ಜೂ.11: ಕಮಲಾನೆಹರು ಕಾಲೇಜಿನಲ್ಲಿ ಪದಬಂಧ ಸ್ಪರ್ಧೆ…
ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದಿಂದ ಜೂ.೧೧ರಂದು ಕಮ ಲಾನೆಹರು ಮಹಿಳಾ ಕಾಲೇಜಿನಲ್ಲಿ ಪದಬಂಧ ಸ್ಪರ್ಧೆ ಹಮ್ಮಿಕೊ ಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಜೆ. ರಾಮಾಚಾರ್ ಸುದ್ದಿಗೋಷ್ಟಿ ಯಲ್ಲಿ ಹೇಳಿದರು.
ಅಜೇಯ ಸಂಸ್ಕೃತಿ ಬಳಗವು ೪ನೇ ಬಾರಿಯ ಪದಬಂಧ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ಅಜೇಯ ಬಳಗದ ಸದಸ್ಯರು ಮತ್ತು ಕುಟುಂಬದವರನ್ನು ಹೊರ ತುಪಡಿಸಿ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಸ್ಪರ್ಧೆ ೧ ಗಂಟೆ ಅವಧಿಯದ್ದಾಗಿರುತ್ತದೆ. ಅಂದು ಬೆಳಿಗ್ಗೆ ೧೧ರಿಂದ ೧೨ರ ವರೆಗೆ ನಡೆಯುತ್ತದೆ. ಆಸಕ್ತರು ಆ ದಿನದಂದೇ ಸ್ಪರ್ಧೆ ನಡೆಯುವ ಸ್ಥಳದಲ್ಲಿಯೇ ಬೆಳಿಗ್ಗೆ ೧೦ ಗಂಟೆಗೆ ೨೦ರೂ. ಶುಲ್ಕ ಪಾವತಿಸಿ ಹೆಸರು ನೊಂದಾಯಿಸಬಹುದಾಗಿದೆ ಎಂದರು.
ಸ್ಪರ್ಧಿಗಳು ಒಟ್ಟು ೮ ಪದಬಂಧಗಳನ್ನು ತುಂಬಬೇಕು. ಪ್ರತಿ ಸೆಕೆಂಡ್ ಅನ್ನು ಸಹ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ತೀರ್ಪು ಗಾರರ ತೀರ್ಮಾನವೇ ಅಂತಿಮ ವಾರುತ್ತದೆ. ವಿಜೇತರಿಗೆ ಪ್ರಥಮ ೩ಸಾವಿರ, ದ್ವಿತೀಯ ೨ಸಾವಿರ, ತೃತೀಯ ೧ಸಾವಿರ ಹಾಗೂ ತಲಾ ೫೦೦ ರೂ.ಗಳ ಐದು ಸಮಾಧಾ ನಕರ ಬಹುಮಾನಗಳು ಇರುತ್ತವೆ ಎಂದರು.ಕಾರ್ಯದರ್ಶಿ ಅಚ್ಯುತ್ ರಾವ್ ಮಾತನಾಡಿ, ಫಲಿತಾಂಶ ಜೂ.೧೭ರಂದು ಪ್ರಕಟಿಸಲಾಗು ವುದು. ಅದೇ ದಿನ ಸಂಜೆ ೬ಗಂಟೆಗೆ ಕರ್ನಾಟಕ ಸಂಘದಲ್ಲಿ ಸಮಾ ರೋಪ ಸಮಾರಂಭ ನಡೆಯಲಿದೆ. ಮಾತನಾಡುವ ಗೊಂಬೆ ಖ್ಯಾತಿಯ ಚೇತನ್ ರಾಯನಹಳ್ಳಿ ಅವರು ಈ ಸಮಾರಂಭವನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಡುವರು. ಇದೇ ಸಂದರ್ಭದಲ್ಲಿ ನೂತನ ಶಾಸಕ ಎಸ್.ಎನ್. ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬಳಗದ ಪ್ರ ಮುಖರಾದ ಚೇತನ್, ಹರೀಶ್, ನಾಗೇಶ್, ಕುಮಾರಶಾಸ್ತ್ರಿ ಇದ್ದರು.