲ್ಲಿ ಬಹುತೇಕ ಮಕ್ಕಳು ಬುದ್ಧಿವಂತರಾಗಿರತ್ತಾರೆ, ಆದರೆ ಕೆಲವು ಮಕ್ಕಳ್ಳಿಗೆ ಅವರ eನಕ್ಕೆ, ತಕ್ಕ ವಾತಾವರಣ ಸಿಗುವು ದಿಲ್ಲ ಕೆಲ ಪೋಷಕರು ಅವರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕಾರ್ಯಗತರಾಗದೆ ಅವರ ಭವಿಷ್ಯ ಅಪಾಯಕ್ಕೆ ಸಿಲುಕಿಸುತ್ತಿzರೆ, ಇದು ದುಃಖಕರ ವಿಷಯ. ಈ ನಿಟ್ಟಿನಲ್ಲಿ ಪ್ರಾರ್ಥನ ಮಂದಿರಗಳು ಮತ್ತು ಸೇವಾ ಸಂಸ್ಥೆಗಳು ನಮ್ಮ ಸಮಾಜದ ಸುಧಾರಣೆಯ ಕೇಂದ್ರ ಗಳಾಗಬೇಕು, ಬಹುತೇಕ ಪ್ರಾರ್ಥನಾ ಮಂದಿರಗಳಲ್ಲಿ ಎ ರೀತಿಯ ಸೌಲಭ್ಯಗಳನ್ನು ಹೊಂದಿವೆ, ಅದನ್ನು ಯುವಜನರ ಏಳಿಗೆಗಾಗಿ ಸಮರ್ಪಿಸಿದಲ್ಲಿ ರಾಷ್ಟ್ರವು ಅಭಿವೃದ್ಧಿಯ ಪತದತ್ತ ಸಾಗಿಸುವಲ್ಲಿ ದೊಡ್ಡ ಕೊಡಗೆಯಾಗುತ್ತದೆಂದರು.
ವಿಧಾನ ಪರಿಷಥ್ ಸದಸ್ಯ ಡಾ. ಧನಂಜಯ್ ಸರ್ಜಿ ಮಾತನಾಡಿ, ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಅವಶ್ಯಕತೆ ಯಿದೆ. ಯುವಕರಲ್ಲಿ ಆತ್ಮವಿಶ್ವಾಸದ ಕೊರತೆ ಇದೆ, ಆತ್ಮವಿಶ್ವಾಸ ಇದ್ದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದರು .
ಜಿ ಉದ್ಯೋಗ ಅಧಿಕಾರಿ ಖಲಂದರ್ ಖಾನ್ ಪ್ರಮುಖ ರಾದ ಸೈಯದ್ ವಾಹೀದ್ ಅಡ್ಡು, ಮುದಸ್ಸಿರ್ ಅಹ್ಮದ್, ಲಿಯಾಕತ್, ಸೈಯದ್ ಜಫರ್ ಮುರುಗೇಂದ್ರ ಪಾಟೀಲ್, ಮಲ್ನಾಡ್ ಸ್ಕಿಲ್‌ನ ಐಜಜ್, ಇಫ್ತಾಕಾರ್ ಇದ್ದರು.