ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜೋಡು ಕಂಬಳ: ಈಶ್ವರಪ್ಪರಿಂದ ಭೂಮಿಪೂಜೆ – ಲೋಗೋ ಬಿಡುಗಡೆ

Share Below Link

ಶಿವಮೊಗ್ಗ: ಕಂಬಳ ಗಂಡು ವೀರರ ಕ್ರೀಡೆ ಇದನ್ನು ಮಲೆನಾಡಿಗೆ ಪರಿಚಯಿಸುತ್ತಿರುವ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಕೆಎಸ್ ಈಶ್ವರಪ್ಪ ಹೇಳಿzರೆ.
ಅವರು ಮಾಚೇನಹಳ್ಳಿ ತುಂಗಭದ್ರಾ ಜಂಕ್ಷನ್ ಜಯಲಕ್ಷ್ಮಿ ಪೆಟ್ರೋಲ್ ಬಂಕ್ ಬಳಿ ಇರುವ ೧೬ ಎಕರೆ ಜಗದಲ್ಲಿ ತುಂಗಭದ್ರ ಜೋಡು ಕರೆ ಕಂಬಳ ಸಮಿತಿ ವತಿಯಿಂದ ಶಿವಮೊಗ್ಗ ಸಾಂಸ್ಕತಿಕ ಪರಂಪರೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿರುವ ತುಳುನಾಡಿನ ವೀರ ಜನಪದ ಪ್ರತಿಷ್ಠಿತ ಶ್ರೀಮಂತ ಐತಿಹಾಸಿಕ ಕ್ರೀಡೆ ಮಲೆನಾಡು ತುಂಗಭದ್ರ ಜೋಡು ಕರೆ ಕಂಬಳ ೨೦೨೫ ಭೂಮಿ ಪೂಜೆಯನ್ನು ನೆರವೇರಿಸಿ ಕಂಬಳದ ಲೋಗೋ ಹಾಗೂ ವೆಬ್ ಸೈಟ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಕಂಬಳ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿದೆ. ಭಾರತದ ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ತೋರಿಸುತ್ತಾ ಇದೆ. ಈ ಕ್ರೀಡೆಯ ಬಗ್ಗೆ ರಾಜ್ಯದ ಎ ಜನರಲ್ಲೂ ಆಸಕ್ತಿ ಮತ್ತು ಕುತೂಹಲ ಹುಟ್ಟಿದೆ. ವೀರ ಗಂಡುಗಲಿ ಕ್ರೀಡೆಯಾದ ಇದನ್ನು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಮಾಡುತ್ತಿದ್ದು ಎಲ್ಲರೂ ಸಂಪೂರ್ಣ ಸಹಕಾರ ನೀಡುವ ಭರವಸೆ ಇದೆ ಎಂದರು.
ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೆ.ಇ ಕಾಂತೇಶ್ ಮಾತನಾಡಿ ಈ ಕ್ರೀಡೆ ಯಾವುದೇ ಜತಿಗೆ ಸೀಮಿತವಲ್ಲ. ಪಕ್ಷ ಭೇದ ಮರೆತು ಹಬ್ಬದ ರೀತಿಯಲ್ಲಿ ಆಚರಣೆ ಮಾಡೋಣ ಎಂದರು.
ಕಂಬಳ ಸಮಿತಿಯ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ, ಇಂದು ಭೂಮಿ ಪೂಜೆಗೆ ಆಗಮಿಸಿದವರೆಲ್ಲ ಕಂಬಳದ ಉಳಿವಿಗಾಗಿ ಹೋರಾಡಿದವರು ಮತ್ತು ಕಂಬಳದ ಬ್ರಾಂಡ್ ಅಂಬಾಸಿಡರ್ ಆಗಿzರೆ. ಇತಿಹಾಸ ಬರೆದಿzರೆ. ಇಲ್ಲಿ ಬಂದಿರುವ ಶ್ರೀಕಾಂತ್ ಭಟ್ ಅವರ ಕೋಣಗಳು ಮೊನ್ನೆ ನಡೆದ ಕಂಬಳದಲ್ಲಿ ಮೂರು ಪ್ರಥಮ ಬಹುಮಾನ ಗೆದ್ದು ದಾಖಲೆ ಬರೆದಿzರೆ ಎಂದರು. ಎಂಟು ಜಿಗಳ ಜನರು ಇದರಲ್ಲಿ ಭಾಗವಹಿಸುತ್ತಾರೆ ಎಂದರು


ಕಂಬಳ ಉಳಿಯಬೇಕು ಇದರ ಅಭಿಮಾನಿ ಬಳಗ ಹೆಚ್ಚಿಸಬೇಕು ಎಂಬುದೇ ಉzಶವಾಗಿದ್ದು ಶಿವಮೊಗ್ಗ ಸಾಂಸ್ಕೃತಿಕ ತವರೂರಾಗಿದ್ದು ಈ ಕಂಬಳದಲ್ಲಿ ಸುಮಾರು ೧೦೦ ಜೊತೆ ಕಂಬಳದ ಕೋಣಗಳು ಬರಲಿವೆ ಎಂದರು. ಜೊತೆಗೆ ೨೫೦ಕ್ಕೂ ಹೆಚ್ಚು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಯ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು ಮತ್ತು ಅಲ್ಲಿನ ತಿಂಡಿ ತಿನಿಸುಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯಕ್ಷಗಾನ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಂಗೀತ ರಸ ಸಂಜೆ. ಯಕ್ಷಗಾನ. ಜನಪದ ಕಾರ್ಯಕ್ರಮಗಳು ನಡೆಯಲಿವೆ ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕಂಬಳದ ಪ್ರಮುಖರಾದ ವಿಜಯಕುಮಾರ್ ಮಾತನಾಡಿ, ದಕ್ಷಿಣ ಕನ್ನಡ. ಉಡುಪಿ. ಉತ್ತರ ಕನ್ನಡ, ಶಿವಮೊಗ್ಗ ಜಿಗಳಲ್ಲಿ ಕಂಬಳ ಆಯೋಜನೆಗೆ ಅನುಮತಿ ಸಿಕ್ಕಿದೆ. ಕರಾವಳಿಯ ಜನಪದ ಕ್ರೀಡೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಇದು ಎಂದರು. ಹಲವಾರು ಕಂಬಳಗಳ ಆಯೋಜಕರು ಮತ್ತು ಕೋಣಗಳ ಮಾಲೀಕರು. ಕಂಬಳ ಸಮಿತಿಯ ಪದಾಧಿಕಾರಿಗಳು ಪ್ರಮುಖರಾದ ರೋಹಿತ್ ಹೆಗಡೆ, ನವೀನ್ ಚಂದ್ರ ಆಳ್ವ ವಸಂತ್ ಶೆಟ್ಟಿ, ಶಶಿ, ಸುಕುಮಾರ್ ಶೆಟ್ಟಿ, ಗಣೇಶ್, ವಿಜಯ್ ಕುಮಾರ್, ಚಂದ್ರಹಾಸ್, ದೀಪಕ್, ಅರುಣ್ ಕುಮಾರ್ ಶೆಟ್ಟಿ, ಶ್ರೀಕಾಂತ್ ಭಟ್, ಇ.ವಿಶ್ವಾಸ್ ಮೊದಲಾದವರಿದ್ದರು.