ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು: ಪ್ರೊ. ಎಂ.ಬಿ.ನಟರಾಜ್

Share Below Link

ಶಿವಮೊಗ್ಗ: ಕರ್ನಾಟಕ ಏಕೀ ಕರಣ ಚಳವಳಿಯ ಮಹತ್ತರ ಪಾತ್ರ ವಹಿಸಿದ್ದ ಆಲೂರು ವೆಂಕ ಟರಾಯರು ಕರ್ನಾಟಕ ಪುರೋ ಹಿತ ಎಂದೇ ಪ್ರಸಿದ್ಧರು. ಕನ್ನಡಿಗ ರನ್ನು ಜಗೃತಗೊಳಿಸಲು ನಿರಂತರ ವಾಗಿ ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದರು ಎಂದು ಹಿರಿಯ ಸಾಹಿತಿ ಪ್ರೊ. ಎಂ.ಬಿ.ನಟರಾಜ್ ಹೇಳಿದರು.
ಶಿವಮೊಗ್ಗ ನಗರದ ಜೆ ಎಚ್ ಪಟೇಲ್ ಬಡಾವಣೆಯ ಸಹಕಾರಿ ನಗರದಲ್ಲಿ ಸಮಾನ ಮನಸ್ಕರ ಬಳಗದ ವತಿಯಿಂದ ಆಯೋಜಿ ಸಿದ್ದ ಆಲೂರು ವೆಂಕಟರಾಯರ ಜನ್ಮದಿನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಆಲೂರು ವೆಂಕಟರಾಯರು ವ್ಯಕ್ತಿ ಮತ್ತು ಸಾಧನೆ ಕುರಿತು ಮಾತನಾಡಿದರು.
ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿ ದರು. ಸಾಮಾಜಿಕ ಚಟುವಟಿಕೆ ಗಳಲ್ಲಿ ಸದಾ ಮುಂಚೂಣಿಯಲ್ಲಿ ರುತ್ತಿದ್ದ ವೆಂಕಟರಾರು ಸಾಹಿತ್ಯ, ಬರವಣಿಗೆಯಲ್ಲಿ ತೊಡಗಿಸಿಕೊಂ ಡಿ ಕೃತಿ ರಚಿಸಿದರು. ವಿವಿಧ ಪತ್ರಿ ಕೆಗಳಲ್ಲಿ ಸಂಪಾದಕತ್ವ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಿದರು. ೨ ಬಾರಿ ಗ್ರಂಥಕರ್ತರ ಸಮಾವೇಶ ನಡೆಸಿದರು. ಆಲೂರು ವೆಂಕಟ ರಾಯರು ಮಾಡಿರುವ ಕಾರ್ಯ ಗಳನ್ನು ಎಂದಿಗೂ ಮರೆಯು ವಂತಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಕಾಂತೇಶ್ ಕದರಮಂಡಲಗಿ ಮಾತನಾಡಿ, ಒಮ್ಮೆ ಆಲೂರು ವೆಂಕಟರಾ ಯರು, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿ ಯಲ್ಲಿ ಯಾರ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲುಬಂಡೆ ಎಂದಿದ್ದರು. ಆಲೂರು ವೆಂಕಟರಾ ಯರ ಕೊಡುಗೆ ಅಪಾರ ಎಂದು ಹೇಳಿದರು.
ಸಮಾನ ಮನಸ್ಕರ ಬಳಗದ ವತಿಯಿಂದ ಮುಂದೆಯೂ ನಿರಂ ತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಆಸಕ್ತಿ ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸಮಾನ ಮನಸ್ಕರ ಬಳಗದ ವತಿಯಿಂದ ಪ್ರವೀಣ ಜವಳಿ ಅವರ ನಿವಾಸದಲ್ಲಿ ಮೊದಲ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು. ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಬಳಗದ ಸದಸ್ಯರು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಕರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಸಮಾನ ಮನಸ್ಕರ ಬಳಗದ ಸದಸ್ಯರಾದ ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಪ್ರವೀಣ್ ಜವಳಿ, ಶಿವಕುಮಾರ್. ಎಂ .ಎಲ್., ಅರಳೇಹಳ್ಳಿ ಅಣ್ಣಪ್ಪ, ಸತೀಶ್ ಕುಮಾರ್ ಕೆ., ಪಾಲಾ ಕ್ಷಪ್ಪ.ಇ., ಎಂ.ಬಿ.ಸಾವಿತ್ರಮ್ಮ, ಬಿ.ನಾಗರಾಜ, ಜಿ.ಎಸ್.ಅನಂತ್, ಶಿವಮೂರ್ತಿ, ಬಿ.ಪಾಲಾಕ್ಷಪ್ಪ, ಬಸವನಗೌಡ, ಅಣ್ಣಪ್ಪ ಒಂಟಿಮಾಳಿಗಿ ಮತ್ತಿತರರು ಉಪಸ್ಥಿತರಿದ್ದರು.