ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ನಾಟಕ ಚಿತ್ಪಾವನ ವೃತ್ತಾಂತ ಗ್ರಂಥ ಬಿಡುಗಡೆ…

Share Below Link

ಶಿವಮೊಗ್ಗ : ನಗರದ ಚಿತ್ಪಾ ವನ ಸಮಾಜದ ಹಿರಿಯರಾದ ನಾಗರಾಜ ಗೋರೆ ಯವರ ಸ್ವಗೃಹದಲ್ಲಿ ಇತ್ತೀಚೆಗೆ ಕರ್ನಾಟಕ ಚಿತ್ಪಾವನ ವೃತ್ತಾಂತ ಗ್ರಂಥ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಚಿತ್ರಭಾ ಪ್ರತಿಷ್ಠಾನದ ದಿವಾಕರ ಡೋಂಗ್ರೆಯವರು ಗ್ರಂಥದಲ್ಲಿರುವ ವಿಷಯಗಳನ್ನು ವಿವರಿಸಿ ಚಿತ್ಪಾವನಿ ಭಾಷೆ, ಸಂಸ್ಕೃತಿ, ಕರ್ನಾಟಕಕ್ಕೆ ಚಿತ್ಪಾವನ ಬ್ರಾಹ್ಮಣರು ವಲಸೆ ಬಂದ ಸಂದರ್ಭಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಸಮಾಜದ ಹಿರಿಯರಾದ ಸುಬ್ರಹ್ಮಣ್ಯ ಡೋಂಗ್ರೆ ಹಸೂಡಿ, ಶಂಕರ ಡೋಂಗ್ರೆ, ನಾಗೇಶ್ ಡೋಂಗ್ರೆ, ನಳಿನಿ ಗೋರೆ, ಅನ್ನಪೂರ್ಣ ಕೇಳ್ಕರ್, ಪೂಜ ರಾನಡೆ, ಸುನಂದಾ ಡೋಂಗ್ರೆ ಸೇರಿದಂತೆ ಹಲವರು ಉಪಸ್ಥಿತರಿ ದ್ದರು. ಗೋರೆ ಕುಟುಂಬದವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಕಾರ್ಯದರ್ಶಿ ಹೇಮಂತ್ ಕೇಳ್ಕರ್ ವಂದಿಸಿದರು.