ಜೂ. ೨೫: ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ
ಶಿವಮೊಗ್ಗ: ನಗರದ ಹೊಸ ಕೆ.ಹೆಚ್.ಬಿ. ಕಾಲೋನಿಯ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ಜೂ.೨೫ರ ನಾಳೆ ( ಭಾನುವಾರ) ನಡೆಯಲಿದೆ.
ದೇವಸ್ಥಾನದ ಪ್ರಧಾನ ಅರ್ಚಕ ವೇ.ಬ್ರ.ಶ್ರೀ ಚೇತನ್ ಭಟ್ ಅವರು ಮಾತನಾಡಿ, ಅಂದು ಸಂಜೆ ೫.೩೦ ಗಂಟೆಗೆ ದೇಶದಲ್ಲಿ ಉತ್ತಮ ಮಳೆ, ಬೆಳೆ, ಜನರ ಯೋಗಕ್ಷೇಮ ಹಾಗೂ ಲೋಕಕಲ್ಯಾಣಕ್ಕಾಗಿ ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ. ಭೀಮೇಶ್ವರ ಜೋಷಿ ದಿವ್ಯ ಸಾನಿಧ್ಯ ವಹಿಸಲಿzರೆ ಎಂದು ತಿಳಿಸಿದರು.
ಅಂದು ಸಂಜೆ ೫.೩೦ ರಿಂದ ಕ್ಷೇತ್ರ ದೇವರಿಗೆ ಹಾಗೂ ಶ್ರೀ ಶ್ರೀನಿವಾಸ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಕಾಶಿ ಯಾತ್ರೆ, ಮಂಗಳಾಷ್ಟಕ, ಮಾಲಿಕಾರೋಹಣ, ಕನ್ಯಾ ದಾನ, ವಿವಾಹ ಚೂರ್ಣಿಕೆ, ಮಾಂಗಲ್ಯ ಧಾರಣೆ, ಲಾಜ ಹೋಮ, ಅಷ್ಟಾವಧಾನ ಸೇವೆ, ಮಹಾ ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಶ್ರೀ ಚೌಡೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಅರ್ಚಕ ವೃಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಶ್ರೀ ಶ್ರೀನಿವಾಸನ ಕೃಪೆಗೆ ಪಾತ್ರರಾಗ ಬೇಕಾಗಿ ಸಮಿತಿ ಅಧ್ಯಕ್ಷ ಗಂಗನಾಯ್ಕ್ ಹಾಗೂ ಪದಾಧಕಾರಿಗಳು ಕೋರಿzರೆ.
ಹೆಚ್ಚಿನ ಮಾಹಿತಿಗಾಗಿ ಮೊ : ೯೪೪೮೮೮೮೧೨೯ (ಕೆ. ಶೇಖರ್), ೯೯೮೦೨೪೭೦೮೧ (ಪಿ. ಚೇತನ್ ಭಟ್) ಗಳಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.