ತಾಜಾ ಸುದ್ದಿ

ಜು.೨೧:ಯೋಗಾಚಾರ್ಯ ಡಾ.ಸಿ.ವಿ. ರುದ್ರಾರಾಧ್ಯರ ಕುರಿತ ಅಭಿನಂದನಾ ಗ್ರಂಥ ಬಿಡುಗಡೆ…

Share Below Link

ಶಿವಮೊಗ್ಗ: ವಿನೋಬನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಜು.೨೧ರ ಸಂಜೆ ೪.೩೦ಕ್ಕೆ ಗುರುಪೂರ್ಣಿಮೆಯಂದು ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಯೋಗಾಚಾರ್ಯ ಡಾ.ಸಿ.ವಿ. ರುದ್ರಾರಾಧ್ಯರವರ ಕುರಿತ ಶಿವಯೋಗ ಅಭಿನಂದನಾ ಗ್ರಂಥವನ್ನು ಬಿಡುಗಡೆ ಗೊಳಿಸಿ ಸಮರ್ಪಿಸ ಲಾಗುವುದು ಎಂದು ಕೇಂದ್ರದ ಕಾರ್ಯದರ್ಶಿ ಎಸ್.ಎಸ್. ಜ್ಯೋತಿಪ್ರಕಾಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಡಾ.ಸಿ.ವಿ. ರುದ್ರಾರಾಧ್ಯರು ತಮ್ಮ ೮೦ ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮತ್ತು ಶಿಷ್ಯ ವೃಂದದವರು ಗುರುಗಳೊಂದಿಗೆ ತಮ್ಮ ಅನುಭವದ ಮಾತುಗಳು ಮತ್ತು ನಾಡಿನ ಸಾಧಕರ ಆಹ್ವಾನಿತ ಲೇಖನ ಗಳನ್ನೊಳಗೊಂಡ ಈ ಗ್ರಂಥ ಅಂದು ಬಿಡುಗಡೆಯಾಗಲಿದೆ ಎಂದರು.
ಕೇಂದ್ರದ ಮಹಾಪೋಷಕರಾದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮತ್ತು ಹುಬ್ಬಳ್ಳಿಯ ಮೂರು ಸಾವಿರ ಮಠ ಮಹಾಸಂಸ್ಥಾನದ ಶ್ರೀ ಗುರು ಸಿದ್ದರಾಜ ಯೋಗಿಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಗ್ರಂಥವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿ ದ್ದಾರೆ. ಕೇಂದ್ರದ ಅಧ್ಯಕ್ಷರು ಹಾಗೂ ಕೈಗಾರಿಕೋದಮಿ ಬಿ.ಸಿ. ನಂಜುಂಡಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಸಿ.ವಿ. ರುದ್ರಾರಾಧ್ಯರು ಶಿವಮೊಗ್ಗ ಜನತೆಯ ಸಹಕಾರದಿಂದ ಶಿವಮೊಗ್ಗದಲ್ಲಿ ಯೋಗಕ್ಕಾಗಿ ಸೀಮಿತವಾದ ಭವ್ಯವಾದ ಕಟ್ಟಡ, ಪಿರಮಿಡ್ ಧ್ಯಾನ ಕೇಂದ್ರ, ಪತಂಜಲಿ ಮತ್ತು ಆದಿಯೋಗಿ ಧ್ಯಾನಸ್ಥ ಶಿವನಮೂರ್ತಿ ಸುಂದರವಾದ ಹಸಿರು ಪರಿಸರದಲ್ಲಿ ನಿರ್ಮಿಸಿರುವುದು ದೊಡ್ಡ ಸಾಧನೆಯಾಗಿದೆ ಎಂದರು.
ನಗರದ ವಿವಿಧೆಡೆ ಬಡಾವಣೆಗಳಲ್ಲಿ ಇವರು ಆರಂಭಿಸಿದ ಉಚಿತ ಯೋಗ ತರಬೇತಿ ಮತ್ತು ಶಾಖೆಗಳ ಮೂಲಕ ಯೋಗವು ಮನೆ ಮನೆಗೆ ತಲುಪಿಸಿ ಶಿವಮೊಗ್ಗ ನಗರವನ್ನು ಶಿವಯೋಗ ನಗರವನ್ನಾಗಿಸಿದ್ದಾರೆ. ಇವರಿಂದ ಯೋಗ ಶಿಕ್ಷಣವನ್ನು ಪಡೆದ ಅಭಿಮಾನಿಗಳು ಮತ್ತು ಶಿಷ್ಯ ವೃಂದದವರು ಗುರುಗಳಿಗೆ ಕಿಂಚಿತ್ ಋಣವನ್ನು ತೀರಿಸುವ ಉದ್ದೇಶದಿಂದ ಹಲವಾರು ಲೇಖನಗಳನ್ನೊಳಗೊಂಡ ಗ್ರಂಥವನ್ನು ಸಮರ್ಪಿಸಲಿದ್ದಾರೆ ಎಂದರು.
ಪ್ರೊ. ಎ.ಎಸ್. ಚಂದ್ರಶೇಖರ್, ಡಾ. ಪದ್ಮನಾಭ ಅಡಿಗ, ಜಿ. ವಿಜಯ ಕುಮಾರ್, ಮಂಜುಳ, ಶೀಲಸುರೇಶ್, ಅನುರಾಧ, ಗಾಯಿತ್ರಿ ಸಜ್ಜನ್ ಇನ್ನಿತರರು ಉಪಸ್ಥಿತರಿದ್ದರು.