ಜಿಲ್ಲಾ ಸುದ್ದಿತಾಜಾ ಸುದ್ದಿ

ಸರ್ಕಾರಿ ನೌಕರರಿಗೆ ಕೆ.ಸಿ.ಎಸ್.ಆರ್. ಎನುವುದು ಭಗವದ್ಗೀತೆ ಇದ್ದಂತೆ: ರಾಘವೇಂದ್ರ

Share Below Link

ಸಾಗರ : ಸರ್ಕಾರಿ ನೌಕರರಿಗೆ ಕೆ.ಸಿ.ಎಸ್.ಆರ್. ಎನುವುದು ಭಗವದ್ಗೀತೆ ಇದ್ದಂತೆ. ಪ್ರತಿಯೊಬ್ಬ ನೌಕರನೂ ಕೆ.ಎಸ್.ಆರ್.ಸಿ. ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಎಲ್.ಬಿ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಟಿ.ಎಸ್. ರಾಘವೇಂದ್ರ ತಿಳಿಸಿದರು.
ಇಲ್ಲಿನ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಿವೃತ್ತ ನೌಕರರ ಸಂಘ ಎಸ್. ವೆಂಕಟರಮಣ ಆಚಾರ್ ಹೆಸರಿನಲ್ಲಿ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ಅವರು ಕೆ.ಸಿ. ಎಸ್.ಆರ್‌ಅಡಿ ನೌಕರರ ಹಿತರ ಕ್ಷಣೆ ವಿಷಯ ಕುರಿತು ಉಪನ್ಯಾಸ ನೀಡುತ್ತಿದ್ದರು.
ಸರ್ಕಾರಿ ನೌಕರ ಕೆ.ಸಿ.ಎಸ್. ಆರ್. ನಿಯಮ ಸರಿಯಾಗಿ ಅರ್ಥ ಮಾಡಿಕೊಂಡರೆ ವೃತ್ತಿಯಲ್ಲಿ ಯಾವುದೇ ಸಮಸ್ಯೆ ಉಂಟಾಗುವು ದಿಲ್ಲ. ವೆಂಕಟರಮಣ ಆಚಾರ್ ಅಂತಹ ವ್ಯಕ್ತಿ ಸರ್ಕಾರಿ ನೌಕರರಾಗಿ ಶ್ರೇಷ್ಟವಾಗಿ ಸೇವೆ ಸಲ್ಲಿಸಿzರೆ. ನಿವೃತ್ತಿ ನಂತರವೂ ಕೆ.ಸಿ.ಎಸ್. ಆರ್. ನಿಯಮದಡಿ ಅನೇಕ ನೌಕರರ ಹಿತರಕ್ಷಣೆ ಮಾಡಿzರೆ. ನೌಕರರು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ ಇಂತಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ನೌಕರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
ನಿವೃತ್ತ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾ.ಸ.ನಂಜುಂಡಸ್ವಾಮಿ ಮಾತ ನಾಡಿ, ವೆಂಕಟರಮಣ ಆಚಾರ್ ಅವರ ಬದುಕು ನಮಗೆಲ್ಲ ಮಾರ್ಗದರ್ಶನವಾಗುವಂತಹದ್ದು. ನೂರಾರು ಜನ ನೌಕರರಿಗೆ ಅವರು ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಸಂಕಷ್ಟದಿಂದ ಪಾರು ಮಾಡಿzರೆ ಎಂದು ತಿಳಿಸಿದರು.
ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಸ್.ಬಸವರಾಜ್ ವಂದಿಸಿದರು. ಸತ್ಯನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.