ಜಿಲ್ಲಾ ಸುದ್ದಿತಾಜಾ ಸುದ್ದಿ

ಅ. 11 ಮತ್ತು 12ರಂದು ನಗರದಲ್ಲಿ ಜೆಸಿಐ ವಲಯ ಸಮ್ಮೇಳನ…

Share Below Link

ಶಿವಮೊಗ್ಗ : ಜೆಸಿಐ ಶಿವಮೊಗ್ಗ ಮೆಟ್ರೋ ವಲಯದಿಂದ ಅ. ೧೧ ಮತ್ತು ೧೨ ರಂದು ನಗರದ ಬಾಲರಾಜ ಅರಸ್ ರಸ್ತೆಯ ಒಕ್ಕಲಿಗರ ಸಭಾಭವನದಲ್ಲಿ ಎರಡು ದಿನಗಳ ವಲಯ ಸಮ್ಮೇಳನ ನಡೆಯಲಿದೆ ಎಂದು ಜೆಸಿಐ ಶಿವಮೊಗ್ಗ ಮೆಟ್ರೋ ಪ್ರಾಜೆಕ್ಟ್ ಛೇರ್ಮನ್ ಪ್ರಮೋದ್ ಶಾಸ್ತ್ರ್ರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ ಈ ವಲಯ ಸಮ್ಮೇಳನ ನಡೆಯುತ್ತದೆ. ಶಿವಮೊಗ್ಗ ವಲಯ ದಲ್ಲಿ ೧೩ ಜಿಗಳಿವೆ. ನಾಳೆ ಸಂಜೆ ಗೋಪಿ ವೃತ್ತದಿಂದ ವಿಜಯಪಥ ಪಾದಯಾತ್ರೆ ಒಕ್ಕಲಿಗರ ಭವನದವರೆಗೆ ನಡೆಯಲಿದೆ. ಇದರಲ್ಲಿ ಜೋನ್ ೨೪ರ ವಲಯ ಅಧ್ಯಕ್ಷ ಸಿ.ಎ. ಗೌರೀಶ್ ಭಾರ್ಗವ್ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗೌರೀಶ್ ಭಾರ್ಗವ್ ಅವರು ವಹಿಸಲಿದ್ದು, ಮಾಜಿ ಸಚಿವ ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ, ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಲಿದ್ದು, ದಿಕ್ಸೂಚಿ ಭಾಷಣವನ್ನು ನಟ, ಸಾಹಿತಿ ಓಂ ಗಣೇಶ್ ಉಪ್ಪುಂದ ಮಾಡಲಿzರೆ.
ಈ ಸಂದರ್ಭದಲ್ಲಿ ಜೆಸಿಐ ಇಂಡಿಯಾದ ನಿಕಟ ಪೂರ್ವ ಇಒ ವರ್ಷ ಮೆನನ್, ಚನ್ನ ವೀರೇಶ ಹಾವಣಗಿ, ಪ್ರಭು ಲಿಂಗಪ್ಪ ಸಿ. ಹಾಲಗೇರಿ ಭಾಗವಹಿಸಲಿzರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುದರ್ಶನ್, ಶ್ರೀಧರ್, ಸಾಗರ್, ಸಮೃದ್ಧ್, ವಸುಮತಿ, ಚಂದ್ರಶೇಖರ ಮೊದಲಾದವರು ಇದ್ದರು.