ಜೈನ ಮುನಿ ಹತ್ಯೆ: ಕಠಿಣ ಶಿಕ್ಷಗೆ ಆಗ್ರಹ….
ಹೊನ್ನಾಳಿ :ಅವಳಿ ತಾಲೂಕಿನ ದಿಗಂಬರ ಜೈನ ಸಮಾಜದವರಿಂದ ಹೊನ್ನಾಳಿ ಟಿಬಿ ಸರ್ಕಲ್ ನಿಂದ ಕಾಲ್ನಡಿಗೆ ಮೂಲಕ ರಾಯಣ್ಣ ಸಕ ಲ್‌ನಲ್ಲಿ ಧಿಕ್ಕಾರವನ್ನು ಕೂಗುತ್ತಾ ಪ್ರೊಟೆಸ್ಟ್ ಮಾಡುವ ಮೂಲಕ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಯನ್ನು ಸಲ್ಲಿಸಿದರು.
ಮುನಿಶ್ರೀ ೧೦೮ ರಾಮ ಕುಮಾರನಂದಿ ಮಹಾರಾಜ ಅವರನ್ನು ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮ ಇವರನ್ನು ಭರ್ಬರ್ ವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳಿಗೆ ಭಾರತ ಸಂವಿ ಧಾನ ದಂಡ ಸಂಹಿತೆ ರೀತಿಯ ಕಠಿಣ ಶಿಕ್ಷೆ ವಿಧಿಸಬೇಕಾಗಿ ಕೊಳ್ಳು ತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಿಗಂಬರ ಜೈನ ಸಮಾಜ ರಾಜ್ಯದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸುವ ಮೂಲಕ ಜಿಧಿಕಾರಿಗಳಿಗೆ ಕಳಿಸುವಂತೆ ತಾಲೂಕು ದಂಡಾ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ದಿಗಂಬರ ಜೈನ ಸಮಾಜದವರು ಹಾಗೂ ಇತರೆ ಸಮಾಜದವರು ಭಾಗವಹಿಸಿದ್ದರು.