ಜಿಲ್ಲಾ ಸುದ್ದಿತಾಜಾ ಸುದ್ದಿ

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಹೆಜ್ಜೆ ಇಡಬೇಕು: ಯಡಗೆರೆ

Share Below Link

ಶಿವಮೊಗ್ಗ : ಪತ್ರಕರ್ತರು ತಮ್ಮೊಳಗಿನ ಸಂಘರ್ಷದ ಮನಸ್ಸಿ ನಿಂದ ಹೊರಬಂದು ಒಗ್ಗಟ್ಟಾಗಿ ಸಮಾಜಮುಖಿ ಪಥದಲ್ಲಿ ಹೆಜ್ಜೆ ಇಡಬೇಕು ಎಂದು ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹೇಳಿದರು.
ನಗರದ ಪ್ರೆಸ್‌ಟ್ರಸ್ಟ್‌ನಲ್ಲಿ ಭಾನುವಾರ ನಡೆದ ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೨-೨೩ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿ ದೃಷ್ಠಿಯ ಜೊತೆಗೆ ಸಮಾಜಮುಖಿ ಕಾರ್ಯಗಳತ್ತವೂ ಸಂಘ ದಿಟ್ಟ ಹೆಜ್ಜೆ ಇಟ್ಟಿದೆ. ಸಂಘ ದಿಂದ ಈಗಾಗಲೇ ನಡೆದಿರುವ ಸಮಾಜಮುಖಿ ಕಾರ್ಯಗಳಿಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.


ಪತ್ರಕರ್ತರ ಸಂಘ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಸಮಾಜದ ಬೇರೆ, ಬೇರೆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲ ಮಾಡಬೇಕಾಗುತ್ತದೆ. ಇಂತಹ ಹೊಸ ದಿಕ್ಕಿನಲ್ಲಿ ಆಲೋಚನೆ ಮಾಡಬೇಕಿದೆ. ಸಂಘ ಎಂದ ಮೇಲೆ ಒಬ್ಬೊಬ್ಬರದು ಒಂದೊಂದು ರೀತಿ ಅಭಿಪ್ರಾಯ ಗಳಿರುತ್ತವೆ. ಇಲ್ಲಿ ಸಣ್ಣ ವ್ಯತ್ಯಾಸಗಳು ಸಹಜ. ನಮ್ಮೊಳಿನ ಸಣ್ಣ ಭಿನ್ನಾಭಿಪ್ರಾಯಗಳನ್ನು ನಾಲ್ಕು ಗೋಡೆಗಳ ಚೌಕಟ್ಟಿನಲ್ಲಿ ಬಗೆಹರಿಸಿ ಕೊಂಡು ಒಗ್ಗೂಡಿ ಎಲ್ಲರೂ ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.
ಪತ್ರಕರ್ತರಿಗೆ ಪ್ರತ್ಯೇಕ ನಿಧಿ:
ಸದಾ ಒತ್ತಡದ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿ zರೆ. ಅಂತಹವರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಒಡಗೂಡಿ ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಪ್ರತ್ಯೇಕ ನಿಧಿ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾ ಗಿದೆ. ಇದಕ್ಕೆ ಕೆಲ ಗಣ್ಯರು ಒತ್ತಾಸೆ ಯಾಗಿ ನಿಲ್ಲುವುದಾಗಿ ಹೇಳಿzರೆ. ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕಿದೆ ಎಂದರು.
ಸಂಘವು ಈವರೆಗೆ ಆನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಇದಕ್ಕಾಗಿ ಬೇರೆಯವರ ಬಳಿ ಕೈ ಚಾಚಬಾರದು ಎಂಬುದು ಸಂಘದ ನಿಲುವಾಗಿದ್ದು, ಸಂಘದ ಇತಿಮಿತಿಯ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತಿದೆ. ಕೆಲ ಕಾರ್ಯಕ್ರಮಗಳಿಗೆ ವಿವಿಧ ಸಂಘ- ಸಂಸ್ಥೆಗಳು ತಮ್ಮೊಂದಿಗೆ ಕೈ ಜೋಡಿ ಸಿವೆ. ಕೆಲ ದಾನಿಗಳು ನಮಗೆ ಸಹಕಾರ ನೀಡಿzರೆ. ಜೊತೆಗೆ ಪದಾಧಿಕಾರಿಗಳಿಂದಲೂ ಹಣ ಸಂಗ್ರಹ ಮಾಡಿ ಕಾರ್ಯ ಕ್ರಮ ಗಳನ್ನು ಮಾಡಿಕೊಂಡು ಬರಲಾಗು ತ್ತಿದೆ ಎಂದು ವಿವರಿಸಿದರು.
ಸಂಘದ ೨೦೨೨ನೇ-೨೩ನೇ ಸಾಲಿನ ವಾರ್ಷಿಕ ವರದಿ ವಾಚಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಸಂಘದ ಉದ್ಘಾಟನೆ ಜೊತೆಗೆ ಮಾದಕ ವಸ್ತು ನಿರ್ಮೂಲನೆ ಅಭಿಯಾನ ನಡೆಸಲಾಯಿತು. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳ ಲಾಗಿತ್ತು. ಮಹಿಳಾ ನಾಟಕೋತ್ಸವ ನಡೆಯಿತು. ಗ್ರಾಮ ಭೇಟಿ ನಡೆಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡಸಲಾಯಿತು. ಈ ಎಲ್ಲ ಕಾರ್ಯಕ್ರಮಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕಕ್ತವಾಗಿದೆ. ಮುಂದೆ ಇದೇ ರೀತಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಅವುಗಳ ಈಡೇರಿಕೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಸಭೆ ಆರಂಭದಲ್ಲಿ ಅಗಲಿದ ಪತ್ರಕರ್ತರಿಗೆ ಶ್ರzಂಜಲಿ ಸಲ್ಲಿಸಲಾಯಿತು. ಸಂಘದ ನಿರ್ದೇಶಕ ವಿವೇಕ್ ಮಹಾಲೆ ವಾರ್ಷಿಕ ಸಭೆಯ ನೊಟೀಸ್ ಓದಿದರು. ನಿರ್ದೇಶಕ ಯೋಗೇಶ್ ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ಹುಲಿಮನೆ ತಿಮ್ಮಪ್ಪ ಸ್ವಾಗತಿಸಿದರು. ಸಂತೋಷ್ ಕಾಚಿನಕಟ್ಟೆ ವಂದಿಸಿದರು. ನಿರ್ದೇಶಕ ರಾಮಚಂದ್ರ ಗುಣಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವ ಅಧ್ಯಕ್ಷ ಎಸ್. ಚಂದ್ರಕಾಂತ್, ಖಜಚಿ ಶಿವಮೊಗ್ಗ ನಂದನ್ ಸೇರಿದಂತೆ ನಿರ್ದೇಶಕರು, ಕಾರ್ಯಕಾರಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.