ವ್ಯಾಪಾರ ನಡೆಸಲು ಕಾರ್ಮಿಕರ ಲೈಸೆನ್ಸ್ ಕಡ್ಡಾಯ: ಸೋಮಣ್ಣ…
ಶಿವಮೊಗ್ಗ: ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅನುಸಾರ ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆಗಳು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ವಾಗಿದೆ ಎಂದು ಹಾಸನ ಪ್ರಾದೇಶಿಕ ಕಚೇರಿ ಆಯುಕ್ತ ಸೋಮಣ್ಣ ಹೇಳಿದರು.
ನಗರದ ಸೂಡಾ ಕಚೇರಿಯ ಕಟ್ಟಡದಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ಕಾರ್ಮಿಕರು ಇಲ್ಲದಿ ದ್ದರೂ ನೋಂದಣಿ ಮಾಡಿಸು ವುದು ಕಡ್ಡಾಯ ವಾಗಿದೆ. ಸಂಸ್ಥೆಗ ಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿ ಕರಿಗೆ ಸೇವಾ ಭದ್ರತೆ ಒದಗಿಸು ವುದು, ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಕಾನೂನು ಬದ್ಧ ಸೌಲಭ್ಯ ಒದಗಿಸುವುದು ಕಾಯ್ದೆ ಯ ಉದ್ದೇಶ ಆಗಿದೆ ಎಂದರು.
ಎಲ್ಲ ಅಂಗಡಿ ಮಾಲೀಕರು ಹಾಗೂ ವಾಣಿಜ್ಯ ಸಂಸ್ಥೆಗಳ ಮಾಲೀಕರು ಕಾರ್ಮಿಕ ಇಲಾಖೆ ಜಲತಾಣದಲ್ಲಿ ನೋಂದಣಿ ಮಾಡಿಸಿ ಮಾಹಿತಿ ದಾಖಲಿಸ ಬೇಕು. ಅಂಗಡಿ ವಿಳಾಸ ಹಾಗೂ ಮಾಲೀಕರ ಗುರುತೀನ ಚೀಟಿ ಸೇರಿ ಅಗತ್ಯ ದಾಖಲಾತಿ ಗಳೊಂ ದಿಗೆ ಆನ್ಲೈನ್ ಮೂಲಕ ಶುಲ್ಕ ಪಾವತಿಸಬಹುದು ಎಂದರು.
ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತ ನಾಡಿ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಕುರಿತು ಬಹುತೇಕ ಜನರಿಗೆ ಅರಿವಿಲ್ಲ. ಆದ್ದರಿಂದ ಕಾರ್ಮಿಕ ಇಲಾಖೆಯ ಕಾಯ್ದೆಯಡಿಯಲ್ಲಿ ಎಲ್ಲ ಅಂಗಡಿ ಮಾಲೀಕರು ಹಾಗೂ ವಾಣಿಜ್ಯ ಸಂಸ್ಥೆಗಳು ಕಾರ್ಮಿಕರ ಮಾಹಿತಿ ನೀಡಿ ನೋಂದಣಿ ಮಾಡಿಸಬೇಕು ಎಂದು ಹೇಳಿದರು.
ವಾಣಿಜ್ಯ ಸಂಘದ ಸಹ ಕಾರ್‍ಯದರ್ಶಿ ಜಿ.ವಿಜಯ ಕುಮಾ ರ್, ನಿರ್ದೇಶಕರಾದ ಪ್ರದೀಪ್ ಯಲಿ, ಕಾರ್ಮಿಕ ನೀರಿಕ್ಷಕರಾದ ಭೀಮೇಶ್, ಸುಖೀತಾ, ಕಾರ್ಮಿಕ ಅಧಿಕಾರಿ ಸುಮಾ ದೇವರಾಜ್, ಮಂಜುನಾಥ್, ಎನ್.ಎಸ್. ರಮೇಶ್, ಸುರೇಶ್ ಕುಮಾರ್, ವಿಜಯ ದಿನಕರ ಹಾಗೂ ವಾಣಿಜ್ಯ ಉದ್ಯಮಿಗಳು ಉಪಸ್ಥಿತರಿದ್ದರು.