ಜಿಲ್ಲಾ ಸುದ್ದಿತಾಜಾ ಸುದ್ದಿ

ಮೋದಿ ಗ್ಯಾರೆಂಟಿಯಲ್ಲಿ ಕಸ್ತೂರಿ ರಂಗನ್ ವರದಿ ಸೇರಿದ್ದು ೪೭೫ ಕುಟುಂಬಗಳು ಆತಂಕ ಸ್ಥಿತಿಯಲ್ಲಿ…

Share Below Link

ಶಿವಮೊಗ್ಗ : ಮೋದಿ ಅವರ ಗ್ಯಾರಂಟಿಯಲ್ಲಿ ಡಾ. ಕಸ್ತೂರಿ ರಂಗನ್ ವರದಿ ಕೂಡ ಸೇರಿದ್ದು ಮಲೆನಾಡು ಭಾಗದ ಸುಮಾರು ೪೭೫ ಗ್ರಾಮಗಳ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಹೆಗ್ಡೆ ಸುದ್ದಿಗೋಷ್ಟಿಯಲ್ಲಿ ಹೇಳಿದರು.


೨೦೧೪ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಡಾ. ಕಸ್ತೂರಿ ರಂಗನ್ ವರದಿಯನ್ನು ಜರಿಗೊಳಿ ಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಮಾತು ಕೊಟ್ಟಿದ್ದರು. ಆದರೆ, ಈಗ ಅದು ಸುಳ್ಳಾಗಿದೆ. ಕಸ್ತೂರಿ ರಂಗನ್ ವರದಿ ಜರಿಗೆ ಕೇಂದ್ರ ನಿರ್ಧರಿಸಿದೆ ಎಂದರು.
ಕಸ್ತೂರಿ ರಂಗನ್ ವರದಿ ಜರಿಯಾದರೆ ಪಶ್ಚಿಮಘಟ್ಟದ ೧೦ ಜಿಗಳ ಸುಮಾರು ೧೫೭೨ ಗ್ರಾಮ ಗಳು ಪರಿಸರ ಸೂಕ್ಷ್ಮ ಪ್ರದೇಶ ವಾಗಲಿವೆ. ಇದರಲ್ಲಿ ಶಿವಮೊಗ್ಗ ಜಿಯೊಂದರಲ್ಲಿಯೇ ೪೭೫ ಗ್ರಾಮಗಳು ಸೇರಿಕೊಂಡಿವೆ. ಇದರಿಂದ ಈ ಗ್ರಾಮಗಳಲ್ಲಿ ಕಠಿಣ ನಿಯಂತ್ರಣ, ನಿಷೇಧ, ನಿಯಮ ಗಳಿಂದ ಜನರ ನೆಮ್ಮದಿಯ ಬದುಕು ಸಂಪೂರ್ಣ ನಾಶವಾ ಗಲಿದೆ ಎಂದರು.
೨೦೧೭ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಡಾ. ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸಂಪುಟ ನಿರ್ಣ ಯ ಕೈಗೊಂಡು ವರದಿ ಕೈಬಿಡು ವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರಿಗೆ ಮನವಿ ಮಾಡಿ ತ್ತು. ಆದರೆ, ಅಂದಿನ ಮೋದಿ ಸರ್ಕಾರ ಅದನ್ನು ತಿರಸ್ಕರಿಸಿತ್ತು ಎಂದರು.
ಹಾಗೆಯೇ ಯಡಿಯೂರಪ್ಪ ಸಂಸದರಗಿzಗ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಸಂಸತ್ ನಲ್ಲಿ ಏನೂ ಮಾತನಾಡಲಿಲ್ಲ. ವರದಿ ಅನುಷ್ಠಾನ ಕುರಿತಂತೆ ಕೇಂದ್ರ ಅರಣ್ಯ ಸಚಿವರು ಆಯೋ ಜಿಸಿದ್ದ ಎರಡು ಮಹತ್ವದ ಸಭೆಗ ಳಿಗೂ ಹೋಗಲಿಲ್ಲ. ಹೋಗಲಿ, ಸಂಸದ ಬಿ.ವೈ. ರಾಘವೇಂದ್ರ ಅವರು ಕೂಡ ಒಮ್ಮೆಯೂ ಈ ಬಗ್ಗೆ ಮಾತನಾ ಡಲಿಲ್ಲ. ಇದೆಲ್ಲ ದರ ಪರಿಣಾಮ ಇಂದು ಕಸ್ತೂರಿ ರಂಗನ್ ವರದಿ ಜರಿಗೆ ಬರಲಿದೆ. ಇದಕ್ಕೆ ಸಂಸದರು ಮತ್ತು ಬಿಜೆ ಪಿ ಸರ್ಕಾರವೇ ಕಾರಣ ಎಂದರು.
ಈ ವಿಷಯ ಗಮನದಲ್ಲಿಟ್ಟು ಕೊಂಡು ಈ ಬಾರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಡಾ. ಕಸ್ತೂರಿ ರಂಗನ್ ವರದಿ ಜರಿ ಯಾಗುವುದಿಲ್ಲ. ಮತ್ತು ಪಶ್ಚಿಮ ಘಟ್ಟಗಳ ಉಳಿವಿಗೆ ಈಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾಯ್ದೆಗಳೇ ಸಾಕು, ಹೊಸ ಕಾನೂ ನಿನ ಅವಶ್ಯಕತೆ ಇಲ್ಲ ಎಂದರು.
ಪ್ರಮುಖರಾದ ಇಕ್ಕೇರಿ ರಮೇಶ್, ವೈ.ಬಿ. ಚಂದ್ರಕಾಂತ್, ಡಾ.ಟಿ.ನೇತ್ರಾವತಿ, ಶಿ.ಜು. ಪಾಷಾ, ಜಿ. ಪದ್ಮನಾಭ್, ಸುರೇಶ್ ಕೋಟೇಕರ್, ನಿರಂಜನ್, ಬಿ. ಭಾರತಿ ಇದ್ದರು.