ಜಿಲ್ಲಾ ಸುದ್ದಿತಾಜಾ ಸುದ್ದಿ

ಜ್ಞಾನದೀಪ ಶಾಲೆಯ ಬೆಳ್ಳಿ ಹಬ್ಬಕ್ಕೆ ಚಾಲನೆ

Share Below Link

ಶಿವಮೊಗ್ಗ: eನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಬೆಳ್ಳಿಹಬ್ಬ ಕಾರ್‍ಯಕ್ರಮವನ್ನು ಜಗದ್ಗುರು ಶಂಕರಾಚಾರ್‍ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಂ ಇದರ ಶ್ರೀ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಪೂಜ್ಯರು, ಪ್ರತಿಯೊಬ್ಬರ ಜೀವನದಲ್ಲಿ ಅವರವರ ಭಾವನೆಗೆ ತಕ್ಕಂತೆ ಪ್ರತಿಫಲ ದೊರಕುತ್ತದೆ. ನಾವು ಪಠಿಸುವ ಮಂತ್ರದಲ್ಲಿ, ತೀರ್ಥದಲ್ಲಿ, ದೇವರಲ್ಲಿ ಗುರುವಿ ನಲ್ಲಿ ಭಕ್ತಿಯಿಂದ ಶ್ರಧ್ಧೆಯಿಂದ ಪ್ರತಿನಿತ್ಯ ಆರಾಧನೆ ಮಾಡಬೇಕು. ಪ್ರತಿಯೊಬ್ಬರಿಗೂ ಅವರ ಜೀವನದ ದೈಹಿಕ, ಮಾನಸಿಕ ತೊಂದರೆಗಳಿಗೆ ಅವರ ಮನಸ್ಸಿನ ಭಾವನೆಗಳೆ ಔಷಧಿಯಾಗಿರುತ್ತವೆ. ನಾವು ನೋಡಿ ಅನುಕರಣೆ ಮಾಡಿ ಕಲಿಯುತ್ತೇವೆ. ಯಾರಾದರೂ ಉಪದೇಶ ಕೇಳಿದರೆ ಮಾತ್ರ ಕೊಡಬೇಕು. ಇಲ್ಲದಿದ್ದರೆ ನೀಡಬಾರದು ಎಂದರು.
ಮಕ್ಕಳಿಗೆ ಸರಸ್ವತಿ ನಮಸ್ತ್ಯ್ಯುಭ್ಯಂ ವರದೇ ಕಾಮರೂಪಿಣೀ ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ ಎಂಬ ಮಂತ್ರ ಪಠಿಸುವು ದನ್ನು ಸಾಮೂಹಿಕವಾಗಿ ಹೇಳಿ ಕೊಟ್ಟು ಅದರ ಮಹತ್ವ ತಿಳಿಯಪಡಿಸಿದರು.
ಸಂಸ್ಥೆಯ ಡಾ| ಪಿ ನಾರಾಯಣ ಅವರು ಮಾತ ನಾಡಿ, eನದೀಪ ಸೀನಿಯರ್ ಸೆಕೆಂಡರಿ ಶಾಲೆಯು ಬೆಳ್ಳಿ ಹಬ್ಬದ ಆಚರಿಸಿಕೊಳ್ಳುತ್ತಿರುವ ಸಂದರ್ಭ ದಲ್ಲಿ ಶಾಲೆ ನಡೆದು ಬಂದ ದಾರಿ ಯನ್ನು ದಾಖಲೆ ಮತ್ತು ಸಚಿತ್ರ ಪೂರಕವಾಗಿ ಪಿಪಿಟಿ ಮೂಲಕ ಶಾಲೆ ಪ್ರಾರಂಭವಾಗಲು ಕಾರಣರಾದ ಎಲ್ಲ ಸಂಸ್ಥಾಪಕರನ್ನು ನೆನೆದು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್ ಅವರು, ನೆರೆದ ಮಕ್ಕಳಿಗೆ ಶಾಲೆ ಪ್ರಾಂಭದಿಂದ ಇಂದಿನವರೆಗೆ ಬೆಳೆದು ಹೆಮ್ಮರವಾಗಿರುವುದಕ್ಕೆ ಕಾರಣ ಶಾಲೆಯ ಶಿಕ್ಷಕರು, ಅವರೇ ಶಾಲೆಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿzರೆ ಎಂದರು.
ಜವಳ್ಳಿಯ eನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕಾಂತ್ ಎಂ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಗೆ ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು
ಕಾರ್‍ಯದರ್ಶಿ ನೀಲಕಂಠ ಮೂರ್ತಿ ಬಿ ಎಲ್., ಖಜಂಚಿ ಡಾ| ಶ್ರೀಧರ್, ಶ್ರೀ ಅರಬಿಂದೋ ಪಪೂ ಕಾಲೇಜಿನ ಪ್ರಾಂಶೂಪಾಲ ಡಾ. ಕೆ ನಾಹರಾಜ್, ಕಾನೂನು ಸಲಹೆಗಾರ ರಾಜೇಶ್ ಎನ್ ಶಾಸ್ರೀಯವರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿ, ಶ್ರೀಕಾಂತ ಗೋಸಾವಿ ವಂದಿಸಿದರು.