ಜಿಲ್ಲಾ ಸುದ್ದಿತಾಜಾ ಸುದ್ದಿ

ಜ. 19 : ಸಾಗರ ಲಯನ್ಸ್ ಕ್ಲಬ್‌ನಿಂದ ಬಸ್ ತಂಗುದಾಣಕ್ಕೆ ಶಂಕುಸ್ಥಾಪನೆ…

Share Below Link

ಸಾಗರ: ಲಯನ್ಸ್ ಕ್ಲಬ್ ಸಾಗರ ಘಟಕದಿಂದ ಈ ವರ್ಷ ಹಲವಾರು ಶಾಶ್ವತ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ ಟಿ. ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.
ನ್ಯಾಯಾಲಯದ ಎದುರಿನ ಕೆ.ಜಿ. ಒಡೆಯರ್ ಸರ್ಕಲ್ ಬಳಿ ಸುಮಾರು ೬ ಲಕ್ಷ ರೂ. ವೆಚ್ಚದಲ್ಲಿ ಈಶ್ವರಪ್ಪ ನಾಯ್ಕರ ಸ್ಮರಣಾರ್ಥ ಅತ್ಯಾಧುನಿಕ ರೀತಿಯಲ್ಲಿ ನೂತನ ಬಸ್ ತಂಗುದಾಣಕ್ಕೆ ಜ.೧೯ರ ಬೆಳಿಗ್ಗೆ ೧೦ ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸುವರು ಎಂದ ಅವರು, ಈಗಾಗಲೇ ಲಯನ್ಸ್ ಕ್ಲಬ್ ವತಿಯಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಒಂದು ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಇದು ಎರಡನೇ ಬಸ್ ತಂದುದಾಣ ಎಂದರು.
ಲಯನ್ಸ್ ಕ್ಲಬ್‌ನ ಶಾಶ್ವತ ಯೋಜನೆಯಲ್ಲಿ ೨೦ ಬ್ಯಾರಿಕೇಡ್ ಗಳನ್ನು ಅಳವಡಿಸುವ ಯೋಜನೆ ಯಿದ್ದು, ಆಭರಣ ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ೧೦ ವೇಸ್ಟ್ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸುವ ಕೇಂದ್ರವನ್ನು ನಿಗದಿಪಡಿಸಿ ಸ್ಥಾಪಿಸಲಾಗುವುದು ಎಂದರು.
ಲಯನ್ಸ್ ಜಿ ರಾಜ್ಯಪಾಲರಾದ ಸಪ್ನ ಸುರೇಶ್, ಪ್ರಮುಖರಾದ ವೀರೇಶ ಕುಮಾರ್, ಎಚ್.ಕೆ.ನಾಗಪ್ಪ, ಕೆ.ಸುರೇಶ್ ಪ್ರಭು, ಅಶ್ವಿನಿ ಕುಮಾರ್, ನಾಗರಾಜ್ ಈ. ಅತಿಥಿಗಳಾಗಿ ಭಾಗವಹಿಸುವರು. ಕ್ಲಬ್ ಅಧ್ಯಕ್ಷ ಪ್ರಸನ್ನ ಟಿ. ಅಧ್ಯಕ್ಷತೆ ವಹಿಸುವರು ಎಂದರು.
ಪ್ರಮುಖರಾದ ಈಳಿ ಶ್ರೀಧರ್, ಕೆ.ಬಿ.ಮಹಾಬಲೇಶ್, ನಾಗರಾಜ್ ಈ., ಲಿಂಗರಾಜು, ಕೆ.ಜಿ.ಗುರುಲಿಂಗಯ್ಯ ಇದ್ದರು.