ಜ.17 ಮತ್ತು 18 : ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ…
ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ ಜಿ ಶಾಖೆಯಿಂದ ಜ.೧೭ ಮತ್ತು ೧೮ರಂದು ನೆಹರೂ ಕ್ರೀಡಾಂಗಣ ದಲ್ಲಿ ಸರ್ಕಾರಿ ನೌಕರರ ಜಿ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಘದ ಜಿಧ್ಯಕ್ಷ ಆರ್. ಮೋಹನ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕ್ರೀಡಾಕೂಟದಲ್ಲಿ ಜಿಯ ಸುಮಾರು ಮೂರು ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದು, ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಭಾಗವಹಿಸಿದ ಎ ಕ್ರೀಡಾಪಟುಗಳಿಗೆ ಟೋಪಿ ನೀಡಲಾಗುವುದು. ಕ್ರೀಡಾಕೂಟ ದಲ್ಲಿ ಭಾಗವಹಿಸುವ ನೌಕರರು ಜ.೧೭ರ ಬೆಳಿಗ್ಗೆ ೮ ರಿಂದ ೧೦ರ ವರೆಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಕ್ರೀಡಾಕೂಟವು ನೆಹರು ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಮತ್ತು ಗುಂಪುಸ್ಪರ್ಧೆಗಳು ನಡೆಯಲಿದ್ದು, ಸಾಂಸ್ಕತಿಕ ಸ್ಪರ್ಧೆಗಳು ಸರ್ಕಾರಿ ನೌಕರರ ಭವನ, ಅಂಬೇಡ್ಕರ್ ಭವನ ಇನ್ನಿತರ ಕಡೆ ನಡೆಯಲಿವೆ. ಕ್ರೀಡಾಕೂಟ ಮತ್ತು ಸಾಂಸ್ಕತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ವಿಶೇಷ ಸಾಂದರ್ಭಿಕ ರಜೆ ಇರುತ್ತದೆ ಎಂದರು.
ಜ.೧೭ರಂದು ಬೆಳಿಗ್ಗೆ ೧೦ಕ್ಕೆ ನೆಹರು ಕ್ರೀಡಾಂಗಣದಲ್ಲಿ ಜಿ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಧ್ವಜರೋಹಣ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಕೆ. ಸಂಗಮೇಶ್ವರ್, ಗೋಪಾಲ ಕೃಷ್ಣ ಬೇಳೂರು, ಆರಗ eನೇಂದ್ರ, ಶಾರದಾ ಪೂರ್‍ಯನಾಯ್ಕ್, ಬಿ.ವೈ. ವಿಜಯೇಂದ್ರ, ಎಸ್.ಎಲ್. ಬೋಜೇಗೌಡ, ಭಾರತಿಶೆಟ್ಟಿ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಷ್ ಬಾನು, ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಹೆಚ್.ಎಸ್. ಸುಂದರೇಶ್, ಚೇತನ್‌ಗೌಡ, ಜಿ.ಪಲ್ಲವಿ, ಡಾ. ಅಂಶುಮತ್, ಸಿ.ಎಸ್.ಚಂದ್ರಭೂಪಾಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹಾಗೂ ಇನ್ನಿತರರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿzರೆ ಎಂದರು.
ಸಂಘದ ಪ್ರಮುಖರಾದ ಆರ್.ಪಾಪಣ್ಣ, ಜಿ.ಎಂ.ದಿನೇಶ್, ಎಸ್.ಆರ್.ನರಸಿಂಹಮೂರ್ತಿ, ಕೃಷ್ಣಮೂರ್ತಿ, ಮಾರುತಿ, ಅಶೋಕ್, ಚೇತನ್ ಇದ್ದರು.

