ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಶೋಕ್ ನಾಯ್ಕರ ಬೆನ್ನಿಗೆ ನಿಂತ ಜಾಗೃತ ಭೋವಿ ತರುಣ ಪಡೆ…

Share Below Link

ಶಿವಮೊಗ್ಗ: ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಜಗೃತ ಭೋವಿ ತರುಣ ಪಡೆ ಬಿಜೆಪಿ ಯನ್ನು ಬೆಂಬಲಿಸಲಿದೆ ಎಂದು ಪಡೆಯ ಪ್ರಮುಖರಾದ ಸುರೇಶ್ ಬಾಬು ಸುದ್ದಿಗೋಷ್ಟಿಯಲ್ಲಿ ತಿಳಿಸಿ ದರು.
ರಾಷ್ಟ್ರ ರಕ್ಷಣೆ ಮತ್ತು ಧರ್ಮ ರಕ್ಷಣೆ ಪ್ರಶ್ನೆ ಬಂದಾಗ ಸಮಾಜ ಬಿಜೆಪಿಗೆ ಮತ ನೀಡುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ಕಡೆ ಭೋವಿ ಸಮಾಜ ವಾಸ ಮಾಡುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಮೂಲ ಸೌಲಭ್ಯ ನೀಡಿದೆ. ಮತ್ತು ನಿರಂತರ ವಾಗಿ ಸಮಾಜವನ್ನು ರಕ್ಷಿಸುತ್ತಾ ಬಂದಿದೆ ಎಂದರು.
ದೇಶದ ಭದ್ರತೆ ಮತ್ತು ಗಡಿ ವಿಚಾರದಲ್ಲಿ ಯಾವುದೇ ರಾಜಿ ಆಗದೇ ದಿಟ್ಟ ನಿರ್ಧಾರ ತಳೆದು ಬಿಜೆಪಿ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿದೆ. ಭೋವಿ ಸಮಾಜದ ಆರ್ಥಿಕ ಮತ್ತು ಶೈಕ್ಷಣಿಕ ಹಾಗೂ ಸಾಮಾಜಿಕ ಅನುಕೂಲವನ್ನು ಕಾಲಕ್ಕೆ ತಕ್ಕಂತೆ ಮಾಡಿದ್ದು, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಯಲ್ಲಿ ವಿಶೇಷ ನೆರವು ನೀಡಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಭೋವಿ ಸಮಾಜ ಕೆಲಸ ಮಾಡುವ ಜಗಕ್ಕೆ ತೆರಳಿ ವ್ಯಾಕ್ಸಿನ್ ನೀಡಿದೆ. ಎಂಪಿ, ಎಂಎಲ್‌ಎ ಚುನಾವಣೆಯಲ್ಲೂ ಭೋವಿ ಸಮಾಜದ ಅಭ್ಯರ್ಥಿ ಗಳಿಗೆ ಅವಕಾಶ ನೀಡಿ ಕೇವಲ ಪಂಚಾಯತ್ ಚುನಾವಣೆಗೆ ಸಮಾಜ ಸೀಮಿತಿಗೊಳಿಸಬೇಡಿ. ಭವಿಷ್ಯದ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಲು ತರುಣ ಪಡೆ ಸಿದ್ಧವಿದೆ. ಆದರೆ ಭೋವಿ ಸಮಾಜ ನಿರ್ಲಕ್ಷಿಸಬೇಡಿ ಎಂದರು.
ಸಮಾಜದ ಆರ್ಥಿಕ ದುರ್ಬಲ ವರ್ಗ ಮತಾಂತರವಾಗುವ ಸಂದರ್ಭದಲ್ಲಿ ಭೋವಿ ತರುಣ ಪಡೆ ಅದನ್ನು ತಡೆದಿದೆ. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತಂದಿರುವುದಕ್ಕೆ ನಾವು ಅಭಿನಂದಿಸುತ್ತೇವೆ ಎಂದರು.
ತರುಣ ಪಡೆ ಕೆಲವು ಅಜೆಂಡಾ ರೂಪಿಸಿದ್ದು, ಶಾಶ್ವತವಾಗಿ ಮತಾಂ ತರ ತಡೆಗಟ್ಟುವುದು ಶೋಷಣೆಗೆ ಒಳಗಾದ ವ್ಯಕ್ತಿಗಳ ಪರವಾಗಿ ನಿಲ್ಲು ವುದು, ಸರ್ಕಾರದ ಯೋಜನೆ ಗಳನ್ನು ಪ್ರತಿ ಮನೆಗೆ ತಿಳಿಸುವುದು, ಅಧಿಕಾರಿಗಳಿಂದಾಗುವ ದೌರ್ಜನ್ಯ ತಡೆಗಟ್ಟುವುದು, ವಲಸೆ ಬಂದು ಕೆಲಸ ಮಾಡುವ ಸಮಾಜದ ವ್ಯಕ್ತಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತರುಣಪಡೆ ಕೆಲಸ ಮಾಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ನಾಯ್ಕ್ ಭೋವಿ ಸಮಾಜದ ಬಗ್ಗೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಪ್ರಜವಂತರ ಕೊರತೆ ಇದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಖಂಡಿಸುತ್ತೇವೆ ಎಂದರು.
ಗೋಷ್ಠಿಯಲ್ಲಿ ಯುವರಾಜ್, ಐಹೊಳೆ ಜಗದೀಶ್, ಧನರಾಜ್, ವೆಂಕಟೇಶ್ ಇದ್ದರು.