ಜ.17: ಫ್ರೀಡಂ ಪಾರ್ಕ್‌ನಲ್ಲಿ ಸಂಕ್ರಾಂತಿ ಸಂಭ್ರಮ – ಪೊಂಗಲ್ ಉತ್ಸವ…
ಶಿವಮೊಗ್ಗ: ಕಳೆದ ಎರಡು ವರ್ಷಗಳಿಂದ ಗೋಸಂಕ್ಷಣೆಗೆ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಗೋವರ್ಧನ ಟ್ರಸ್ಟ್ ವತಿಯಿಂದ ಜ.೧೭ರಂದು ಮಧ್ಯಾಹ್ನ ೩ಗಂಟೆ ಯಿಂದ ನಗರದ ಅಲ್ಲಮಪ್ರಭು ಮೈದಾನದಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಹಾಗೂ ಪೊಂಗಲ್ ಉತ್ಸವವನ್ನು ಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗು ವುದು ಎಂದು ಟ್ರಸ್ಟಿನ ಸಂಚಾಲಕರಾದ ಶೇಷಾಚಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಪೂಜೆ ಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಆಗಮಿಸಿದ ಎಲ್ಲರಿಗೂ ಗೋಪೂಜೆಗೆ ಅವಕಾಶ ಕಲ್ಪಿಸಲಾಗುವುದು. ದೇಶದ ವಿವಿಧ ಭಾಗಗಳಲ್ಲಿ ಸಂಕ್ರಾಂತಿ ಸಂಭ್ರಮ ವನ್ನು ವಿವಿಧ ರೀತಿಯಲ್ಲಿ ಆಚರಿಸ ಲಾಗುತ್ತದೆ. ಅದರ ಒಂದು ವಿಧಧ ಪೊಂಗಲ್ ತಯಾರಿಯನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಪೊಂಗಲ್ ತಯಾರಿಕೆಗೆ ೨೪೦ ಅಡಿ ಉದ್ಧ, ೧೦ ಅಡಿ ಅಗಲದ ವೇದಿಕೆ ಸಿದ್ಧಪಡಿಸಲಾಗುವುದು. ಈ ಪೊಂಗಲ್ ತಯಾರಿಸಿ ಸಾರ್ವಜನಿ ಕರಿಗೆ ವಿತರಣೆ ಮಾಡಲಾಗುವುದು. ಇದಕ್ಕಾಗಿ ೨೫ಕ್ಕೂ ಹೆಚ್ಚು ತಮಿಳು ಸಮುದಾಯದ ಸಹೋದರಿ ಯರು ಸಿದ್ಧರಾಗಿzರೆ ಎಂದರು.
ಕೃಷಿ ಪದಾರ್ಥಗಳನ್ನು ಸ್ಥಳದ ಜೋಡಿಸಿ, ಅದನ್ನು ಪೂಜಿಸಿ, ಕೃಷಿ ಪೂಜೆ, ಮಾಡಲಾಗುವುದು ಅಲ್ಲದೆ ನಶಿಸುತ್ತಿರುವ ಎತ್ತಿನಗಾಡಿಗಳನ್ನು ಸ್ಥಳದ ತರಿಸಿ ಅವುಗಳ ಸಾರ್ವಜನಿಕರು ಪ್ರಯಾಣಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅವಕಾಶವನ್ನು ಕಲ್ಪಿಸ ಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ೩೦೦ ಜನರಿಗೆ ಚಕ್ಕಡಿಯಲ್ಲಿ ಪ್ರಯಾಣಿಸುವ ಅವಕಾಶ ನೀಡಲಾ ಗುವುದು. ಇದಕ್ಕೆ ತಲಾ ೨೦ ರೂಪಾಯಿ ಸೇವಾಶುಲ್ಕ ನಿಗಧಿಪಡಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಸಲಾಗಿದ್ದು, ೧೦೦ ಜನರಿಗೆ ಇದರಲ್ಲಿ ಅವಕಾಶ್ ಕಲ್ಪಿಸಲಾಗು ವುದು. ಅತ್ಯುತ್ತಮವಾಗಿ ರಂಗೋಲಿ ಬಿಡಿಸಿದವರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅಲ್ಲದೆ ಈ ಭಾಗದ ಜನಪದ ಹಾಡು ಮತ್ತು ನೃತ್ಯಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅತ್ಯಂತ ಅಪರೂಪದ ಮಲೆನಾಡು ಉತ್ಸವ ಜರುಗುವುದು. ಇದರ ಸದುಪಯೋಗ ಪಡೆದುಕೊಳ್ಳ ಬೇಕೆಂದು ಅವರು ಕೋರಿದರು.
ರಂಗೋಲಿ, ಜನಪದ ಹಾಡು ಮತ್ತು ನೃತ್ಯಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸುವರ್ಣಾ ಶಂಕರ್-೯೪೮೦೧೫೦೫೭೧, ಶುಭಾ ರಾಘವೇಂದ್ರ-೯೪೮೦೫೦೪೭೩೭, ಮತ್ತು ದೀಪಾ ಎ.ವಿ. -೯೮೮೦೬೧೮೯೪೫ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.
ಪ್ರಮುಖರಾದ ಕೆ.ಎಸ್. ಈಶ್ವರಪ್ಪ, ಉಮೇಶ್ ಆರಾಧ್ಯ, ಉಮಾ ಮೂರ್ತಿ, ಶುಭಾ ರಾಘವೇಂದ್ರ, ಸುವರ್ಣಾಶಂಕರ್, ಮಂಜುಳಾ ಮಂಜುನಾಥ್, ದೀಪಾ ಎ.ವಿ., ಕವಿತಾ ಜೋಯ್ಸ್, ಶ್ರೀಕಾಂತ್ ಇದ್ದರು.

