ಜು.೨೧: ಕೃಷಿ ವಿವಿ 8ನೇ ಘಟಿಕೋತ್ಸವ…
ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟ ಗಾರಿಕೆ ವಿಜನಗಳ ವಿವಿಯ ೮ನೇ ಘಟಿಕೋತ್ಸವ ಸಮಾರಂಭ ವನ್ನು ಜು.೨೧ರ ಸಂಜೆ ೪ ಗಂಟೆಗೆ ಇರುವಕ್ಕಿಯ ವಿವಿ ಮುಖ್ಯ ಆವರ ಣದಲ್ಲಿ ಆಯೋಜಿಸಿದೆ ಎಂದು ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ರಾಜ್ಯದ ಗೌರವಾನ್ವಿತ ರಾಜ್ಯ ಪಾಲರು ಹಾಗೂ ವಿಶ್ವವಿದ್ಯಾಲ ಯದ ಕುಲಾದಿಪತಿ ಗಳಾದ ಥಾವರ್‌ಚಂದ್ ಗೆಹ್ಲೋಟ್ ಇವರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ಸುಗ್ಗಿ ಸಂಭ್ರಮ ಜರುಗಲಿದ್ದು, ಪದವೀಧರರಿಗೆ ಪದವಿ ಪ್ರಧಾನ ಮಾಡುವರು. ಕೃಷಿ ಸಚಿವರು ಹಾಗೂ ವಿವಿ ಸಹ- ಕುಲಾದಿಪತಿ ಗಳಾದ ಎನ್. ಚಲುವರಾಯ ಸ್ವಾಮಿ ಗೌರವ ಉಪಸ್ಥಿತಿ ಇರಲಿದೆ. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರು ಘಟಿಕೋತ್ಸವ ಭಾಷಣ ಮಾಡುವರು ಎಂದರು.
೩೭ ಚಿನ್ನದ ಪದಕ ಪ್ರದಾನ :
೮ನೇ ಘಟಿಕೋತ್ಸವದಲ್ಲಿ ೪೦೯ ವಿದ್ಯಾರ್ಥಿಗಳು ಕೃಷಿ, ತೋಟ ಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ, ೧೦೧ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ ೨೩ ವಿದ್ಯಾರ್ಥಿಗಳು ಪಿ.ಹೆಚ್‌ಡಿ, ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ ೮ ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಇವರಿಗೆ ಒಟ್ಟು ೧೫ ಚಿನ್ನದ ಪದಕಗಳನ್ನು ನೀಡಲಾಗುವುದು. ೧೪ ಎಂ.ಎಸ್ಸಿ ವಿದ್ಯಾರ್ಥಿಗಳು, ೭ ಪಿಹೆಚ್‌ಡಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದು ಒಟ್ಟು ೩೭ ಚಿನ್ನದ ಪದಗಳನ್ನು ನೀಡಲಾಗುವುದು.
ವಿವಿಯು ಈ ವರ್ಷ ಹಲ ವಾರು ವಿಶಿಷ್ಟ ಸಾಧನೆಗಳಿಗೆ ಸಾಕ್ಷಿ ಯಾಗಿದ್ದು, ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಯೋಜನೆ ಯಡಿ ದೇಶದ ಕೃಷಿ ವಿಶ್ವವಿದ್ಯಾಲಯಗ ಳಲ್ಲೇ ಮೊದಲ ಬಾರಿಗೆ ಐ.ಓ.ಟಿ ಸ್ಮಾರ್ಟ್ ಕೃಷಿ, ತೋಟಗಾರಿಕೆ, ಅರಣ್ಯ ವಿಷಯಗಳನ್ನು ಪ್ರಾಯೊ ಗಿಕ ಕಲಿಕೆ ಪ್ರಾರಂಭಿಸಿದ್ದು ೨೦ ವಿದ್ಯಾರ್ಥಿಗಳ ಮೊದಲ ತಂಡ ಇದನ್ನು ಪೂರ್ಣ ಗೊಳಿಸಿದೆ. ಕೃಷಿಯಲ್ಲಿ ಗಣಕ, ಡ್ರೋನ್ ಹಾಗೂ ರೋಬೋಟ್ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ ಮೊದಲ ಬಾರಿಗೆ ಪ್ರೋಗ್ರಾಮಿಂಗ್ ಫಾರ್ ಕೃಷಿ, ತೋಟಗಾರಿಕೆ, ಅರಣ್ಯ ಎಂಬ ವಿಷಯ ವನ್ನು ಅಳವಡಿ ಸಲಾಗಿದೆ ಎಂದರು.
