ಜೆಎನ್ಎನ್ಸಿಇ ವಿದ್ಯಾರ್ಥಿಗಳಿಂದ ಯೋಜನೆಗಳ ಪ್ರಾತ್ಯಕ್ಷಿಕೆ ಅನಾವರಣ…
ಶಿವಮೊಗ್ಗ: ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯೋಚಿಸಿದ್ದ ಯೋಜನೆಗಳು, ಪ್ರಾತ್ಯಕ್ಷಿಕೆಯ ರೂಪ ಪಡೆದಿತ್ತು. ಶಿಕ್ಷಣ, ಆರೋಗ್ಯ, ಅಂತರ್ಜಾಲ ಸುರಕ್ಷತೆ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ನೆರವಾಗುವಂತಹ ಯೋಜನೆಗಳು, ಅಪ್ಲಿಕೇಶನ್ ರೂಪ ಪಡೆದು ತನ್ನತ್ತ ಸೆಳೆದಿತ್ತು.
ನಗರದ ಜೆ.ಎನ್.ಎನ್ ಎಂಜಿನಿಯ ರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯ ರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ತಾಂತ್ರಿಕ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮವು ಅಂತಹ ಸಂದರ್ಭಕ್ಕೆ ಸಾಕ್ಷಿಯಾಗಿತ್ತು.

ಕೃತಕ ಬುದ್ದಿಮತ್ತೆಯ ಮೂಲಕ ಧ್ವನಿಯ ಅವಲಂಬನೆ ಇಲ್ಲದೆ, ಕೇವಲ ತುಟಿಗಳ ಚಲನೆಯಿಂದ ಮಾತಿನ ಅರ್ಥವನ್ನು ಗ್ರಹಿಸು ವಂತಹ ಅಪ್ಲಿಕೇಶನ್ ಒಂದನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿ ದರು. ಈ ತಂತ್ರeನವು ಮಾತನಾಡಲು ಸಾಧ್ಯವಾಗದವರಿಗೆ ಅಥವಾ ಗದ್ದಲಯುಕ್ತ ಪರಿಸರಗಳಲ್ಲಿ ರಹಸ್ಯ ಸಂವಹನ ನಡೆಸು ವಂತಹ, ಮಾನವ ಕಂಪ್ಯೂಟರ್ ಸಂಪರ್ಕಕ್ಕೆ ಪರಿಣಾಮಕಾರಿ ವೇದಿಕೆಯಾಗಿದೆ.
ಇದರ ಜೊತೆಯಲ್ಲಿ ಮೆಷಿನ್ ಲರ್ನಿಂಗ್ ಸಹಾಯದಿಂದ, ಸುಮಾರು ೧೭ ಕಾಯಿಲೆಗಳ ಕುರಿತಾಗಿ, ರೋಗ ಲಕ್ಷಣಗಳ ಆಧಾರದ ಮೇಲೆ ಸ್ವಯಂ ಆರೋಗ್ಯ ಶಿಫಾರಸ್ಸು ನೀಡಬಲ್ಲ ಅಪ್ಲಿಕೇಶನ್, ಎಂಎಲ್ ಮೂಲಕ ಅಪಾರ ಸಂಖ್ಯೆಯ ಉತ್ಪನ್ನಗಳ ವಿಮರ್ಶೆ ಗಳನ್ನು ವಿಶ್ಲೇಷಿಸಿ ಇ-ಕಾಮರ್ಸ್ ಗ್ರಾಹಕರಿಗೆ ಸೂಕ್ತ ಆಯ್ಕೆ ನೀಡುವಂತಹ ವಿನ್ಯಾಸ ಹೊಂದಿದ ಯೋಜನೆ. ಆನ್ಲೈನ್ ಹಣಕಾಸು ವಹಿವಾಟುಗಳು ಸೈಬರ್ ದಾಳಿಗೆ ಗುರಿಯಾಗ ದಂತೆ ಹಾಗೂ ಅಗತ್ಯ ಗೌಪ್ಯತೆಗಾಗಿ ಎಇಎಸ್ ಎನ್ಕ್ರಿಪ್ಶನ್ ಬಳಸಿ, ವಂಚನೆ ಪತ್ತೆಗಾಗಿ ಗಣಕಯಂತ್ರದ ಕ್ರಮಾವಳಿ ಬಳಸಿ ಸಂಯೋಜಿಸುವ ಸುಧಾರಿತ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಕ್ಯಾಮೆರಾ ಮತ್ತು ಆಳವಾದ ಕಲಿಕಾ ಕ್ರಮಾವಳಿ ಬಳಸಿಕೊಂಡು ಸಂಕೇತ ಭಾಷೆಯನ್ನು, ಸ್ವಯಂಚಾಲಿತವಾಗಿ ಪತ್ತೆ ಹಚ್ಚಿ ವ್ಯಾಖ್ಯಾನಿಸಿ ಅಕ್ಷರದ ರೂಪದಲ್ಲಿ ತಿಳಿಸುವ ಯೋಜನೆ. ಬ್ಲಾಕ್ಚೈನ್ ತಂತ್ರeನ ಬಳಸಿ ಗ್ರಾಹಕರಿಗೆ ಉತ್ಪನ್ನಗಳ ನೈಜತೆ ಕುರಿತಾಗಿ ಮಾರ್ಗದರ್ಶನ ನೀಡುವ ವ್ಯವಸ್ಥೆ, ಹೊಂದಾಣಿಕೆಯುಕ್ತ ಸ್ಟೆಗನೋಗ್ರಫಿ ತಂತ್ರeನ, ಸ್ಮಾರ್ಟ್ ಐಒಟಿ- ಆಧಾರಿತ ಕೋಲ್ಡ್ ಸ್ಟೋರೇಜ್ ಮಾನಿಟರಿಂಗ್ ವ್ಯವಸ್ಥೆ, ಸೈಬರ್ ತಂತ್ರeನ ಬಳಸಿ ಸಾಮಾಜಿಕ ಮಾಧ್ಯಮದಲ್ಲಿನ ನಕಲಿ ಖಾತೆ ಗಳನ್ನು ಪತ್ತೆ ಹಚ್ಚುವಂತಹ ಯೋಜನೆಗಳು ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳು ನಿರೂಪಿಸಿದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ವೈ. ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಲೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
