ಜ.26: ಜಾನಪದ ಸಮ್ಮೇಳನ..
ಶಿವಮೊಗ್ಗ: ಕರ್ನಾಟಕ ಜನಪದ ಪರಿಷತ್ತಿನ ನೇತೃತ್ವದಲ್ಲಿ ಆನವಟ್ಟಿ ಬಳಿಯ ಕೋಟಿಪುರದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿ ಸ್ಕೂಲ್ ಸಹಯೋಗದಲ್ಲಿ ಜ.೨೬ ರಂದು ಶಿವಮೊಗ್ಗ ಜಿಲ್ಲಾ ೫ನೇ ಜನಪದ ಸಮ್ಮೇಳನ ಏರ್ಪ ಡಿಸಿದೆ ಎಂದು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ರುವ ಜನಪದ ಕಲಾವಿದ ಬೇಗೂರು ಶಿವಪ್ಪ ಅವರ ಸರ್ವಾ ಧ್ಯಕ್ಷತೆಯಲ್ಲಿ ಜಿಲ್ಲೆಯ ಜನಪದ ಕಲಾ ತಂಡಗಳಲ್ಲಿ ದೇವಿ ಕುಣಿತ, ಸುಗ್ಗಿ ಕುಣಿತ, ಲಾವಣಿ, ತತ್ವಪದ, ಜೋಗಿಪದ, ಗೀಗೀಪದ, ಚೌಡಿಕೆ ಪದ, ಡೊಳ್ಳು ತಂಡ, ಸೋಬಾನೆ ಪದಗಳು, ಜನಪದ ಹಾಡು, ಜೋಗತಿ ನೃತ್ಯ, ಕೋಲಾಟ ತಂಡ, ಕರ್ಪಾಳ ಮೇಳ, ಜೋಗುಳ ಪದ, ಜನಪದ ಗೀತ ಗಾಯನ, ಚಂಡೆ, ಅಂಟಿಗೆ ಪಂಟಿಗೆ, ಲಂಬಾಣಿ ನೃತ್ಯ, ಜನಪದ ಹಾಡು ತಂಡಗಳು ಭಾಗವಹಿಸಲಿವೆ ಎಂದರು.
ಜ. ೨೬ ರಂದು ಬೆಳಿಗ್ಗೆ ೦೯:೩೦ ಕ್ಕೆ ಆನವಟ್ಟಿಯ ಪದವಿ ಪೂರ್ವ ಕಾಲೇಜು ಎದುರಿನಿಂದ ಸಮ್ಮೇಳನ ಅಧ್ಯಕ್ಷರಾದ ಈಸೂರಿನ ಲಾವಣಿ ಕಲಾವಿದ ಬೇಗೂರು ಶಿವಪ್ಪ ಅವರ ಜೊತೆಯಲ್ಲಿ ಜನಪದ ಕಲಾ ತಂಡಗಳು, ಊರಿನ ಮುಖಂ ಡರು, ಗಣ್ಯರು, ಸಂಘ, ಸಂಸ್ಥೆ ಪದಾಧಿಕಾರಿಗಳು, ಕನ್ನಡದ ಮನಸ್ಸುಗಳ ಜೊತೆಯಲ್ಲಿ ಜನಪದ ನಡಿಗೆ ನಡೆಯಲಿದೆ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸೊರಬ ತಾಲ್ಲೂಕು ಅಧ್ಯಕ್ಷ ಶಂಕರ್ ಶೇಟ್ ಜನಪದ ನಡಿಗೆಗೆ ಚಾಲನೆ ನೀಡಲಿದ್ದಾರೆ. ಕಜಪ ಜಿಲ್ಲಾ ಉಪಾಧ್ಯಕ್ಷ ಡಿ. ಸಿ. ದೇವರಾಜ್, ಪ್ರಧಾನ ಕಾರ್ಯದರ್ಶಿ ಡಾ. ಕೆ. ಜಿ. ವೆಂಕಟೇಶ್ ಉಪಸ್ಥಿತರಿರು ತ್ತಾರೆ ಎಂದರು.