ಪದವಿ ಹಂತದಲ್ಲಿ ಅಂತರ ರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ನಮ್ಮ ವಿದ್ಯಾರ್ಥಿ ಗಳನ್ನು ಕಳುಹಿಸಿ, ತರಬೇತಿಗೊಳಿಸುವ ವಿಶಿಷ್ಟವಾದ, ಅಂತರರಾಷ್ಟ್ರೀಯ ಶಿಕ್ಷಣ ಕ್ರಮ ವನ್ನು ಅಳವಡಿಸಿಕೊಳ್ಳಲಾಗಿದೆ. ಇದರಡಿ ನಾಲ್ಕು ವಿದ್ಯಾರ್ಥಿನಿ ಯರು ಅಮೆರಿಕಾದ ಕನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯಕ್ಕೆ ಅಧ್ಯ ಯನಕ್ಕಾಗಿ ಹೋಗಿ ಬಂದಿದ್ದಾರೆ. ಆರು ವಿದ್ಯಾರ್ಥಿ ಗಳು ಜರ್ಮನಿ ಯ ವಿಶ್ವವಿದ್ಯಾಲಯಕ್ಕೆ ಅಧ್ಯಯ ನಕ್ಕಾಗಿ ಹೋಗಿ ಬಂದಿರುವುದು ವಿಶೇಷ ಎಂದು ವಿವರಿಸಿದರು.
ಈ ಸಾಲಿನಲ್ಲಿ ಜೈವಿಕ ಶಿಲೀಂದ್ರ ನಾಶಕಗಳ ಉತ್ಪಾದನೆ ಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ೧೫ ಟನ್ ಉತ್ಪಾ ದಿಸಿ, ಮಾರಾಟ ಮಾಡಿ ರೂ. ೬.೫ ಲಕ್ಷ ನಿವ್ವಳ ಲಾಭಗಳಿಸಿದ್ದಾರೆ. ಪ್ರತಿ ವಿದ್ಯಾರ್ಥಿಯು ರೂ. ೨೦ ಸಾವಿರ ಆದಾಯ ಗಳಿಸಿರುವುದು ಹೆಮ್ಮೆ ಯ ವಿಚಾರ ಎಂದ ಅವರು, ೨೦೨೩ ರ ಜನವರಿ ೬ ರಿಂದ ೧೮ ರಂದು ತೋಟಗಾರಿಕೆ ಮಹಾವಿ ದ್ಯಾಲಯ, ಹಿರಿಯೂರಿನಲ್ಲಿ ಆಯೋಜಿಸಲಾಗಿದ್ದ ೮ನೇ ಅಂತರ ಮಹಾವಿದ್ಯಾಲಯಗಳ ಯುವಜ ನೋತ್ಸವ ಯುವ ಲಹರಿಯಲ್ಲಿ ಕೃಷಿ ಮಹಾವಿದ್ಯಾಲಯ, ಇರು ವಕ್ಕಿಯ ವಿದ್ಯಾರ್ಥಿಗಳು ಚಾಂಪಿ ಯನ್ ಆಗಿ ಹೊರಹೊಮ್ಮಿದ್ದಾರೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯ ದಲ್ಲಿ ನಡೆದ ೪ನೇ ಅಂತರ ವಿಶ್ವ ವಿದ್ಯಾಲಯದ ಆಗ್ನೇಯವಲಯ ಯುವ ಜನೋತ್ಸವ ದಲ್ಲಿ ವಿಶ್ವವಿ ದ್ಯಾಲಯದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ, ಬಹುಮಾನ ಪಡೆದಿರುತ್ತಾರೆ. ೨೦೨೦-೨೧ ನೇ ಸಾಲಿನ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯಡಿ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದಿದೆ ಎಂದರು.
