ಜೂ.೧೮ : ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇವಸ್ಥಾನದ ವಾರ್ಷಿಕೋತ್ಸವ
ಶಿವಮೊಗ್ಗ : ನಗರದ ಅಶ್ವಥ್ ನಗರ – ಎಲ್ ಬಿ ಎಸ್ ನಗರದ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇವಸ್ಥಾನದ ಪ್ರಥಮ ವರ್ಷದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಸಮಾರಂಭ ಜೂ.೧೮ರ ಭಾನುವಾರ ವಿಜೃಂಭಣೆಯಿಂದ ನಡೆಯಲಿದೆ.
ವಾರ್ಷಿಕೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ ೯.೩೦ ರಿಂದ ಪಂಚಾಮೃತಾಭಿಷೇಕ, ಶ್ರೀ ಭೂತಪ್ಪ ಸ್ವಾಮಿಗೆ ವಿಶೇಷ ಪೂಜೆ, ಶ್ರೀ ಚಂಡಿಕಾ ಹೋಮ, ೧೧.೩೦ಕ್ಕೆ ಪೂರ್ಣಾಹುತಿ ನಡೆಯಲಿದ್ದು, ನಂತರ, ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಭೂತಪ್ಪ ಸ್ವಾಮಿಗೆ ಮಹಾನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ.
ನಂತರ, ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಚೌಡೇಶ್ವರಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಮೊ : ೯೩೪೨೨ ೭೨೯೬೮, ೯೭೪೧೭ ೬೮೭೫೮, ೯೧೪೧೭ ೯೯೫೯೪ ಗಳಿಗೆ ಸಂಪರ್ಕಿಸುವಂತೆ ದೇವಳ ಸಮಿತಿ ಪದಾಧಿಕಾರಿಗಳು ಕೋರಿದ್ದಾರೆ.