ಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಅತ್ಯಂತ ಮುಖ್ಯ:ಗೀತಾ

Share Below Link

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ ಅತ್ಯಂತ ಮುಖ್ಯ ಆಗಿದ್ದು, ಇಂಟರ್‌ರ್‍ಯಾಕ್ಟ್ ಕ್ಲಬ್ ನಾಯಕತ್ವ ಮನೋಭಾವ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿ ಸುತ್ತದೆ ಎಂದು ರೋಟರಿ ಜಿ ಗವರ್ನರ್ ಬಿ.ಸಿ.ಗೀತಾ ಹೇಳಿ ದರು.


ಶಿವಮೊಗ್ಗ ನಗರದ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ಇಂಟರ್‌ರ್‍ಯಾಕ್ಟ್ ಕ್ಲಬ್ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿ, ವಿದ್ಯಾರ್ಥಿಗಳು ರೋಟರಿ ಇಂಟರ್‌ರ್‍ಯಾಕ್ಟ್ ಕ್ಲಬ್‌ನಲ್ಲಿ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ತೊಡಗಿಸಿಕೊಳ್ಳುವುದರಿಂದ ಮುಂದೆ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು ಸಾಧ್ಯ. ನಾಯ ಕತ್ವ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿ ಎಂದು ತಿಳಿಸಿದರು.
ರೋಟರಿ ಇಂಟರ್‌ರ್‍ಯಾಕ್ಟ್ ಕ್ಲಬ್ ಪ್ರಪಂಚದಾದ್ಯಂತ ಇದ್ದು, ಪರಸ್ಪರ ಸಂವಹನದ ಮೂಲಕ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಹಕಾರ, ಸೇವಾ ಮನೋಭಾವನೆಯಯನ್ನು ಬೆಳೆಸಿಕೊಳ್ಳಲು ಕ್ಲಬ್ ಒಂದು ಅತ್ಯು ತ್ತಮ ವೇದಿಕೆಯಾಗಲಿದೆ. ಎ ವಿದ್ಯಾರ್ಥಿಗಳು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರೋಟರಿ ಪೂರ್ವ ಶಾಲೆಯ ಇಂಟರ್‌ರ್‍ಯಾಕ್ಟ್ ಕ್ಲಬ್‌ನ ಸದಸ್ಯರೆಲ್ಲರು ಅನೇಕ ಕಾರ್ಯ ಚಟುವಟಿಕೆ ಹಮ್ಮಿ ಕೊಂಡಿದ್ದು, ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಈಗಾಗಲೇ ೫ ಇಂಟರ್‌ರ್‍ಯಾಕ್ಟ್ ಕ್ಲಬ್ ಸ್ಥಾಪಿಸ ಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷ ನಲ್ ಮತ್ತು ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಡಿ. ಶಿಗ್ಗಾಂವ್ ಮಾತನಾಡಿ, ಇಂಟರ್ ರ್‍ಯಾಕ್ಟ್ ಕ್ಲಬ್ ನಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾರ್ಯಚಟುವಟಿಕೆ ಗಳ ಜೊತೆಗೆ ಉತ್ತಮವಾದ ಫಲಿತಾಂಶ ಬರಲು ಈಗಿನಿಂದಲೇ ಸತತ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ರೋಟರಿ ಸಹಾಯಕ ಗವರ್ನರ್ ರವಿ ಕೋಟೋಜಿ, ಜೋನ್ ಲೆಫ್ಟಿನೆಂಟ್ ಧಮೇಂದ್ರ ಸಿಂಗ್, ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಕಿಶೋರ್ ಕುಮಾರ್ ಡಿ., ಟ್ರಸ್ಟ್ ಕಾರ್‍ಯದರ್ಶಿ ರಾಮಚಂದ್ರ ಎಸ್.ಸಿ., ಜಂಟಿ ಕಾರ್ಯದರ್ಶಿ ನಾಗವೇಣಿ ಎಸ್.ಆರ್., ಖಜಂಚಿ ವಿಜಯ್ ಕುಮಾರ್ ಜಿ., ಡಾ. ಗುಡದಪ್ಪ ಕಸಬಿ, ಪ್ರಾಚಾರ್‍ಯ ಸೂರ್ಯನಾರಾ ಯಣ್ ., ಹರ್ಷಿತ್ ಕೋಟ್ಯಾನ್, ವಿಜಯ್ ಕುಮಾರ್, ಮಂಜು ನಾಥ್, ರೋಟರಿ ಪೂರ್ವದ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.