ಆರ್‌ಎಸ್‌ಎಸ್‌ನ ಕೇಶವ ಹೆಗಡೆ ನಿಧನ
ಭದ್ರಾವತಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೇಶವ ಹೆಗಡೆ ಅವರು ಹೃಧಯಾಘಾತ ದಿಂದ ಬೆಂಗಳೂರಿನಲ್ಲಿ ನಿಧನರಾದರು.
ಮೃತರು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ, ತೆಲಂಗಾಣ ರಾಜ್ಯಗಳನ್ನೊಳಗೊಂಡ ಬೆಂಗಳೂರು ಕ್ಷೇತ್ರದ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕೇಶವ ಹೆಗಡೆಯವರು ಭದ್ರಾವತಿಯಲ್ಲಿ ನಡೆದ ಅನೇಕ ಹೋರಾಟಗಳು, ಗೋಹತ್ಯೆ ನಿಷೇಧ ಚಳುವಳಿ, ಮತಾಂತರ ಕಾರ್ಯ ಸೇರಿದಂತೆ ಇತರ ಹೋರಾಟಗಳಲ್ಲಿ ಅವರ ಸಕ್ರೀಯವಾಗಿ ಪಾತ್ರ ವಹಿಸಿದ್ದು ಕಾರ್ಯಕರ್ತರಿಗೆ ಪ್ರೇರಣೆಯಾಗಿತ್ತು. ಎಲ್ಲದಕ್ಕಿಂತ ಬಹು ಮುಖ್ಯವಾಗಿ ಇಲ್ಲಿಯ ಸಿzರೂಢ ನಗರದಲ್ಲಿನ ವಿಶ್ವ ಹಿಂದೂ ಕಾರ್ಯಾಲಯ ಧರ್ಮ ಶ್ರೀ ಸಭಾ ಭವನದ ನಿರ್ಮಾಣ ಕಾರ್ಯದಲ್ಲಿ ಸಂಪೂರ್ಣ ಮಾರ್ಗದರ್ಶನ ಮಾಡಿದ್ದರು. ನಿರಂತರವಾಗಿ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯದಲ್ಲಿ ಭಾಗವಹಿಸಿ ಹಿಂದೂ ಧರ್ಮದ ಅಚರಣೆಗಳು, ವಿವಾಹದ ಸಂಸ್ಕಾರ ಪದ್ದತಿ, ಕುಟುಂಬದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ್ದರು.
ಪರಿಷತ್ ನ ಪದಾಧಿಕಾರಿಗಳು ಧರ್ಮ ಶ್ರೀ ಸಭಾ ಭವನದಲ್ಲಿ ಸಭೆ ಸೇರಿ ಸಂತಾಪ ವ್ಯಕ್ತ ಪಡಿಸಿ ಮೃತರ ಸಂಘಟನಾ ಕಾರ್ಯವನ್ನು ಸ್ಮರಿಸಿದರು.