ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪತ್ರಕರ್ತರ ಸಂಘದಿಂದ ಸಚಿವರಿಗೆ ಮನವಿ…

Share Below Link

ಶಿವಮೊಗ್ಗ, (ಹೊಸನಾವಿಕ): ರಾಜ್ಯದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ, ಆನ್‌ಲೈನ್ ಬುಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವ ಭರವಸೆ ನೀಡಿದರು.
ಪತ್ರಕರ್ತರ ಸಂಘದಿಂದ ನೀಡಲಾದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವಾರ್ತಾ ಸಚಿವರಾದ ಅಶ್ವಿನ್ ವೈಷ್ಣವ್, ರೈಲ್ವೆ ಸಚಿವರು ಸೇರಿದಂತೆ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳ ಕುರಿತಾಗಿ ಗಮನ ಸೆಳೆಯಲಾಗುವುದು ಎಂದರು.
ನೂತನ ಜಾಹೀರಾತು ನೀತಿ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲಿ ಸಚಿವರು, ಅಧಿಕಾರಿ ಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಹಿತ ಕಾಯಲು ಬದ್ಧ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಎಸ್. ಎನ್. ಚನ್ನಬಸಪ್ಪಅವರು, ಪತ್ರಕರ್ತರ ಬೇಡಿಕೆಗಳ ಕುರಿತಾಗಿ ಸಚಿವರಲ್ಲಿ ಸಹಾನುಭೂತಿಯಿಂದ ಮಾತನಾಡಿದರು.
ಮನವ ಸಂದರ್ಭದಲ್ಲಿ ಸಂಘದ ಜಿ ಅಧ್ಯಕ್ಷ ವೈದ್ಯನಾಥ್ ಪ್ರಮುಖರಾದ ಹಾಲಸ್ವಾಮಿ, ಸೋಮನಾಥ್, ದೀಪಕ್ ಸಾಗರ್, ಸತ್ಯನಾರಾಯಣಪ್ಪ, ನಾಗರಾಜ ಶಣೈ, ಅತೀಕ್ ಉಖಾನ್, ಶಿವಮೊಗ್ಗ ಯೋಗರಾಜ್, ಸ್ಪಂದನ ಚಂದ್ರು, ಶಿವಮೊಗ್ಗ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *