ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲಾ ತಂಡಕ್ಕೆ ಫುಟ್ಬಾಲ್ ಪ್ರಶಸ್ತಿ
ಧಾರವಾಡ: ನಗರದ ಮಾಳಮಡ್ಡಿ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲಾ ತಂಡ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಡಾ. ಸತೀಶ ಕನ್ನಯ್ಯ ಫುಟ್ಬಾಲ್ ಕ್ಲಬ್‌ಗಳ ಆಶ್ರಯದಲ್ಲಿ ನಡೆದ ಅಂತರ -ಶಾಲಾ ಫುಟ್ಬಾಲ್ ಪಂದ್ಯಾವಳಿ ಗೆದ್ದುಕೊಂಡಿದೆ.
ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲೆ ಜೆ.ಎಸ್.ಎಸ್. ಸಿಬಿಎಸ್ (ವಿದ್ಯಾಗಿರಿ) ಶಾಲಾ ತಂಡವನ್ನು ೧-೦ ಗೋಲಿನಿಂದ ಪರಾಭವಗೊಳಿಸಿತು. ಪಂದ್ಯದ ಏಕೈಕ ಗೋಲನ್ನು ಗಣಪತಿ ಭಟ್ ೯ನೇ ನಿಮಿಷದಲ್ಲಿ ದಾಖಲಿಸಿದರು.
ಇದಕ್ಕೂ ಮೊದಲು ಸೆಮಿಫೈನಲ್ ಪಂದ್ಯದಲ್ಲಿ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲಾ ತಂಡ ನಾಯಕ ಗಣೇಶ ಮಠಪತಿ ೬ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಜೆಎಸ್‌ಎಸ್ ಪಬ್ಲಿಕ್ ಶಾಲೆ(ಕೆಲಗೇರಿ)ಯನ್ನು ಸೋಲಿಸಿದ್ದರೆ, ಜೆ.ಎಸ್.ಎಸ್. ಸಿಬಿಎಸ್(ವಿದ್ಯಾಗಿರಿ) ತಂಡ ಇಲ್ಲಿಯದೇ ಆದ ಸೇಂಟ್ ಜೋಸೆಫ್ಸ್ ಶಾಲೆಯನ್ನು ೧-೦ ಗೋಲಿನಿಂದ ಪರಾಭವ ಗೊಳಿಸಿತ್ತು. ಈ ಸಾಧನೆಗಾಗಿ ಕೆ.ಇ. ಬೋರ್ಡಿನ ಕಾಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯ ದರ್ಶಿ ಡಿ.ಎಸ್. ರಾಜಪುರೋ ಹಿತ, ಖಜಂಚಿ ಶ್ರೀನಿವಾಸ ಪರಾಂಡೆ, ಕ್ರೀಡಾಭಿವೃದ್ಧಿ ಅಧಿಕಾರಿ ವಸಂತ ಮುರ್ಡೇಶ್ವರ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಕಾಂತ ಹಣಮಂತಗಡ, ಪ್ರಾಂಶುಪಾಲ ಸ್ಮಿತಾ ಕುಲಕರ್ಣಿ, ದೈಹಿಕ ಶಿಕ್ಷಕರಾದ ರಾಮಚಂದ್ರ ಕಾತರಕಿ ಹಾಗೂ ಮಲ್ಲಮ್ಮಾ ಅಲ್ಲೂರ ಶಾಲಾ ಫುಟ್ಬಾಲ್ ತಂಡವನ್ನು ಅಭಿನಂದಿಸಿzರೆ.