ಹೊಸ ಭತ್ತದ ತಳಿ: ವಿಶ್ವವಿದ್ಯಾಲಯವು ಈ ವರ್ಷ ೩ ಭತ್ತದ ತಳಿಗಳನ್ನು ಬಿಡುಗಡೆ ಮಾಡಿದೆ. ವಲಯ ೭ಕ್ಕೆ ಸೂಕ್ತ ವಾದ ಅಧಿಕ ಇಳುವರಿ ಕೊಡುವ ಸಹ್ಯಾದ್ರಿ, ಸಿರಿ, ಗುಡ್ಡಗಾಡು ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಜಲಮುಕ್ತಿ ಹಾಗೂ ಕರಾವಳಿ ಭಾಗದ ಮಜಲು ಹಾಗೂ ಬೆಟ್ಟು ಗದ್ದೆಗಳಲ್ಲಿ ಮುಂಗಾರಿನಲ್ಲಿ ಬೆಳೆಯಬಹುದಾದ ಸಹ್ಯಾದ್ರಿ, ಸಪ್ತಮಿ ತಳಿಗಳು ಆ ಭಾಗದ ರೈತರಿಗೆ ಆಶಾಕಿರಣಗಳಾಗಿವೆ.
ತಳಿ ಅಭಿವೃದ್ಧಿ, ಬೆಳೆ ಉತ್ಪಾ ದನೆ, ಸಸ್ಯಸಂರಕ್ಷಣೆ, ಯಾಂತ್ರೀ ಕೃತ ಬೇಸಾಯ, ಮಲ್ಯವರ್ಧನೆ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ೧೩ ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಮತ್ತು ೧೫ ತಾಂತ್ರಿಕತೆಗಳನ್ನು ರೈತರ ಹೊಲದಲ್ಲಿ ಕ್ಷೇತ್ರ ಪ್ರಯೋಗ ಮಾಡಲು ಶಿಫಾರಸ್ಸು ಮಾಡ ಲಾಗಿದೆ.
ಪ್ರಸಕ್ತ ವರ್ಷದಲ್ಲಿ ೪೪ ಯೋಜನೆ ಗಳಿಗೆ ಇತರ ಧನ ಸಹಾಯ, ಸಂಸ್ಥೆಯಿಂದ ಸುಮಾ ರು ರೂ. ೧.೧೯ ಕೋಟಿ ಅನು ದಾನ ಬಂದಿರುತ್ತದೆ. ಆರ್‍ಕೆವಿವೈ ಅಡಿ ೨೧ ಸಂಶೋಧನಾ ಯೋಜ ನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರ್ನಾಟಕ ಸರರ್ಕಾರದ ಕಪೆಕ್ ನಿಂದ ವಿಶ್ವವಿದ್ಯಾಲಯಕ್ಕೆ ‘ಒಂದು ಜಿಲ್ಲೆ ಒಂದು ಉತ್ಪನ್ನ’ ದಡಿಯಲ್ಲಿ ಶಿವಮೆಗ್ಗಕ್ಕೆ ಅನಾನಸ್, ಮೂಡಿ ಗೆರೆಗೆ ಸಾಂಬಾರು ಪದಾರ್ಥಗಳು ಮತ್ತು ಹಿರಿಯೂರಿಗೆ ನೆಲಗಡಲೆ ಬೆಳೆಗಳ ಸಂಶೋಧನೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ರೂ.೫. ೬೮ ಕೋಟಿ ನೀಡಲಾಗಿದೆ. ನೈಸರ್ಗಿಕ ಕೃಷಿ ಯೋಜನೆಯನ್ನು ಅಭಿವೃದ್ಧಿಗೊಳಿಸಲು ರೂ.೨೫೨ ಕೋಟಿ ಅನುದಾನ ದೊರೆತಿದೆ. ಸುಮಾರು ೩೨ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವೈಜನಿಕ -ಸಂಪನ್ಮೂಲ ಮತ್ತು ಜಲ ಸಂಪನ್ಮೂಲ ಸಮೀಕ್ಷೆ ಗಾಗಿ ಹಾಗೂ ಅವುಗಳ ಪುನಶ್ವೇತ ನಕ್ಕಾಗಿ ರೂ.೩.೬೮ ಕೋಟಿ ಅನು ದಾನವು ವಿಶ್ವವಿದ್ಯಾಲಯಕ್ಕೆ ದೊರಕಿರುತ್ತದೆ.
