ಜು.13: ಗುರುವಂದನಾ – ವಿಶೇಷ ಭಜನಾ ಗಾಯನ
ಶಿವಮೊಗ್ಗ : ನಗರದ ಎಸ್.ಪಿ.ಎಂ. ರಸ್ತೆಯ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯ ಹಾಗೂ ಶ್ರೀ ಶ್ರೀಧರ ಸೇವಾ ಸಮಿತಿ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಜು.೧೩ರ ಭಾನುವಾರ ನಗರದ ಕುವೆಂಪು ರಂಗಮಂದಿರ ದಲ್ಲಿ ಸಂಜೆ ೬ ರಿಂದ ೮.೩೦ ರವರೆಗೆ ವಿಶೇಷ ಭಜನಾ ಗಾಯನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಜಿ ಅರುಣ್ ಕುಮಾರ್ ತಿಳಿಸಿzರೆ.
ನಗರದ ಕಲ್ಲಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯಶ್ರೀ ಸ್ವಾಮಿ ವಿನಯಾನಂದ ಸರಸ್ವತಿಯವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ಗುರುವಂದನೆಯನ್ನು ಸ್ವೀಕರಿಸಲಿzರೆ. ಸಂಜೆ ೬ರಿಂದ ಸುಮಾರು ೨೦೦ ವಿದ್ಯಾರ್ಥಿಗಳಿಂದ ಏಕ ಕಂಠದಲ್ಲಿ ವಿಶೇಷ ಹಾಗೂ ವೈವಿಧ್ಯಮಯ ಭಜನಾ ಗಾಯನ ಕಾರ್ಯಕ್ರಮ ಜರುಗಲಿದ್ದು , ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ಶ್ರೀಧರ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ವಿದ್ಯಾಲಯದ ಪ್ರಾಂಶುಪಾಲರ ವಿ|| ಜಿ ಅರುಣ್ ಕುಮಾರ್ ತಿಳಿಸಿzರೆ.
ಮಾಹಿತಿಗಾಗಿ ಮೊ. : ೯೮೪೪೪ ೪೪೮೨೦/೮೦೮೮೨ ೨೫೦೦೧ಗೆ ಸಂಪರ್ಕಿಸಲು ಕೋರಿದೆ.

