ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮೈತ್ರಿ ಅಭ್ಯ ರ್ಥಿಗಳನ್ನು ಅಧಿಕ ಮತಗಳಿಂದ ಗೆಲ್ಲಿಸೋಣ: ಬಿ. ವೈ. ವಿಜಯೇಂದ್ರ

Share Below Link

ಚಿಕ್ಕಮಗಳೂರು : ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಹಣದ ಬಲದಿಂದ ಯಾರನ್ನ ಬೇಕಾದರೂ ಗೆಲ್ಲಿಸುತ್ತೇವೆ ಎನ್ನುವ ಭ್ರಮೆಯಲ್ಲಿದೆ, ಇದರಿಂದ ಕಾಂಗ್ರೆಸ್ ಪಕ್ಷವನ್ನು ಹೊರತರ ಬೇಕೆಂದೆರೆ ಪರಿಷತ್ ಚುನಾವಣೆ ಯನ್ನು ಗೆಲ್ಲಲೇಬೇಕು ಎಂದು ಬಿಜೆಪಿ ರಾಜಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.


ಜಿ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಈ ಅವಧಿಯಲ್ಲಿ ಯಾವುದೇ ಕ್ಷೇತ್ರಕ್ಕೆ ನಯಾಪೈಸೆ ರೂಪಾಯಿ ಕೂಡ ಅನುದಾನ ಕೊಟ್ಟಿಲ್ಲ, ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ, ಕರ್ನಾಟಕ ರಾಜ್ಯ ಹಿಂದೆಂದೂ ಇಂತಹ ಕೆಟ್ಟ ಆಡಳಿತವನ್ನು ಕಂಡಿರಲಿಲ್ಲ ಎಂದು ಆರೋಪಿಸಿದ ಅವರು, ದೇಶದಲ್ಲಿ ಈ ಭಾರಿ ಸ್ಪಷ್ಟ ಬಹುಮತ ಬರುವುದರ ಜೊತೆಗೆ ಪ್ರಧಾನಿ ಮೋದಿಯವರು ಮೂರನೇ ಭಾರಿಗೆ ಪ್ರಧಾನಿ ಆಗುತ್ತಾರೆ, ಇದೆ ರೀತಿ ಪರಿಷತ್ ಚುನಾವಣೆಯನ್ನು ಕೂಡ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರನ್ನು ಗೆಲ್ಲಿಸಲು ನಮ್ಮ ಕಾರ್ಯಕರ್ತರು, ನಮ್ಮ ಪಕ್ಷದ ಮುಖಂಡರು, ಜೆಡಿಎಸ್ ಕಾರ್ಯಕರ್ತರು ಒಂದಾಗಿ ಅತ್ಯಂತ ಶ್ರಮದಿಂದ ಕೆಲಸ ಮಾಡುತ್ತಿರು ವುದು ತುಂಬಾ ಸಂತೋಷ ತಂದಿದೆ, ಇತ್ತೀಚೆಗಷ್ಟೇ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಎರಡೂ ಪಕ್ಷದ ಕಾರ್ಯಕರ್ತರು ಅತ್ಯಂತ ಶ್ರz ಯಿಂದ ಕೆಲಸ ಮಾಡಿ ಯಶಸ್ವಿ ಯಾಗಿ ಚುನುವಣೆಯನ್ನು ನಡೆಸಿದ್ದೇವೆ. ಇದೆ ರೀತಿ ಪರಿಷತ್ ಚುನಾವಣೆಯನ್ನು ಶ್ರದ್ಧೆ ಕೆಲಸ ಮಾಡಿ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆನೀಡಿದರು.
ರಾಜಕಾರಣದಲ್ಲಿ ಜತಿ ಅನ್ನುವುದು ಇರುವುದಿಲ್ಲ, ಡಾ| ಧನಂಜಯ ಸರ್ಜಿಯವರು ಒಬ್ಬ ಸಜ್ಜನ ವ್ಯಕ್ತಿ, ರಾಜಕಾರಣಕ್ಕೆ ಬರಬೇಕು ಎಂದುಕೊಂಡು ಬಂದವರಲ್ಲ, ಪ್ರಾಮಾಣಿಕತೆ ಯಿಂದ ಜನರ ಸೇವೆಯನ್ನು ಮಾಡಬೇಕು ಎಂದು ಬಂದವರು, ಧನಂಜಯ ಸರ್ಜಿಯಂತವರು ರಾಜಕಾರಣಕ್ಕೆ ಬರುವುದರಿಂದ ರಾಜಕಾರಣಕ್ಕೆ ಒಂದು ಹೊಸ ರೂಪ ಸಿಗುವಂತಾಗುತ್ತದೆ, ರಾಜಕಾರಣಿಗಳಿಗೆ ಉತ್ತಮ ಹೆಸರು ಸಿಗುತ್ತದೆ, ಸರ್ಜಿಯವರ ಮೇಲೆ ನಮಗೆ ವಿಸ್ವಾಸ ಇದೆ, ದೊಡ್ಡ ಅಂತರದಿಂದ ವಿಜಯಶಾಲಿ ಆಗುವ ಮೂಲಕ ಕ್ಷೇತ್ರಕ್ಕೂ ಒಡೆತನವನ್ನು ಮಾಡುತ್ತಾರೆ, ಸಂಘಟನೆಗೂ ಶಕ್ತಿ ತುಂಬುವ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಚುನಾವಣೆಗೆ ಇನ್ನು ಕೇವಲ ಏಳು ದಿನಗಳು ಮಾತ್ರ ಬಾಕಿ ಇದೆ, ಶಿಕ್ಷಕರ ಕ್ಷೆತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಕ್ರಮ ಸಂಖ್ಯೆ ೧ ಮತ್ತು ಬಿಜೆಪಿ ಅಭ್ಯರ್ಥಿ ಡಾ ಧನಂಜಯ ಸರ್ಜಿ ಅವರ ಕ್ರಮ ಸಂಖ್ಯೆ ೨, ಈ ಇಬ್ಬರು ಅಭ್ಯರ್ಥಿ ಗಳಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಕೇಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಚಿಕ್ಕಮಗಳೂರು ಜಿ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ,ಪ್ರಮುಖರಾದ ಸಿ. ಟಿ. ರವಿ, ಕೋಟ ಶ್ರೀನಿವಾಸ ಪೂಜರಿ, ವಿ. ಸುನಿಲ್ ಕುಮಾರ್, ಡಿ. ಎಸ್. ಅರುಣ್, ಎಸ್ ದತ್ತಾತ್ರಿ ಇನ್ನಿತರರಿದ್ದರು.

This image has an empty alt attribute; its file name is Arya-coll.gif