ಅಖಿಲ ಭಾರತ ಸುಸಂಘಟಿತ ಸಂಶೋಧನಾ ಯೋಜನೆಗಳಾದ ಭತ್ತ (ಹೊನ್ನಂಪೇಟೆ ಮತ್ತು ಬ್ರಹ್ಮಾವರ), ಸಮಗ್ರ ಕೃಷಿ ಪದ್ಧತಿ (ಕತ್ತಲಗೆರೆ),ಬೇರುಗಂಟು (ಶಿವಮೊಗ್ಗ), ಸಾರಿಬಾರು ಪದಾರ್ಥ (ಮೂಡಿ ಗೆರೆ), ಪಾಮ್ಸ್ (ಅಡಿಕೆ) ಹೊನ್ನ ವಿಲ್ಲ, ಪಾಮ್ಸ್ (ತಾಳಬೆಳೆ) ಬಾವಿ ಕರ, ತಂಬಾಕು (ಶಿವಮೆಗ್ಗ), ಬೆಳ್ಳುಳ್ಳಿ ಮತ್ತು ಈರುಳ್ಳಿ (ಹಿರಿ ಯೂರು), ಅರಣ್ಯ (ಪೊನ್ನಂ ಪೇಟೆ), ನೆಲ ಗಡಲೆ (ಹಿರಿ ಯೂರು), ಸಿರಿ ಧಾನ್ಯಗಳು (ಹಿರಿಯೂರು), ಮೆಕ್ಕೆಜೋಳ (ಕತ್ತಲಗೆರೆ) ಬೆಳೆಗಳ ಮೇಲೆ ಕಾರ್ಯನಿರ್ವಹಿಸಲಾಗುತ್ತಿದೆ.
ವಿವಿವು ಪ್ರಸಕ್ತ ಸಾಲಿನಲ್ಲಿ ೫೪೩೧ ಕ್ವಿಂಟಾಲ್ ನಷ್ಟು ಏಕದಳ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳ ಬೀಜೋತ್ಪಾದನೆ ಹಾಗೂ ೪.೨೫ ಗುಣಮಟ್ಟದ ತೋಟಗಾರಿಕೆ ಬೆಳೆಗಳ ಸಸಿಗಳನ್ನು ಉತ್ಪಾದನೆ ಮಾಡಿರುತ್ತದೆ. ಓಎಫ್‌ಆರ್‍ಸಿಯು ೨೪ ಸಾವಿರ ಕೆ.ಜಿ.ಯ ೮ ಬಗೆಯ ಜೈವಿಕ ಗೊಬ್ಬರ ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳನ್ನು ಉತ್ಪಾದಿಸಿ, ರೂ.೨೪ ಲಕ್ಷಗಳ ಆದಾಯ ಹಾಗೂ ಸುಮಾರು ೧೩೦೦ ಕೆ.ಜಿ.ಯಷ್ಟು ಜೇನು ತುಪ್ಪವನ್ನು ಉತ್ಪಾದಿಸಿ, ೪ ಲಕ್ಷ ಆದಾಯ ಗಳಿಸಿರುತ್ತದೆ. ಹಾಗೂ ವಿಶ್ವವಿದ್ಯಾಲಯವು ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ಸಂಸ್ಥೆಗಳ ೬೬ ಹೊಸ ಉತ್ಪನ್ನಗಳನ್ನು ಪರೀಕ್ಷೆ ಮಾಡಿ ಸುಮಾರು ರೂ. ೧೨೨.೨೩ ಲಕ್ಷಗಳ ಆದಾಯ ಗಳಿಸಿರುತ್ತದೆ ಎಂದು ವಿವರಿಸಿದರು.