ಅನ್ವೇಷಣಾ ಇನ್ನೋವೇಶನ್ ಫೋರಂಗೆ ಚಾಲನೆ
ಶಿವಮೊಗ್ಗ: ಮಲೆನಾಡಿನಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ನಗರದ ಪೆಸೆಟ್ ಕಾಲೇಜಿನಲ್ಲಿ ಅನ್ವೇಷಣಾ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ಫೋರಂ ಇಂದು ಉದ್ಘಾಟನೆಗೊಂಡಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಹೊಸ ಉದ್ಯೋಗ ಅವಕಾಶ ಸೃಷ್ಟಿಸು ವುದು. ಸಮಸ್ಯೆ ಗಳಿಗೆ ನವೀನ ಪರಿಹಾರ ಒದಗಿಸುವುದು ಮತ್ತು ತಂತ್ರಜನದ ಲಾಭವನ್ನು ಎಲ್ಲರೂ ಪಡೆಯುವಂತೆ ಮಾಡುವ ಗುರಿಯನ್ನು ಫೋರಂ ಹೊಂದಿದೆ. ಮಲೆನಾಡು ಪ್ರದೇಶ ದಲ್ಲಿ ವಾಣಿ ಜ್ಯೋದ್ಯಮವನ್ನು ಪೋಷಿಸಲು ನೆರವಾಗಲಿದೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡು ವವರಿಗೆ ಹೊಸ ಶಕ್ತಿ ಮತ್ತು ಭರವಸೆ ತುಂಬಲಿದೆ ಎಂದರು.
ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ಉದ್ಯಮಿಗೂ ಒಂದು ಗುರಿ ಇರಬೇಕು. ಕೇವಲ ಕನಸು ಕಂಡರೆ ಸಾಲದು. ಅದನ್ನು ಸಾಕಾರಗೊಳಿ ಸುವಲ್ಲಿ ಕಾರ್ಯತತ್ಪರರಾಗ ಬೇಕು. ಸಾಧನೆ ಮಾಡಬೇಕು. ಕನಸು ಕಾಣು ಕರ್ತವ್ಯ ನಿಷ್ಠನಾಗು, ಕಾದುನೋಡು ಎಂಬಂತೆ ಯಾವುದೇ ಉದ್ಯಮಿ ಸಾಧನೆ ಮಾಡಿದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ವಿಷನ್ ಸ್ಟಾರ್ಟ್ ಅಪ್ ಅಧ್ಯಕ್ಷ ಪ್ರಶಾಂತ್‌ಪ್ರಕಾಶ್ ಸೇರಿ ದಂತೆ ೩೦ಕ್ಕೂ ಹೆಚ್ಚು ಏಂಜೆಲ್ ಹೂಡಿಕೆದಾರರು, ಮಾರ್ಗದರ್ಶ ಕರು, ಉದ್ಯಮ ತಜ್ಞರು, ೫೦ಕ್ಕೂ ಹೆಚ್ಚು ಸ್ಥಳೀಯ ಪರಿಸರ ವ್ಯವಸ್ಥೆ ಬೆಂಬಲಿಸುವ ಸಣ್ಣ ವ್ಯಾಪಾರ ಮಾಲೀಕರು, ೧೫೦ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, ೨೫೦ಕ್ಕೂ ಹೆಚ್ಚು ಆರಂಭಿಕ ಆಕಾಂಕ್ಷಿಗಳು, ಉದಯೋನ್ಮುಖ ಉದ್ಯಮಿಗಳು ಭಾಗಿಯಾಗಿದ್ದರು.