ಕಬ್ಬಳ ಕ್ರಿಕೆಟ್ ಹಬ್ಬ ಸೀಸನ್-೧೦: ಫ್ರೆಂಡ್ಸ್ ಕ್ರಿಕೆಟರ್ಸ್ ಚಾಂಪಿಯನ್
ಚನ್ನಗಿರಿ : ತಾಲ್ಲೂಕಿನ ಕಬ್ಬಳ ಗ್ರಾಮದ ಕೆ.ಸಿ. ಹೆಚ್ ಕಮಿಟಿವತಿಯಿಂದ ಕಬ್ಬಳ ಕ್ರಿಕೆಟ್ ಹಬ್ಬ ಸೀಸನ್-೧೦ ಆಯೋಜಿಸಿತ್ತು. ೩ ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ ಒಟ್ಟು ೭ ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಕಬ್ಬಳ ಸ್ಟ್ರೈಕರ್ಸ್ ಹಾಗೂ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡಗಳು ಫೈನಲ್‌ಗೇರಿದ್ದವು.
ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಬ್ಬಳ ಸ್ಟ್ರೈಕರ್ಸ್ ತಂಡ ೫ ಓವರ್‌ಗಳಲ್ಲಿ ೩೭ ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನುಹತ್ತಿದ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ಕೇವಲ ೪.೨ ಓವರ್‌ಗಳಲ್ಲಿ ಜಯದ ನಗೆ ಬೀರಿತು. ಅಲ್ಲದೇ, ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರ ಹೊಮ್ಮುವ ಮೂಲಕ ಕುಣಿದು ಕುಪ್ಪಳಿಸಿತು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖಂಡರಾದ ಲಕ್ಷ್ಮಣ ನಾಯ್ಕ್, ಪ್ರಕಾಶ್ ನಾಯ್ಕ್, ಹಿರಿಯ ಆಟಗಾರರಾದ ಲೋಕೇಶ ಕೆ.ಸಿ, ಚೇತನ್ ದಾಗಿ, ಅವಿನಾಶ್ ಗೌಡ, ಸುಪ್ರೀತ್, ರೈತ ಸಂಘದ ಸಂತೋಷ್ ನಾಯ್ಕ್, ಹರೀಶ್ ಕೆ ಬಿ, ಪುನೀತ್ ಎ ತಂಡದ ಆಟಗಾರರು ಹಾಗೂ ಕ್ರೀಡಾ ಪ್ರೇಮಿಗಳು ಸೇರಿದಂತೆ ಇತರರು ಇದ್ದರು.