ಜಿಲ್ಲಾ ಸುದ್ದಿತಾಜಾ ಸುದ್ದಿ

ಜ.೧೧: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ೭ನೇ ಸಾಹಿತ್ಯ ಸಮ್ಮೇಳನ…

Share Below Link

ಶಿಕಾರಿಪುರ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿಕಾರಿಪುರ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಜ.೧೧ರ ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ೭ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ ಶಶಿಧರ ಸ್ವಾಮಿ ಕಣಿವೆಮನೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ನಾಡಿನ ಹಲವು ಶ್ರೇಷ್ಟ ಶರಣರಿಗೆ ಕೊಡುಗೆ ನೀಡಿದ ಹೆಗ್ಗಳಿಕೆಯನ್ನು ತಾಲೂಕು ಹೊಂದಿದ್ದು ಹಲವು ಶ್ರೇಷ್ಟ ಶಿವಶರಣರು ನಡೆದಾಡಿದ ಪುಣ್ಯ ನೆಲವಾಗಿದೆ ಈ ದಿಸೆಯಲ್ಲಿ ಶರಣ ಸಾಹಿತ್ಯ ಸಮ್ಮೇಳನ ಅತ್ಯಂತ ಮಹತ್ವzಗಿದ್ದು ಶರಣರ ನಡೆನುಡಿ ತತ್ವ ಸಿzಂತ ಆದರ್ಶವನ್ನು ಮುಂದಿನ ಪೀಳಿಗೆ ತಲುಪಿಸುವ ದಿಸೆಯಲ್ಲಿ ಸಮ್ಮೇಳನ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ ಎಂದರು.
ಸತತ ೭ನೇ ವರ್ಷದ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ವಿಶ್ರಾಂತ ಮುಖ್ಯೋಪಾ ಧ್ಯಾಯ ಸುಭಾಷಚಂದ್ರ ಸ್ಥಾನಿಕ್ ಆಯ್ಕೆಯಾಗಿದ್ದು, ಶರಣ ಸಾಹಿತ್ಯ ಕೃಷಿಯಲ್ಲಿ ಪಾಂಡಿತ್ಯ ಹೊಂದಿರುವ ಸರ್ವಾಧ್ಯಕ್ಷರ ಆಯ್ಕೆ ಸಮ್ಮೇಳನ ಹೊಸತನದ ನಿರೀಕ್ಷೆ ಹೊಂದಿದೆ ಎಂದರು.
ಅಂದು ಬೆಳಿಗ್ಗೆ ೮.೩೦ಕ್ಕೆ ತಹಸೀಲ್ದಾರ್ ಮಂಜುಳ ಭಜಂತ್ರಿ ಅವರು ರಾಷ್ಟ್ರದ್ವಜರೋಹಣದ ಮೂಲಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಲಿzರೆ ಬಿಇಒ ಲೋಕೇಶಪ್ಪ ನಾಡದ್ವಜಕ್ಕೆ ಹಾಗೂ ತಾ.ಶ.ಸಾ.ಪರಿಷತ್ ಅಧ್ಯಕ್ಷರಾಗಿ ಪರಿಷತ್ ದ್ವಜರೋಹಣ ನೆರವೇರಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಶಾಸಕ ವಿಜಯೇಂದ್ರ ಉದ್ಘಾಟಿಸಲಿದ್ದು ನಿಕಟಪೂರ್ವ ಅಧ್ಯಕ್ಷೆ ಮಧುರಾ ಅಶೋಕ್ ನೂತನ ಸರ್ವಾಧ್ಯಕ್ಷರಿಗೆ ಅನೌಪಚಾರಿಕವಾಗಿ ಅಧಿಕಾರ ಹಸ್ತಾಂತರಿಸಲಿzರೆ. ವಿರಕ್ತಮಠದ ಶ್ರೀ ಚನ್ನಬಸವಸ್ವಾಮೀಜಿ, ಬಸವಾಶ್ರಮದ ಮಾತೆ ಶರಣಾಂಬಿಕೆ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಅಂದು ಮದ್ಯಾಹ್ನ ೧೨.೩೦ಕ್ಕೆ ಪ್ರಥಮ ಗೋಷ್ಠಿಯಲ್ಲಿ ಶರಣ ಸಂಸ್ಕೃತಿಯಲ್ಲಿ ಕೃಷಿ ವಿಷಯ ಕುರಿತು ಆಧ್ಯಾತ್ಮಿಕ ಚಿಂತಕರಾದ ಅಮೃತ ಗಿರಿಧರ ಪೇಟ್ಕರ್, ದ್ವಿತೀಯ ಗೋಷ್ಠಿಯಲ್ಲಿ ಶಿವಶರಣೆ ಸತ್ಯಕ್ಕನ ಕುರಿತು ಲೇಖಕಿ ಡಾ.ಶಶಿಕಲಾ ಉಪನ್ಯಾಸ ನೀಡಲಿzರೆ ಎಂದರು.
ಸಂಜೆ ೪ಕ್ಕೆ ಮೈತ್ರಾ ದೇವಿ ಯಡಿಯೂರಪ್ಪ ದತ್ತಿ ಹಾಗೂ ಸಮ್ಮೇಳನದ ಸಮಾರೋಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನವರಿಗೆ ಅಭಿನವ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿzರೆ. ಸಾನಿಧ್ಯವನ್ನು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಶ್ರೀ ಡಾ.ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಸವ ತತ್ವ ಪೀಠ ಚಿಕ್ಕಮಗಳೂರು ಹಾಗೂ ಶಿವಮೊಗ್ಗದ ಡಾ. ಬಸವಮರುಳಸಿದ್ದ ಸ್ವಾಮಿಗಳು ವಹಿಸಲಿದ್ದು ಉಪನ್ಯಾಸಕ ಹಾಗೂ ತಾ.ಶ.ಸಾ.ಪ ಉಪಾಧ್ಯಕ್ಷ ಕೆ.ಎಚ್ ಪುಟ್ಟಪ್ಪ ನಿರ್ಣಯ ಮಂಡಿಸಲಿ zರೆ ಎಂದು ತಿಳಿಸಿದರು.
ಪ್ರಮುಖರಾದ ಡಾ.ಬಿ.ಡಿ ಭೂಕಾಂತ್, ಮಹಾರುದ್ರ, ಅಂಗಡಿ ಜಗದೀಶ್, ಸೋಮ ಶೇಖರ್ ಗಟ್ಟಿ,ರುದ್ರಮುನಿ, ಬಿ.ವಿ ಮಂಜುನಾಥ್,ಮುತ್ತಣ್ಣ,ಜಯಣ್ಣ ಮತ್ತಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.