ಪ್ರತಿ ಶಿಕ್ಷಕರೂ ಸ್ವತಃ ಸೂರು ಹೊಂದುವಂತಾಗಲಿ…
ಶಿವಮೊಗ್ಗ: ಶಿಕ್ಷಕರಿಂದ ವಿದ್ಯೆ ಕಲಿತ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗ ಪಡೆದು ಕೈತುಂಬಾ ಸಂಬಳ, ಮನೆ, ಆಸ್ತಿ- ಪಾಸ್ತಿ, ಸಂಪತ್ತನ್ನು ಸಂಪಾದಿಸು ತ್ತಾರೆ. ಆದರೆ ವಿದ್ಯೆ ಕಲಿಸಿದ ಶಿಕ್ಷಕರು ನಿವೃತ್ತಿ ಅಂಚನ್ನು ತಲುಪಿದರೂ ಕೂಡ ಸ್ವತಃ ಮನೆಯೊಂದನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ಆದರೆ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಸಹಕಾರಿ ಕ್ಷೇತ್ರದ ಮೂಲಕ ನಿವೇಶನ ನೀಡುತ್ತಿರುವುದು ಶ್ಲಾಘನೀಯ. ಈ ಮೂಲಕ ಪ್ರತಿಯೊಬ್ಬ ಶಿಕ್ಷಕರೂ ಸ್ವತಃ ಸೂರನ್ನು ಹೊಂದಲಿ ಎಂದು ಸೊರಬ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ ಟಿ.ಎಂ. ಆಶಿಸಿದರು.
ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ೧೩ನೇ ವರ್ಷದ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತಿ ಬಹಳ ಪವಿತ್ರವಾದುದ್ದು. ಈ ವೃತ್ತಿಯಿಂದ ಗೌರವ ಸಂಪಾದಿಸಬಹುದೇ ಹೊರೆತು ಬೇರೆ ಸಂಪಾದನೆ ಸಾಧ್ಯವಿಲ್ಲ. ಶಿಕ್ಷಕರು ತಾವು ಗಳಿಸುವ ಆದಾಯ ದ ಕನಿಷ್ಠ ನಿವೃತ್ತಿಯ ವೇಳೆಗಾದರೂ ತಲೆಯ ಮೇಲೊಂದು ಸೂರು (ಮನೆ) ನಿರ್ಮಿಸಿಕೊಳ್ಳುವಂತಾಗಲಿ. ಈ ನಿಟ್ಟಿನಲ್ಲಿ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಕಾರ್ಯೋನ್ಮುಖ ವಾಗಿರುವುದು ಶ್ಲಾಘನೀಯ ಎಂದರು.
ಶಿಕ್ಷಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ, ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿ ಸಮಾಜದ ಆಸ್ತಿಯನ್ನಾಗಿ ಮಾಡು ತ್ತಾರೆ. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಈ ಕಾರಣಕ್ಕಾಗಿಯೇ ಶಿಕ್ಷಕರಿಗೆ ಗೌರವ ಹೆಚ್ಚು ಎಂದ ಅವರು, ಮನೆ ಕಟ್ಟಿ ನೋಡು-ಮದುವೆ ಮಾಡಿ ನೋಡು ಎಂಬ ಮಾತು ಜನಜನಿತ. ಏಕೆಂದರೆ ಇವೆರೆಡು ಸುಲಭ ಕಾರ್ಯಗಳಲ್ಲ. ಆದರೆ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘವು ಶಿಕ್ಷಕರಿಗೆ ಸೂರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಸಂಘದ ಕಾರ್ಯ ಚಟುವಟಿಕೆ ರಾಜ್ಯ ಮಟ್ಟಕ್ಕೆ ವಿಸ್ತರಿಸಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ಪ್ರತಿಯೊಬ್ಬ ಪ್ರಾಥಮಿಕ ಶಿಕ್ಷಕರು ಸ್ವತಃ ಮನೆಯನ್ನು ಹೊಂದಬೇಕೆಂಬು ವುದೆ ಗೃಹ ನಿರ್ಮಾಣ ಸಹಕಾರ ಸಂಘದ ಗುರಿಯಾಗಿದೆ. ಭೂಮಿಯ ಬೆಲೆ ಜಸ್ತಿಯಾಗಿದ್ದು, ಮನೆ ನಿರ್ಮಾಣದ ವಸ್ತುಗಳೂ ಕೂಡ ದುಬಾರಿಯಾಗಿವೆ. ಶಿಕ್ಷಕರು ಕಡಿಮೆ ವೆಚ್ಚದಲ್ಲಿ ಸ್ವತಃ ಮನೆ ಹೊಂದಲು ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಶಿಕಾರಿಪುರ ತಾಲೂಕು ಅಧ್ಯಕ್ಷ ಚಂದ್ರನಾಯ್ಕ ಮಾತನಾಡಿ ಶಿಕ್ಷರ ಗೃಹ ನಿರ್ಮಾಣ ಸಹಕಾರ ಸಂಘವು ಕೇವಲ ಶಿವಮೊಗ್ಗ ಜಿಗಷ್ಟೆ ಸೀಮಿತವಾಗದೆ ರಾಜ್ಯ ವ್ಯಾಪ್ತಿ ವ್ಯಾಪಿಸಿರುವುದು ಜಿಗೆ ಹೆಮ್ಮೆಯ ಸಂಗತಿ. ಈ ಕಾರಣಕ್ಕಾಗಿ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಅಭಿನಂದನಾರ್ಹರು. ಅವರು ಕೇವಲ ಶೈಕ್ಷಣಿಕ ಕ್ಷೇತ್ರಕಷ್ಟೇ ಸೀಮಿತವಾಗದೆ ಸಹಕಾರ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸರಳತೆ, ತ್ವರಿತ ಸೇನೆ, ಪಾರದರ್ಶಕತೆ ಎಂಬ ಧ್ಯೇಯೊದ್ದೇಶದಿಂದ ಶಿಕ್ಷಕರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿzರೆಂದರು.
ಶಿಕ್ಷಣ ಸಂಯೋಜಕ ಪ್ರಸನ್ನ ಹೆಗಡೆ, ಸದಾನಂದ ಜಿ.ಪಿ, ರಾಜು ಎಸ್.ಪಿ., ಮಾಲತೇಶ್, ಜಿ ಸಾವಿತ್ರಿ ಬಾಯಿ ಪುಲೆ ಅಧ್ಯಕ್ಷೆ ರಾಧ, ಜಗದೀಶ್, ಸುಮತಿ ಕಾರಂತ, ಮಹಮದ್ ಅಲ್ತಾಫ್, ಬಸವರಾಜ ಬಾವಿ, ಸತೀಶ್, ಮಂಜುನಾಥ್, ವಿಜಯ ಕುಮಾರ್, ಶಶಿಕಲಾ, ತಮ್ಮಪ್ಪ ಎಂ.ಎಸ್. ಇನ್ನಿತರರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಾಗರಾಜ್ ಸ್ವಾಗತಿಸಿ, ಮಹಾಬಲೇಶ್ವರ ಹೆಗಡೆ ಪ್ರಾಸ್ತಾಪಿಸಿ, ಗಾಯತ್ರಿ ಕೆ. ಮತ್ತು ಹನುಮಂತಪ್ಪ ಎಂ. ನಿರೂಪಿಸಿ, ಹಾಲೇಶಪ್ಪ ಎನ್.ಸಿ. ವಂದಿಸಿದರು.