ಫೆ.14ರ ನಾಳೆ ಕೃಷ್ಣ-ಬಲರಾಮ ರಥಯಾತ್ರೆ…
ಶಿವಮೊಗ್ಗ : ನಗರಕ್ಕೆ ಸಮೀಪದೆ ಬಿದರೆಯಲ್ಲಿರುವ ಅಂತರ ರಾಷ್ಟ್ರೀಯ ಕೃಷ್ಣಪ್ರಜ ಸಂಘ ಮತ್ತು ಗಾಂಧಿನಗರ ನಿವಾಸಿಗಳ ಸಂಘ ಹಾಗೂ ಗಾಂಧಿನಗರ ಉದ್ಯಾನವನದ ಸದಸ್ಯರು ಇವರ ಆಶ್ರಯದಲ್ಲಿ ಫೆ.೧೪ರ ಬುಧವಾರ ಸಂಜೆ ೪.೩೦ಕ್ಕೆ ವಸಂತ ಪಂಚಮಿಯ ನಿಮಿತ್ತ ಕೃಷ್ಣ- ಬಲರಾಮ (ಗೌರನಿತಾಯ್) ರಥಯಾತ್ರೆಯನ್ನು ಗಾಂಧಿನಗರ ದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್‌ನ ಶೇಖರ ಚೈತನ್ಯದಾಸ್ ಮತ್ತು ಗಾಂಧಿನಗರ ನಿವಾಸಿಗಳ ಸಂಘದ ಮುಖಂಡ ರಾದ ಖಂಡೋಬರಾವ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಗಾಂಧಿನಗರ ಸರ್ಕಲ್‌ನಿಂದ ಪ್ರಾರಂಭವಾಗಿ ಗಾಂಧಿನಗರ ಎ ಮತ್ತು ಬಿ ಬ್ಲಾಕ್‌ನ ಎಲ್ಲಾ ರಸ್ತೆಗಳ ಮುಖಾಂತರವಾಗಿ ಗಾಂಧಿನಗರ ಉದ್ಯಾನವನಕ್ಕೆ ತಲುಪುವುದು. ರಥಯಾತ್ರೆ ನಂತರ ಉದ್ಯಾನವನ ದಲ್ಲಿ ಸಂಜೆ ೭ಕ್ಕೆ ವಿಶೇಷ ಕಾರ್ಯ ಕ್ರಮಗಳು ನಡೆಯಲಿವೆ. ಹರಿ ನಾಮ ಸಂಕೀರ್ತನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ, ವೈಭವ ಆರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಗಾಂಧಿನಗರದ ಎಲ್ಲಾ ನಿವಾಸಿಗಳು ರಥಯಾತ್ರೆಯನ್ನು ಸ್ವಾಗತಿಸಬೇಕು ಮತ್ತು ಮನೆಯ ಮುಂದೆ ನೀರು ಹಾಕಿ ರಂಗೋಲಿ ಯನ್ನು ಬಿಡಿಸಬೇಕೆಂದು ಮನವಿ ಮಡಿದರು.
ಇಸ್ಕಾನ್ ಸಂಸ್ಥೆಯ ಗೋಪಾಲ ದಾಸ್ ಮಾತನಾಡಿ, ಇಸ್ಕಾನ್ ಸಂಸ್ಥೆಯು ವಿವಿಧ ದೇಶಗಳಲ್ಲಿ ಸಹ ರಥಯಾತೆಯನ್ನು ಶಾಂತಿಗಾಗಿ ನಡೆಸುತ್ತಿದೆ. ಕೃಷ್ಣ- ಬಲರಾಮರ ಯಾತ್ರೆಯ ಮೂಲಕ ಭಗವಂತನ ಪವಿತ್ರನಾಮವನ್ನು ಪ್ರಚಾರ ಮಾಡುತ್ತಿದೆ. ರಥಯಾತ್ರೆಯ ಉದ್ದೇಶ ವಿಶ್ವದೆಲ್ಲೆಡೆ ಶಾಂತಿಯನ್ನು ಪಸರಿಸುವುದಾಗಿದೆ ಎಂದರು.
ಇಸ್ಕಾನ್‌ನ ಗೌರಂಗದಾಸ್, ಗಾಂಧಿನಗರ ನಿವಾಸಿಗಳ ಸಂಘದ ಗೋಪಾಲಕೃಷ್ಣ ಗುಪ್ತಾ ಇದ್ದರು.