ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ನಗರದ ಪ್ರತಿಷ್ಠಿತ ಮೈತ್ರಿ ಜ್ಯುವೆಲ್ಸ್‌ನಿಂದ ಸೈಕಲ್ ಸಾಹಸಿ ಗುರ್ರಮ್‌ಗೆ ಅಭಿನಂದನೆ

Share Below Link

ಶಿವಮೊಗ್ಗ: ಪರಿಸರ ಉಳಿ ಸಲು ಸೈಕಲ್ ಪಯಣ ಮಾಡುತ್ತಿದ್ದೇನೆ. ಗಿನ್ನೀಸ್ ದಾಖಲೆ ನಿರೀಕ್ಷೆಯಲ್ಲಿದ್ದೇನೆ ಎಂದು ಗುರ್ರಮ್ ಚೈತನ್ಯ ಹೇಳಿದರು.
ಅವರು ಮೈತ್ರಿ ಮೈ ಜುವೆಲ್ಸ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ಲಾಸ್ಟಿಕ್‌ಮುಕ್ತ ಭಾರತ ಮಾಡುವ ಉದ್ದೇಶದಿಂದ ಜಗೃತಿ ಮೂಡಿಸಲು ಸೈಕಲ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದೇನೆ. ಈ ಮೂಲಕ ಗಿನ್ನೆಸ್ ದಾಖಲೆ ಮಾಡ ಲು ಮುಂದಾಗಿದ್ದೇನೆ ಎಂದರು.
ಈಗಾಗಲೇ, ನಾನು ೧೫೬ ದಿನಗಳನ್ನು ಸೈಕಲ್ ಸವಾರಿ ಮೂ ಲಕ ಪೂರೈಸಿದ್ದೇನೆ. ಈ ಮೂಲಕ ೧೦ ಸಾವಿರ ಕಿ.ಮೀ. ಪೂರೈಸಿ ದ್ದೇನೆ. ಇನ್ನೂ ೪೦ ಸಾವಿರ ಕಿ.ಮೀ. ಕ್ರಮಿಸುವ ಗುರಿಯನ್ನು ಹೊಂದಿ ದ್ದು, ಸೈಕಲ್ ಮೂಲಕ ಇಡೀ ಭಾರ ತದಲ್ಲಿ ಪರಿಸರ ಮತ್ತು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಜಗೃತಿ ಮೂಡಿಸುತ್ತಿದ್ದೆನೆ ಎಂದರು.
ನಾನು ಹೋದಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನ ರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನನ್ನ ಉದ್ದೇಶವನ್ನು ಕೊಂಡಾಡುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ, ನನಗೆ ಅತೀವ ಸಂತೋಷವಾಗುತ್ತಿದೆ. ಇನ್ನೂ ೪೦ ಸಾವಿರ ಕಿ.ಮೀ. ಕ್ರಮಿಸುವ ಗುರಿ ಜೊತೆಗೆ, ಜನರಲ್ಲಿ ಜಗೃತಿ ಮೂ ಡಿಸುವ ಅಭಿಲಾಷೆ ಹೊಂದಿದ್ದೇನೆ ಎಂದರು.ಈ ಸಂದರ್ಭದಲ್ಲಿ ಮೈತ್ರಿ ಮೈ ಜುವೆಲ್ಸ್ ಸಂಸ್ಥೆ ಸಿಇಓ ಸೆಂಥಿಲ್ ವೇಲನ್, ಎಂ. ಶಿವಕು ಮಾರ್, ರಾಧಿಕಾ ಜಗದೀಶ್, ದತ್ತಾಕುಮಾರ್, ಜಿ. ವಿಜಯ್ ಕುಮಾರ್, ಬದ್ರಿನಾಥ್, ರವಿ ಇದ್ದರು.