ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜೂ.10: ಮುತ್ಸದ್ದಿ ರಾಜಕಾರಣಿ ಕೆ.ಎಸ್. ಈಶ್ವರಪ್ಪರ 75ನೇ ಜನ್ಮದಿನ : ಅಮೃತ ಸಂಭ್ರಮ

Share Below Link

ಶಿವಮೊಗ್ಗ: ಶಿವಮೊಗ್ಗ ನಾಗರಿಕ ಅಭಿನಂದನಾ ಸಮಿತಿ, ಶ್ರೀಗಂಧ ಸಂಸ್ಥೆ ವಿತಿಯಿಂದ ಶಿವಮೊಗ್ಗದ ಸಾಂಸ್ಕೃತಿಕ ರಾಯ ಭಾರಿ, ಹಿರಿಯ ಮುತ್ಸದ್ಧಿ ರಾಜ ಕಾರಣಿ ಕೆ.ಎಸ್. ಈಶ್ವರಪ್ಪನವರ ೭೫ನೇ ಜನ್ಮ ದಿನಾಚರಣೆಯನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಜೂ. ೧೦ ರಂದು ಸಂಜೆ ೫.೩೦ಕ್ಕೆ ಅಮೃತ ಸಂಭ್ರಮದ ಹೆಸರಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿ ದರು.


ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕೆ.ಎಸ್. ಈಶ್ವರಪ್ಪ ಅವರು ಕೇವಲ ವ್ಯಕ್ತಿ ಮಾತ್ರವಲ್ಲ, ಅವರೊಂದು ಶಕ್ತಿ. ಮುಖ್ಯವಾಗಿ ಸಾಂಸ್ಕೃತಿ ರಾಯಭಾರಿಯಾಗಿzರೆ. ಬಿಜೆಪಿ ಯನ್ನು ಕಟ್ಟಿ ಬೆಳೆಸಿ ಉಪ ಮುಖ್ಯಮಂತ್ರಿಯಾಗಿದ್ದವರು. ೭೫ ವರ್ಷದ ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿ ಸಲಾಗುವುದು ಎಂದರು.
ತಮ್ಮ ೪೦ ವರ್ಷಗಳ ರಾಜ ಕೀಯ ಜೀವನದಲ್ಲಿ ಏಳು ಬೀಳು ಗಳ ನಡುವೆಯೂ ಪ್ರಖರ ಹಿಂದು ತ್ವವಾದದಿಂದ ಹಿಂದೆ ಸರಿಯದೇ ಪ್ರಭಾವಿಯಾಗಿ ಪ್ರಮುಖ ವ್ಯಕ್ತಿ ಯಾಗಿ ರಾಜಕೀಯ ಜೀವನವನ್ನು ರೂಪಿಸಿಕೊಂಡವರು. ಅಷ್ಟೇ ಅಲ್ಲ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿzರೆ. ಶ್ರೀಗಂಧ ಸಂಸ್ಥೆಯ ಮೂಲಕ ಸದ್ಭಾವ, ಸದ್ವಿಚಾರ, ಸದಭಿರುಚಿ ಮತ್ತು ಸತ್ಕಾರಗಳನ್ನು ಮಾಡಿzರೆ. ಹೀಗಾಗಿ ಅವರ ಅಮೃತ ಸಂಭ್ರ ಮಕ್ಕೆ ನಾವೆಲ್ಲರೂ ಸಾಕ್ಷಿಯಾ ಗೋಣ ಎಂದರು.
ಬಿ.ಆರ್. ಮಧುಸೂದನ್ ಮಾತನಾಡಿ, ಅಂದು ಸಂಜೆ ೫.೩೦ ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಉಡುಪಿ ಪೇಜವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಹಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿzರೆ. ನಾಡಿನ ಹೆಸರಾಂತ ಕಲಾವಿದ ಶಂಕರ ಶಾನಭಾಗ್ ತಂಡದವರಿಂದ ಸಾತ್ವಿಕ ಎಂಬ ದಾಸ ಪರಂಪರೆಯ ಮಹೋನ್ನತ ಕೃತಿ ಗಳ ಗಾಯನವಿರುತ್ತದೆ ಎಂದರು.
ಪಾಲಿಕೆ ಸದಸ್ಯ ವಿಶ್ವಾಸ್ ಮಾತನಾಡಿ, ಜನ್ಮ ದಿನಾಚರಣೆ ಅಂಗವಾಗಿ ಅಂದು ಬೆಳಗ್ಗೆ ೮ ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮತ್ತು ಬೆಳಗ್ಗೆ ೧೦ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಮಾರಿಕಾಂಬ ಫೈನಾನ್ಸ್ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸ ಲಾಗಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಬೆಕ್ಕಿನ ಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ನಟರಾಜ್ ಭಾಗವತ್, ಏಳುಮಲೈ, ವೆಂಕಟೇಶ್, ವಿದ್ವಾ ನ್ ಹೆಚ್.ಎಸ್. ನಾಗರಾಜ್, ಸ.ನ. ಮೂರ್ತಿ, ಹೆಚ್.ಎಸ್. ಕೇಶವಮೂರ್ತಿ, ಪ್ರಭಾಕರ್, ರಘುನಾಥ್, ನಾಗೇಶ್, ನಾಗ ರಾಜ್ ಮೊದಲಾದವರಿದ್ದರು.