ಯಶಸ್ವಿಯಾಗಿ ಜರುಗಿದ ಜಯತೀರ್ಥರ ಆರಾಧನೋತ್ಸವ
ಭದ್ರಾವತಿ: ಹಳೆ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಜಯತೀರ್ಥರ ಆರಾಧನೆ ನೆರಗಿತು ಬೆಳಿಗ್ಗೆ ೬ ಗಂಟೆಗೆ ನಿರ್ಮಾಲ್ಯ, ೭ಕ್ಕೆ ಪಂಚಾಮೃತ ಅಭಿಷೇಕ, ೧೦ ಗಂಟೆಗೆ ಪ್ರಾಕಾರದ ಒಳಗಡೆಗೆ ರಥೋತ್ಸವ ಹಾಗೂ ೧೧ ಗಂಟೆಗೆ ಶ್ರೀನಿಧಿ ಗುಡಿ ಶಿವಮೊಗ್ಗ ಅವರಿಂದ ಜಯತೀರ್ಥರ ಉಪನ್ಯಾಸವನ್ನು ಮಾಡಿದರು. ತದನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ನೆರೆವೇರಿತು.
ಈ ಕಾರ್ಯಕ್ರಮವನ್ನು ಗುರುರಾಜ ಸೇವಾ ಸಮಿತಿ ಅಧ್ಯಕ್ಷರಾದ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮಾರ್ ರಾಘವೇಂದ್ರ ತಂತ್ರಿ, ಪ್ರಧಾನ ಕಾರ್ಯದರ್ಶಿ ಜೀ ರಮಾಕಾಂತ್, ನಿರಂಜನಾಚಾರ್ಯ, ಮಧುರ ಜೈತೀರ್ಥ ಹಾಗೂ ಈ ಎ ಕಾರ್ಯಕ್ರಮಗಳಿಗೆ ಸಹಕಾರ ನೀಡಿದಂತಹ ಗೋಪಾಲಕೃಷ್ಣ ಆಚಾರ್, ಶ್ರೀನಿವಾಸ ಆಚಾರ್, ಶುಭ ಗುರುರಾಜ್, ಸುಪ್ರೀತಾ ತಂತ್ರಿ ಹಾಗೂ ಎ ಭಕ್ತಾದಿಗಳು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.