ಮೆರವಣಿಗೆ ನಂತರ ಕೋಟಿ ಪುರದಲ್ಲಿರುವ ಎವರಾನ್ ಇಂಟ ರ್ ನ್ಯಾಷನಲ್ ಸ್ಕೂಲ್ ಆವರಣ ದಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಕರ್ನಾಟಕ ಜನ ಪದ ಪರಿಷತ್ತು ಸಂಸ್ಥಾಪಕರಾದ ನಾಡೋಜ ಡಾ. ಎಚ್. ಎಲ್. ನಾಗೇಗೌಡರ ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆನವಟ್ಟಿ ಹೋಬಳಿ ಅಧ್ಯಕ್ಷರು, ಎವರಾನ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಸ್ಥಾಪಕರಾದ ಕಾರ್ತಿಕ್ ಸಾಹುಕಾರ್ ಅವರು ಆಶಯ ಮಾತುಗಳನ್ನು ಆಡಲಿದ್ದಾರೆ ಎಂದರು.
ಸಮ್ಮೇಳನ ಅಧ್ಯಕ್ಷರಾದ ಬೇಗೂರು ಶಿವಪ್ಪ ಅವರು, ಹಿಂದಿನ ಸಮ್ಮೇಳನ ಅಧ್ಯಕ್ಷರಾದ ಆಂಜನೇಯ ಜೋಗಿ ಜೊತೆ ಯಲ್ಲಿರುತ್ತಾರೆ. ಸೊರಬ ತಹಶಿ ಲ್ದಾರರಾದ ಸರ್ಕಾವತ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಕುಮಾರ್ ಎನ್. ಆರ್., ಕ್ಷೇತ್ರ ಶಿಕ್ಷಣಾಧಿಕಾರಿಗ ಳಾದ ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿಕಾರಿಪುರ ಕಜಪ ಅಧ್ಯಕ್ಷರಾದ ಬಿ. ಪಾಪಯ್ಯ ಸಮ್ಮೇಳನಾಧ್ಯಕ್ಷರ ಕುರಿತು ಮಾತನಾಡಲಿದ್ದಾರೆ. ತಾ ಲ್ಲೂಕು ಕಜಪ ಅಧ್ಯಕ್ಷರಾದ ಕಲಂ ದರ್ ಸಾಬ್ ಅಧ್ಯಕ್ಷತೆ ವಹಿಸಲಿ ದ್ದಾರೆ ಎಂದರು.
ಸಂಜೆ ನಡೆಯುವ ಸಮಾ ರೋಪ ಸಮಾರಂಭದಲ್ಲಿ ಸಂಸದ ಬಿವೈಆರ್ ಸಮಾರೋಪ ಮಾತುಗ ಳನ್ನಾಡು ವರು. ಕಲ್ಲಂದರ್ ಸಾಬ್, ಕಾರ್ತಿಕ್ ಸಾಹುಕರ್, ಬಸವನ ಗೌಡ್ರು ಮುಖ್ಯ ಅತಿಥಿಗಳಾಗಿದ್ದು, ಬೇಗೂರು ಶಿವಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಸಾಹಿತಿ ಪರಮೇಶ್ವರ ಕರೂರು, ವಿ.ಟಿ. ಸ್ವಾಮಿ, ಶಿವಾನಂದ ಪಾಣಿ, ಎಸ್. ಆರ್. ಕುಮಾರ್ ಸ್ವಾಮಿ, ಬಸವನ ಗೌಡ್ರು, ಸಂಪತ್ ಕುಮಾರ್, ಚಂದ್ರಶೇಖರ ಜರ್ಮಲೆ, ಡಾ. ವಿಶ್ವನಾಥ ನಾಡಿಗೇರ,ಎನ್. ಎಂ. ಪರಮೇಶ್, ಸಾಗರ ಸಿರಿವಂತೆ ಸತ್ಯನಾರಾಯಣ, ತೀರ್ಥಹಳ್ಳಿ ಲೀಲಾವತಿ ಜಯಶೀಲ, ಭದ್ರಾ ವತಿ ಎಂ. ಆರ್. ರೇವಣಪ್ಪ ಸೇರಿ ದಂತೆ ಹಲವರು ಭಾಗವ ಹಿಸಲಿದ್ದಾರೆ ಎಂದರು.
ಪದಾಧಿಕಾರಿಗಳಾದ ಡಿ. ಗಣೇಶ್, ಡಾ.ಕೆ.ಜಿ. ವೆಂಕಟೇಶ್, ಸೋಮಿನಕಟ್ಟಿ ಉಪಸ್ಥಿತರಿದ್ದರು.