ತಾಜಾ ಸುದ್ದಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ದಾವಣಗೆರೆ ಪದಾಧಿಕಾರಿಗಳ ಆಯ್ಕೆ…

Share Below Link

ದಾವಣಗೆರೆ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆಯವರ ಆದೇಶದ ಮೇರೆಗೆ, ರಾಜ್ಯ ಉಪಾಧ್ಯಕ್ಷ ಡಾ. ಬಿ.ವಾಸುದೇವ್ ಇವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸ ಮಂದಿರದಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ಜಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ವಾಸುದೇವ್ ಮಾತನಾಡಿ, ನಮ್ಮ ಸಂಘಟನೆಗೆ ಎರಡು ವರ್ಷ ತುಂಬಿದೆ. ಸಂಘ ಟನೆಗೆ ರಾಜ್ಯದ ೩೦ ಜಿ ಗಳಿಂದ ಸದಸ್ಯರಾಗುವವರ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದೆ. ರಾಜಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಅವರು ರಾಜ್ಯದ ೩೦ ಜಿ ಕೇಂದ್ರಗಳಲ್ಲಿ ಈಗಾಗಲೆ ಸಂಚರಿಸಿ, ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಲ್ಲದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಿzರೆ ಎಂದರು.
ಪದಾಧಿಕಾರಿಗಳ ಆಯ್ಕೆ: ಗೌರವಾಧ್ಯಕ್ಷರಾಗಿ ರೇವಣ್ಣ ಬಳ್ಳಾರಿ, ಗೌರವ ಕಾರ್ಯಾಧ್ಯಕ್ಷರಾಗಿ ಎಂ ಮನು, ಗೌರವ ಸಲಹೆಗಾರರಾಗಿ ಅಬ್ದುಲ್ ಮಜೀದ್, ಜಿ ಅಧ್ಯಕ್ಷರಾಗಿ ನಾಗರಾಜ ಜಿ.ಹೆಚ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಅಭಕ್ಷಿ, ಖಜಂಚಿಯಾಗಿ ಎ.ಎಂ ಕೊಟ್ರಯ್ಯ, ಉಪಾಧ್ಯಕ್ಷರುಗಳಾಗಿ ಮನೋಜ್, ವೈ ಭಾಗ್ಯದೇವಿ, ಬಿ.ಸಿ ಪೂರ್ವಾಚಾರಿ, ಸೌಮ್ಯಾ ಕಾಕಡೆ, ಸಿದ್ದೇಶ್ ಕೋಟಿಹಾಳ್, ಸಹ ಕಾರ್ಯದರ್ಶಿಯಾಗಿ ಕರಿಯಪ್ಪ ಶಾಮನೂರು, ಮಾಲಾ, ಜಿ.ಪಿ. ಪ್ರಕಾಶ್, ಜಂಟಿ ಕಾರ್ಯದರ್ಶಿ ಗಳಾಗಿ ಶಶಿಕಲಾ ಜೆ, ಮೆಳ್ಳೆಕಟ್ಟೆ ಪರಶುರಾಮ್, ಸಂಚಾಲಕರಾಗಿ ಹೆಚ್.ಮಂಜುಳಾ, ಗೌಸ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಕಾನೂನು ಸಲಹೆಗಾರಾಗಿ ಶಿವಶಂಕರ್, ಗೌರವ ಸಲಹೆಗಾರರಾಗಿ ಸಂತೋಷ್ ದೊಡ್ಡಮನಿ, ಸಲಹೆಗಾರರಾಗಿ ಸುಧಿಂದ್ರಕುಮಾರ ಹಾಗೂ ನಿರ್ದೇಶಕರುಗಳಾಗಿ ಸಚ್ಚಿನ್ ವಿ ಪಟಕೆ, ಹೆಚ್. ವಿಜಯಕುಮಾರ್, ರಾಜು ಶಾಮನೂರು,ಡಿ. ಗಿರೀಶ್, ಸುಕನ್ಯ ಎಂ. ವಿ ನಾಗೇಂದ್ರಪ್ಪ, ಎಸ್.ಆರ್ ಕಣವಿ. ಜಿ.ಮಹಾಲಿಂಗಪ್ಪ, ಯೋಗೇಶ್, ಹೆಚ್. ವಿಜಯ್ ಕುಮಾರ್, ಪರಶುರಾಮ್ ನಡುಮನಿ, ರಾಜು, ವಿ. ನಾಗೇಂದ್ರಪ್ಪ ಹರಿಹರ, ಡಿ.ಗಿರೀಶ್ ಚನ್ನಗಿರಿ, ಶೇಕ್ ಮಹಬೂಬ್, ರನ್ನು ಆಯ್ಕೆಮಾಡಲಾಯಿತು.