ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹಿಸಿ ಬೀದಿಗಿಳಿದ ಉಪನ್ಯಾಸಕರು…

Share Below Link

ಶಿವಮೊಗ್ಗ : ಪದವಿ ಪೂರ್ವ ಕಾಲೇಜುಗಳಲ್ಲಿ ಅವೈeನಿಕವಾಗಿ ಹೊರಡಿಸಿರುವ ಆದೇಶಗಳನ್ನು ಹಿಂಪಡೆಯಲು ಆಗ್ರಹಿಸಿ, ಜಿ ಪಪೂ ಕಾಲೇಜು ಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರುಗಳ ಸಂಘ ನಿನ್ನೆ ಸಂಜೆ ಜಿಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಶಾಲಾ ಶಿಕ್ಷಣ ಇಲಾಖೆ ಪಪೂ ಹಾಗೂ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಅ.೧೮ ಮತ್ತು ಅ.೩೧ರಂದು ಹೊರಡಿಸಿರುವ ಡಯಟ್‌ನ ಹಿರಿಯ ಉಪನ್ಯಾಸಕ ರಿಂದ ಪಪೂ ಶಿಕ್ಷಣ ಇಲಾಖೆಯ ಮಾಹಿತಿ ಸಂಗ್ರಹಿಸಿ ಪರಿಶೀಲನೆ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಡಯಟ್ ಉಪನ್ಯಾಸಕರುಗಳು ಪಪೂ ಉಪನ್ಯಾಸಕರ ಕಾರ್ಯಚಟುವಟಿಕೆ ಪರಿಶೀಲನೆ ಮಾಡುವುದೇ ಅವೈeನಿಕವಾಗಿದೆ. ಇದು ಸರಿಯಲ್ಲ, ಈ ಜಂಟಿ ಸುತ್ತೋಲೆ ಗಳನ್ನು ವಾಪಾಸ್ ಪಡೆಯಬೇಕು. ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಗಳ ಸಂಭಾವನೆ ಹಾಗೂ ಬಾಕಿಯಿ ರುವ ೧೩.೫ ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಖಾಲಿಯಿರುವ ಉಪನ್ಯಾಸಕರ ಹುzಗಳನ್ನು ಭರ್ತಿಮಾಡಬೇಕು, ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು, ಬೋಧಕೇತರ ಹುzಗಳನ್ನು ಭರ್ತಿಮಾಡಬೇಕು, ಉಪ ನಿರ್ದೇಶಕರ ಕಛೇರಿಯನ್ನು ಬಲಗೊಳಿಸಲು ಇಬ್ಬರು ಹಿರಿಯ ಪ್ರಾಂಶುಪಾಲರನ್ನು ಸಹಾಯಕ ನಿರ್ದೇಶಕರ ಹುzಗೆ ನೇಮಿಸ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಪರೀಕ್ಷಾ ವಿಭಾಗವನ್ನು ಈ ಹಿಂದೆ ಇದ್ದಂತೆ ಇರಲು ಕ್ರಮ ತೆಗೆದುಕೊಳ್ಳಬೇಕು. ಅಕಾಡೆಮಿಕ್ ಕೌನ್ಸಿಲ್ ಸಮಿತಿಯನ್ನು ರಚಿಸ ಬೇಕು. ಕೆಪಿಎಸ್ ಶಾಲಾಗಳ ಸಂಪೂರ್ಣ ಅಧಿಕಾರವನ್ನು ಕಾಲೇಜುಗಳಿಗೆ ಪ್ರಾಂಶುಪಾಲರಿಗೆ ನೀಡಬೇಕು, ೨೦೦೬ರ ನಂತರ ಅನುದಾನಿತ ಕಾಲೇಜುಗಳಿಗೆ ನೇಮಕವಾಗಿರುವ ಉಪನ್ಯಾಸಕರಿಗೆ ನಿಶ್ಚಿತ ಪಿಂಚಣಿ ಯೋಜನೆ ಜರಿಗೊಳಿಸಬೇಕು ಎಂದು ಮನವಿದಾರರು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಯೋಗೀಶ್, ಪ್ರಮುಖರಾದ ವೈ.ಎಸ್. ನಾಯಕ್, ಯೋಗೀಶ್ ಎಸ್., ಗುಡ್ಡಪ್ಪ, ಪರಮೇಶ್ವರಪ್ಪ, ಪಂಡರಿನಾಥ್, ಹಾಲಪ್ಪ, ಮಹಮ್ಮದ್ ನಜಹತ್‌ವು, ಜಿ.ಎಫ್. ಕುಟ್ರಿ, ದಿನಕರ್ ಹೆಚ್.ಎಂ., ಕುಬೇರ್‌ನಾಯ್ಕ, ಮಂಜುನಾಥ್ ಬಣಕರ್, ಹಾಲಪ್ಪ ಎಂ. ಸಂಕ್ಕೂರ್ ಸೇರಿದಂತೆ ಹಲವರಿದ್ದರು.