ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾ.27 ಮತ್ತು 28ರಂದು ಶ್ರೀ ನಾಗಸುಬ್ರಹ್ಮಣ್ಯ ದೇವಳದಲ್ಲಿ ಉಪನ್ಯಾಸ

Share Below Link

ಶಿವಮೊಗ್ಗ : ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.೨೭ ಮತ್ತು ೨೮ ರಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀಯವರಿಂದ ಮಾನವನೇಕೆ ಧರ್ಮಾವಲಂಬಿಯಾಗಬೇಕು ಎಂಬ ವಿಷಯ ಕುರಿತು ಉಪನ್ಯಾಸವನ್ನು ನೀಡಲಿzರೆ ಎಂದು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಸಂದೇಶ್ ಉಪಾಧ್ಯ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹಬ್ಬದಿಂದ ಕಾಮನ ಹಬ್ಬದವರೆಗೂ ಹಿಂದೂ ಸಂಸ್ಕೃತಿ ಇರುತ್ತದೆ. ಮಾ.೨೯ ಮತ್ತು ೩೦ ರಂದು ವಿದ್ವಾನ್ ಜಿ.ಎಸ್. ನಟೇಶರವ ರಿಂದ ಕಗ್ಗದ ಬೆಳಕು ಎಂಬ ವಿಷಯದ ಕುರಿತು ಪ್ರವಚನ ಹಾಗೂ ಯುಗಾದಿಯ ಪಂಚಾಂಗ ಶ್ರವಣವನ್ನು ನಿತ್ಯ ಸಂಜೆ ೬.೩೦ ರಿಂದ ೮ ಗಂಟೆಯವರೆಗೆ ಏರ್ಪಡಿಸಲಾಗಿದೆ ಎಂದರು.
ಮಾ.೨೭ ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀಯವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ವಿನಯ್ ಶಿವಮೆಗ್ಗ ಭಾಗವಹಿಸ ಲಿzರೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ದೇವಸ್ಥಾನದ ಅಧ್ಯಕ್ಷರಾದ ಹೆಚ್.ರಾಮಲಿಂಗಪ್ಪ ಇವರು ವಹಿಸಲಿzರೆ ಎಂದರು.
ಪ್ರತಿದಿನ ಸಂಜೆ ೫ ಘಂಟೆ ಯಿಂದ ಭಜನಾ ಕಾರ್ಯಕ್ರಮ ಇರುತ್ತದೆ. ರಾಮ ನವಮಿಯ ಪ್ರಯುಕ್ತ ನಗರದ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯ ಕ್ರಮ, ರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಭಜನಾ ಮಂಡಳಿಯ ಅಧ್ಯಕ್ಷ ಶಬರೀಶ್ ಕಣ್ಣನ್ ಮಾತನಾಡಿ, ೧೦ ವರ್ಷಕ್ಕೂ ಹೆಚ್ಚು ವರ್ಷಗಳಿಂದ ಮಾರ್ಗದರ್ಶನ ನೀಡಿರುವ ವೇದ ಬ್ರಹ್ಮಶ್ರೀ ಸಂದೇಶ್ ಉಪಾಧ್ಯ ಅವರು ಮುಂದಿನ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡಲಿದ್ದಿzರೆ. ಭಜನಾ ಪರಂಪರೆಯನ್ನು ಉಳಿಸುವ ಕಾರ್ಯ ನಡೆಯಲಿ. ಭಜನಾ ಕ್ಷೇತ್ರಕ್ಕೆ ಬೆಂಬಲ ಸಿಗಲಿ ಎಂದು ಹೇಳಿದರು.
ಈ ಹಿಂದೆ ಭಜನಾ ಪರಿಷತ್‌ನ ಅಧ್ಯಕ್ಷರಾಗಿದ್ದ ವಿನಾಯಕ್ ಬಾಯರಿ ಅವರು ನಿಧನರಾಗಿದ್ದ ರಿಂದ ಆ ಸ್ಥಾನಕ್ಕೆ ಸಂದೇಶ ಉಪಾಧ್ಯಾಯ ಅವರು ಆಯ್ಕೆಯಾ ಗಿzರೆ. ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿರುವ ಅವರು ಮುಂದಿನ ದಿನಗಳಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಅಧ್ಯಕ್ಷ ರಾಮಲಿಂಗಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *