ಕುಕನೂರು ಬಂದ್: ಉತ್ತಮ ಪ್ರತಿಕ್ರಿಯೆ
ಕುಕನೂರು:ಪಟ್ಟಣದಲ್ಲಿ ತಾಲೂಕ ಆಡಳಿತ ಕಾರ್‍ಯಾಲಯ, ಕ್ರೀಡಾಂಗಣ, ನ್ಯಾಯಾಲಯಗಳ ಸಂಕೀರ್ಣ ಹಾಗೂ ಬುದ್ಧ ಬಸವ ಅಂಬೇಡ್ಕರ್ ಭವನಗಳನ್ನು ಪಟ್ಟಣ ದಲ್ಲಿರುವ ಸರ್ಕಾರಿ ಜಗದ ಲ್ಲಿಯೇ ನಿರ್ಮಿಸಬೇಕು ಎಂದು ಒತ್ತಾಯಿಸಿ ಕುಕನೂರು ನಾಗರಿಕ ವೇದಿಕೆ ಹಾಗೂ ವಿವಿಧ ಸಂಘಟನೆ ಗಳಿಂದ ಅ.೧೧ ರ ಬುಧವಾರ ಕುಕುನೂರು ಬಂದ್ ಯಶಸ್ವಿ ಯಾಗಿ ನೆರವೇರಿತು.
ಕುಕನೂರು ಬಂದ್ ನಿಮ್ ನಿತ್ಯ ಪ್ರದೇಶದಲ್ಲಿರುವ ರಾಗಪ ಜ್ಜನ ಮಠದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಶಿರೂರು ವೀರಭದ್ರಪ್ಪ ವೃತ್ತದ ವರೆಗೆ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಶಾಂತಿಯುತ ಮೆರವಣಿಗೆ ಜರುಗಿಸಿ ರಕ್ತದಲ್ಲಿ ಕೆಲಸ ಸಮಯ ಧರಣಿ ನಡೆಸಲಾ ಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದಯ್ಯ ಕಳ್ಳಿಮಠ ಪಟ್ಟಣದ ವ್ಯಾಪ್ತಿಯಲ್ಲಿಯೇ ಎ ಕಾರ್ಯಾಲಯಗಳ ಕಟ್ಟಡ ನಿರ್ಮಿಸಬೇಕು. ಕೆಲ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಹಲವರಿಂದ ಆಕ್ಷೇಪಣೆ ವ್ಯಕ್ತವಾಗುತ್ತಿದ್ದು ಇದರಿಂದ ಪಟ್ಟಣದಿಂದ ಹೊರಹೊಲೆಯದಲ್ಲಿ ಕಚೇರಿಗಳ ನಿರ್ಮಾಣದ ರೂಪರೇಷೆ ರಚನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದ್ದು ಯಾವುದೇ ಕಾರಣಕ್ಕೂ ಪಟ್ಟಣದಿಂದ ಹೊರ ಹೋಗದೆ ಪಟ್ಟಣ ಪ್ರದೇಶದಲ್ಲಿರುವ ಸರ್ಕಾ ರಿ ಜಗಗಳಲ್ಲಿ ಸರ್ಕಾರಿ ಕಾರ್ಯಾ ಲಯಗಳ ನಿರ್ಮಿಸಬೇಕೆಂದು ಆಗ್ರಹ ಪಡಿಸಿದರು.
ದಲಿತ ಯುವ ಮುಖಂಡ ರಾಘು ಕಾತರಕಿ ಮಾತನಾಡಿ ತಹಸಿಲ್ದಾರರ ಕಾರ್ಯಾಲಯ ಬುದ್ಧ ಬಸವ ಅಂಬೇಡ್ಕರ್ ಭವನ, ಕ್ರೀಡಾಂಗಣ ಹಾಗೂ ನ್ಯಾಯಾಲ ಯಗಳ ಸಂಕಿರಣ ಯಾವುದೇ ಕಾರಣಕ್ಕೂ ಪಟ್ಟಣ ಪ್ರದೇಶದಿಂದ ಹೊರ ಹೋಗಬಾರದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದ್ದು ಪಟ್ಟಣ ಪ್ರದೇಶದಲ್ಲಿ ಸರ್ಕಾರಿ ಜಗ ಎಷ್ಟು ಇದೆ ಎಂಬುದನ್ನು ಜಿಡಳಿತದ ಮುಖಾಂತರ ಮನವರಿಕೆ ಮಾಡಿ ಕೊಂಡು ಪಟ್ಟಣದಲ್ಲಿಯೇ ಕಟ್ಟಡ ಗಳ ನಿರ್ಮಾಣವಾಗಬೇಕು ಎಂ ದರು .
ನೂರುದ್ದೀನ್ ಸಾಬ್ ಗುಡಿ ಹಿಂದಲ್ ಮನವಿ ಪತ್ರವನ್ನು ಓದಿ ತಹಸೀಲ್ದಾರರಾದ ಪ್ರಾಣೇಶ್ ಹೆಚ್ ಅವರಿಗ ನೀಡಲಾಯಿತು. ಮನವಿ ಸ್ವೀಕರಿಸಿದ ತಹಸಿಲ್ದಾರರು ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಧಿಕಾರಿಗಳ ಮುಖ್ಯನ ಸರಕಾರಕ್ಕೆ ರವಾನಿಸಲಾಗುವುದು ಎಂದು ಹೇಳಿದರು.
ಕುಕನೂರು ಬಂದ್ ವೇಳೆ ಯಲ್ಲಿ ಸಾರಿಗೆ ವ್ಯವಸ್ಥೆ ಔಷಧ ಅಂಗಡಿ ಹಾಲು ವಿತರಣಾ ಕೇಂದ್ರ ಗಳು ಎಂದಿನಂತೆ ಕಾರ್ಯನಿ ರ್ವಹಿಸಿದವು ಈ ಬಂದ್ ನಲ್ಲಿ ಕುಕ ನೂರು ತಾಲೂಕಿನ ನಾಗರೀಕರು ಹಾಗೂ ವರ್ತಕರ ಸಂಘ ಕುಕ ನೂರು, ಕಿರಾಣಿ ವರ್ತಕರ ಸಂಘ ಕುಕನೂರು, ಕುಕನೂರು ವರ್ತ ಕರ ಕ್ಷೇಮಾಭಿವೃದ್ಧಿ ಸಂಘ, ಕುಕನೂರು ಹಮಾಲರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಕನೂರು,ಭೀಮ್ ಆರ್ಮಿ ಕುಕನೂರು, ನ್ಯಾಯ ವಾದಿಗಳ ಸಂಘ ಕುಕನೂರು, ಕಟ್ಟಡ ಕಾರ್ಮಿಕರ ಸಂಘ ಕುಕ ನೂರು, ಬಾರ್ ಬೆಂಡಿಂಗ ಕಾರ್ಮಿ ಕರ ಸಂಘ ಕುಕನೂರು, ಕರ್ನಾಟಕ ರಕ್ಷಣಾ ವೇದಿಕೆ ಕುಕನೂರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕುಕನೂರು, ವಿವಿಧ ಗ್ಯಾರೇಜ್ ಒಕ್ಕೂಟ ಕುಕನೂರು,ಮಾಂಸ ವ್ಯಾಪಾರಿಗಳ ಸಂಘ ಕುಕನೂರು, ಕರ್ನಾಟಕ ಚಾಲಕರ ಒಕ್ಕೂಟ ಕುಕನೂರು, ಬೀದಿ ಬದಿ ವ್ಯಾಪಾರಸ್ಥರ ಸಂಘ ಕುಕನೂರು ಹಾಗೂ ವಿವಿಧ ಸಂಘ ಸಂಸ್ಥೆಗಳು, ಪ್ರಮುಖರಾದ ರವಿ ನಾಲವಾಡ, ರಾಮಣ್ಣ ಭಜಂತ್ರಿ, ವೀರಯ್ಯ ತೊಂಟದಾರ್ಯಮಠ, ಸಾವಿತ್ರಿ ತಗ್ಗಿನಮನಿ, ಖಾಷಿಂ ಸಾಬ್ ತಾಳಕಲ್, ನೂರ್ ಅಹ ಮದ್ ಗುಡಿಹಿಂದಲ್, ಸಂಗ ಮೇಶ ಗುತ್ತಿ,ಚಂದ್ರು ದೊಡ್ಡ ಮನಿ, ರೈತ ಮುಖಂಡರ ಅಂದಪ್ಪ ಹುರಳಿ, ನಿಂಗಪ್ಪ ಗೊರ್ಲೆಕೊಪ್ಪ, ಶರಣಪ್ಪ ಛಲವಾದಿ, ಯಮ ನೂರಪ್ಪ ವಡ್ಡರ್ ಮತ್ತು ಕುಕನೂರಿನ ಸಮಸ್ತ ನಾಗರಿಕರು ಭಾಗವಹಿಸಿದ್ದರು.