ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವ ಉದ್ದೇಶದಿಂದ ಉದ್ಯೋಗ ಮೇಳ ಆಯೋಜನೆ…

Share Below Link

ಶಿಕಾರಿಪುರ : ಶಿಕಾರಿಪುರ ತಾಲೂಕು ಜಿ ಕೇಂದ್ರಕ್ಕೆ ಅಗತ್ಯವಿರುವ ಸಕಲ ಸೌಲಭ್ಯ ಹೊಂದಿದ್ದು, ತಾಲೂಕಿನ ಪೋಷಕರ ಮಕ್ಕಳಿಗೆ ಉದ್ಯೋಗ ದೊರಕಿಸುವ ಮಹಾತ್ವಾಕಾಂಕ್ಷೆಯ ಮೇರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಜನ್ಮದಿನ ನಿಮಿತ್ತ ಮೂಡಬಿದರೆ ಆಳ್ವಾಸ್ ಫೌಂಡೇಶನ್ ಟ್ರಸ್ಟ್ ಸಹಯೋಗ ದಲ್ಲಿ ಸತತ ೨ ದಿನ ಆಯೋಜಿಸ ಲಾದ ಬೃಹತ್ ಉದ್ಯೋಗ ಮೇಳ ೨೦೨೬ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಸಿಎಂ ಯಡಿಯೂರಪ್ಪ ನವರಿಗೆ ರಾಜಕೀಯ ಜನ್ಮ ನೀಡಿದ ತಾಲೂಕಿನ ಯುವಕ ಯುವತಿ ಯರಿಗೆ ಉದ್ಯೋಗ ದೊರಕಿಸಿ ಕೊಡುವ ಬಹು ಮಹತ್ವಾಕಾಂಕ್ಷೆಯ ಕನಸು ಇದೀಗ ನನಸಾಗಿದ್ದು ಈ ದಿಸೆಯಲ್ಲಿ ಕಳೆದ ೨-೩ ತಿಂಗಳಿನಿಂದ ಸತತ ಶ್ರಮವಹಿಸಿ ಯಶಸ್ವಿ ಯಾಗಲು ಸಹಕರಿಸಿದ ಆಳ್ವಾಸ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ಸಹಿತ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ,ಕಳೆದ ೫ ವರ್ಷದ ಹಿಂದೆ ನಡೆದ ಉದ್ಯೋಗ ಮೇಳ ದಲ್ಲಿ ೮.೫ ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದು ಕೇವಲ ೧೦೦ ಆಕಾಂಕ್ಷಿಗಳು ಆಯ್ಕೆಯಾಗಿzರೆ ಕೌಶಲ್ಯ ಪ್ರತಿಭೆ ಮುಖ್ಯವಾಗಿದ್ದು ಪೂರಕವಾಗಿ ಕಂಪನಿಗಳು ಗೌರವಯುತ ವೇತನ ನೀಡಿ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಆಳ್ವಾಸ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಸುಮಾರು ೮೩ ಕಂಪನಿಗಳು ಹಾಗೂ ೨ ಸಾವಿರಕ್ಕೂ ಅಧಿಕ ಆಕಾಂಕ್ಷಿಗಳು ಹಾಜರಿದ್ದರು.

Leave a Reply

Your email address will not be published. Required fields are marked *