ಜು.15: ರಾಷ್ಟ್ರೋತ್ಥಾನ ಬಳಗದಿಂದ ಉಪನ್ಯಾಸ…
ಶಿವಮೊಗ್ಗ : ರಾಷ್ಟೋತ್ಥಾನ ಬಳಗ ವತಿಯಿಂದ ದೇಶ ಅನುಭವಿಸಿದ ಕರಾಳ ತುರ್ತು ಪರಿಸ್ಥಿತಿಗೆ ೫೦ ವರ್ಷದ ಹಿನ್ನೆಲೆಯಲ್ಲಿ ಮರುಮುದ್ರಿತ ಭುಗಿಲು ಪುಸ್ತಕದ ಲೋಕಾರ್ಪಣೆ ಮತ್ತು ವೈಚಾರಿಕ ಉಪನ್ಯಾಸವನ್ನು ಜು.೧೫ರ ಸಂಜೆ ಏರ್ಪಡಿಸಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಬಳಗದ ಅಧ್ಯಕ್ಷ ಡಾ| ಪಿ ಆರ್. ಸುಧೀಂದ್ರ, ಜನಸಾಮಾನ್ಯರು, ವಿದ್ಯಾರ್ಥಿಗಳು, ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗು ಸಂತರು ಈ ಭಯಾನಕ ಸ್ವಾತಂತ್ರ್ಯ ಹರಣದ ಸಂದರ್ಭ ವನ್ನು ಎದುರಿಸಿದ, ಎದುರಿಸಿ ಗೆದ್ದ, ಗೆದ್ದು ಮತ್ತೊಮ್ಮೆ ಪರಿಪೂರ್ಣ ಪ್ರಜಪ್ರಭುತ್ವವನ್ನು ರಾಷ್ಟ್ರದಲ್ಲಿ ಸಂಸ್ಥಾಪಿಸಿದ ಕಥಾನಕವು ಒಂದು ರೋಚಕ ಇತಿಹಾಸ. ಆ ವ್ಯಾಪಕ ಹೋರಾಟದ ಸತ್ಯಕಥೆ ಭುಗಿಲು, ಅಖಿಲ ಭಾರತದಲ್ಲಿ ನಡೆದ ಆ ಸ್ವಾತಂತ್ರ್ಯ ಸಂಘರ್ಷದ ಸಂಕ್ಷಿಪ್ತ ಚಿತ್ರದ ಹಿನ್ನೆಲೆಯಲ್ಲಿ ಕರ್ನಾಟಕವು ಅದಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆಯ ವಿಸ್ತಾರವಾದ ವಿವರ ಇದರಲ್ಲಿದೆ. ಈ ಪುಸ್ತಕದ ಮರು ಬಿಡುಗಡೆ ಕಾರ್ಯಕ್ರಮ ಇದಾಗಿದೆ ಎಂದರು
ಜು.೧೫ರ ಮಂಗಳವಾರ ಸಂಜೆ ೫:೩೦ಕ್ಕೆ ನಗರದ ಸಾಗರ ರಸ್ತೆಯಲ್ಲಿರುವ ದ್ವಾರಕಾ ಕನ್ನೆನ್ನನ್ ಹಾಲ್ನಲ್ಲಿ ದೇಶ ಅನುಭವಿಸಿದ ಕರಾಳ ತುರ್ತುಪರಿಸ್ಥಿತಿಗೆ ೫೦ ವರ್ಷಗಳು ಮತ್ತು ಅದರ ಕುರಿತಾದ ಈ ಭುಗಿಲು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸ ಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಜಪದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಭಾಷಣ ಮಾಡಲಿzರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಹಾಗೂ ಚಲನಚಿತ್ರ ನಟ ಮತ್ತು ನಿರ್ದೇಶಕ ಪ್ರಕಾಶ್ ಬೆಳವಾಡಿ ಆಗಮಿಸಲಿ zರೆ ಎಂದರು.
ರಾಷ್ಟೋತ್ಥಾನ ಪರಿಷತ್ತಿನ ಡಾ| ಸುಧೀಂದ್ರ ಅಧ್ಯಕ್ಷತೆ ವಹಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಯ್, ಪರಿಸರ ನಾಗರಾಜ್, ನವೀನ್, ಸುರೇಶ್, ಕಸಟ್ಟಿ ಮಂಜುನಾಥ್ ಇದ್ದರು.

