ಜಿಲ್ಲಾ ಸುದ್ದಿತಾಜಾ ಸುದ್ದಿ

ಆಡಳಿತವನ್ನು ಕನ್ನಡ ಭಾಷೆಯಲ್ಲೇ ನಡೆಯುವಂತೆ ಮಾಡಿದ ಕೀರ್ತಿ ನಾರಾಯಣರಿಗೆ ಸಲ್ಲಬೇಕು

Share Below Link

ಭದ್ರಾವತಿ: ಕನ್ನಡ ಪರ ಹೋರಾಟಗಾರ ಬೆಂಗಳೂರು ಮಹಾನಗರ ಪಾಲಿಯ ಮೇಯರ್ ಆಗಿ ಉತ್ತಮ ಸೇವೆ ಸಲ್ಲಿಸಿದ ಹಾಗು ಮಹಾನಗರ ಪಾಲಿಕೆಯಲ್ಲಿ ಎ ವ್ಯವಹಾರವು ಹಾಗು ಆಡಳಿತ ಭಾಷೆಯು ಕನ್ನಡದಲ್ಲಿ ನಡೆಯು ವಂತೆ ಮಾಡಿದ ಕೀರ್ತಿ ನಾಡೋಜ ಜಿ.ನಾರಾಯಣ ರವರಿಗೆ ಸಲ್ಲಬೇಕು ಎಂದು ಬೆಂಗಳೂರಿನ ಚಂದನ ದೂರದರ್ಶನದ ಕಾರ್ಯಕ್ರಮ ನಿರ್ವಾಹಕ ಎ.ಬಿ.ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ನ್ಯೂಟೌನ್‌ನ ಸರ್ಕಾರಿ ಪಪೂ ಬಾಲಕಿಯರ ಕಾಲೇಜ್ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ.ಜಿ. ನಾರಾಯಣ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾರಾಯಣರವರು ಕನ್ನಡ ನಾಡು ನುಡಿಗೆ ನಿರಂತರವಾದ ಹೋರಾಟ ಮಾಡುವ ಮೂಲಕ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಕನ್ನಡ ಪರ ಚಳುವಳಿಗಾರರಾಗಿ, ೯ ವರ್ಷಗಳ ಕಾಲ ಕಸಾಪ ಅಧ್ಯಕ್ಷರಾಗಿ, ದೆಹಲಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೆಡೆಸಿದ ಕೀರ್ತಿದಾತರಾಗಿ, ಕನ್ನಡ ಅಭಿವೃದ್ಧ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಾನವೀಯ ಮೌಲ್ಯಗಳಿಗೆ ಬದುಕಿದ ಇವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಹೆಮ್ಮೇಯ ಸಂಗತಿ ಎಂದರು.
ಕಸಾಪ ಜಿಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಿ.ಎಫ್.ಕುಟ್ರಿ ಅಧ್ಯಕ್ಷತೆ ವಹಿಸಿದ್ದರು. ಕಮಲಾಕರ್ ಸ್ವಾಗತಿಸಿದರು. ಹೆಚ್.ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು. ಕೋಡ್ಲು ಯಜ್ಞಯ್ಯ ಆಶಯ ಭಾಷಣ ಮಾಡಿದರು. ನಾಗೋಜಿ ರಾವ್ ವಂದನಾರ್ಪಣೆ ಮಾಡಿದರು.