ಲಕ್ಷ್ಮೀಪೂಜೆ – ಉಡಿ ತುಂಬುವ ಕಾರ್ಯಕ್ರಮ…
ಹೊನ್ನಾಳಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಬಸವಾ ಪಟ್ಟಣ ಯೋಜನಾ ವ್ಯಾಪ್ತಿಯ ತುಂಗಭದ್ರಾ ವಲಯದ ದಿಡಗೂರು ಕಾರ್ಯಕ್ಷೇತ್ರದಲ್ಲಿ ಸಾಮೂಹಿಕ ಲಕ್ಷ್ಮಿ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು ದಿವ್ಯ ಸಾನಿಧ್ಯವನ್ನ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಶಾಸಕ ಡಿ .ಜಿ . ಶಾಂತನ ಗೌಡರು ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕ್ಷೇತ್ರದ ಇಂತಹ ಕಾರ್ಯಕ್ರಮ ಮಾಡುವುದರಿಂದ ಜನರಲ್ಲಿ ಒಗ್ಗಟ್ಟು ಒಮ್ಮತ ಮೂಡಲು ಸಾಧ್ಯವಾಗಿದೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ೨೨ ಫಲಾನುಭವಿಗಳಿಗೆ ಒಟ್ಟು ೨,೨೧,೦೦೦- ಮೊತ್ತದ ಸಂಪೂರ್ಣ ಸುರಕ್ಷಾ ಸಹಾಯಧನ ಚೆಕ್ ವಿತರಿಸಿದರು.
ಖಓಈಈP ದಾವಣಗೆರೆ ಜಿ ನಿರ್ದೇಶಕ ಎಂ. ಲಕ್ಷ್ಮಣ ಮುಖ್ಯ ಅತಿಥಿಯಾಗಿ ಆಗಮಿಸಿ ಯೋಜನೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸುಮಾರು ೫೦೧ ಮಹಿಳೆಯರಿಗೆ ಉಡಿ ತುಂಬಿರುವುದು ವಿಶೇಷವಾಗಿತ್ತು . ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.