ಬಿಜೆಪಿಯ ಡೊಂಬರಾಟಕ್ಕೆ ಜೆಡಿಎಸ್ನವರು ಬಣ್ಣಹಚ್ಚಿದ ಕಲಾವಿದರಾಗಿದ್ದಾರೆ: ಸಂಗಮೇಶ್
ಭದ್ರಾವತಿ: ಈ ಭಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದು, ಇವರ ಗೆಲುವಿಗೆ ನಮ್ಮ ಪಕ್ಷದ ನಾಯಕರುಗಳಲ್ಲಿ ಮತ್ತು ಶಾಸಕರುಗಳಾದ ಸಂಗಮೇಶ್ವರ, ಬೇಳೂರು ಗೋಪಾಲಕೃಷ್ಣ, ಹಾಗು ನಾನು ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇವೆ ಎಂದು ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು .
ಚುನಾವಣೆಯಲ್ಲಿ ಜನರ ತೀರ್ಪಿಗೆ ಯಾರೆ ಆದರೂ ತಲೆ ಭಾಗಲೇಬೇಕು. ಈ ಹಿಂದೆ ಬಂಗಾರಪ್ಪ ರವರನ್ನು ಸೋಲನ್ನು ಈ ಭಾರಿ ನಡೆಯಲಿರುವ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲುವಿನ ಮೂಲಕ ಮತದಾರರು ತೀರಿಸುತ್ತಾರೆ. ಅದರಂತೆ ಭದ್ರಾವತಿಯಲ್ಲೂ ಈ ಭಾರಿ ದಾಖಲೆಯ ಅಂತರದಲ್ಲಿ ಮತ ಬರುವುದು ಗ್ಯಾರಂಟಿ ಎಂದರು.
ದೇಶದಲ್ಲಿ ಬಿಜೆಪಿ ವಿರುದ್ಧದ ರಾಜಕೀಯ ವಾತಾವರಣ ಇದೆ. ಕೇವಲ ರಾಮ ಕೃಷ್ಣ, ಹಿಂದುತ್ವ ಸೇರಿದಂತೆ ಇತರ ಸಂಗತಿಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿzರೆ. ಇದರ ಪರಿಣಾಮ ಅಭಿವೃಧ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಎಂದಿಗೂ ಜತಿ ಮತ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಿಲ್ಲ. ಸಿzಂತದ ಆಧಾರದ ಮೇಲೆ ಚುನಾವಣಾ ಪ್ರಣಾಳಿಕೆಯೆ ಗ್ಯಾರಂಟಿಗಳು ನಮಗೆ ಶ್ರೀ ರಕ್ಷೆಯಾಗಿದ್ದು ಅದರ ಆಧಾರದ ಮೇಲೆ ರಾಜಕಾರಣ ಮಾಡುತ್ತೇವೆ ಎಂದರು.
ನಮ್ಮ ಭೂತ್ ನಮ್ಮ ಜವಾಬಾರಿಯಂತೆ ಸವಾಲಿನ ರೂಪದಲ್ಲಿ ಚುನಾವಣಾ ಪ್ರಚಾರ ಮಾಡಿ ಮತ ಬರುವಂತೆ ಮಾಡುತ್ತೇವೆ. ಪ್ರಚಾರದ ಸಮಯದಲ್ಲಿ ಬಿಜೆಪಿಯವರ ಬಗ್ಗೆ ಸಮಾವೇಶ ಮಾಡಿ ಅಲ್ಲಿ ರಾಜ್ಯದಲ್ಲಿ ಉಚಿತ ಗ್ಯಾರಂಟಿಯನ್ನು ಕೊಟ್ಟ ವರು ಯಾರೆಂಂದು ಪ್ರಶ್ನಿಸೋಣಾ. ಅರಗ eನೇಂದ್ರ ಉಚಿತ ಗ್ಯಾರಂಟಿ ಬಗ್ಗೆ ಅತ್ಯಂತ ಕೀಳು ಮಟ್ಟಿದಲ್ಲಿ ಆರೋಪ ಮಾಡಿzರೆ. ಆದರೆ ಅವರ ಪಕ್ಷದವರು ಈ ಗ್ಯಾರಂಟಿಯ ಫಲಾನುಭವಿಗಳಾಗಿಲ್ಲವೆ ಎಂದು ಪ್ರಶ್ನಿಸಿದರು.
ಶಾಸಕ ಸಂಗಮೇಶ್ವರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಯವರು ಒಂದು ರೀತಿಯಲ್ಲಿ ದೊಂಬರಾಟ ಮಾಡುತ್ತಿದ್ದರೆ, ಜೆಡಿಎಸ್ ನವರು ಬಣ್ಣ ಹಚ್ಚಿದ ಕಲಾವಿದರಾಗಿದ್ದು, ಇಬ್ಬರೂ ಸೇರಿ ಜನರಿಗೆ ಭರಪೂರ ಮನೋರಂಜನೆ ನೀಡುತ್ತಿzರೆ. ಇದರ ಮಧ್ಯೆ ಸಂವಿಧಾನ ತಿದ್ದುಪಡಿ ಮಾಡುವ ಬಗ್ಗೆ ಪದೆ ಪದೆ ಮಾತನಾಡುತ್ತಿzರೆ. ತಿದ್ದುಪಡಿ ಮಾಡುವುದು ಅಂದರೆ ಬಿಜೆಪಿ ಯವರ ದೃಷ್ಟಿಯಲ್ಲಿ ಬದಲಾವಣೆ ಮಾಡುವುದಾಗಿದೆ. ಇದರ ಬಗ್ಗೆ ದೇಶದ ಜನರು ಬಹಳ ಎಚ್ಚರದಿಂದ ಇರಬೇಕು ಎಂದು ಕರೆ ನೀಡಿದರು.
ಜಿಧ್ಯಕ್ಷ ಆರ್.ಪ್ರಸನ್ನ ಕುಮಾರ್, ಎಸ್.ಕುಮಾರ್, ಷಡಾಕ್ಷರಿ, ಮೋಹನ್, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಮಣಿ ಶೇಖರ್, ಕಾಂತರಾಜ್ ಇತರರು ಉಪಸ್ಥಿತರಿದ್ದರು.