ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆಯರು ತಮ್ಮ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸದಿರುವುದು ವಿಷಾದನೀಯ

Share Below Link

ಶಿಕಾರಿಪುರ: ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರು ವೈಯುಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೆ ನಿರ್ಲಕ್ಷಿಸುತ್ತಿ ರುವುದು ವಿಷಾದನೀಯ ಎಂದು ಮೂಲವ್ಯಾಧಿ ಶಸ್ತ್ರ ಚಿಕಿತ್ಸಾ ತe ಡಾ.ರಂಜನಿ ಬಿದರಳ್ಳಿ ತಿಳಿಸಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸ ಕೋಶ, ಯುವ ರೆಡ್ ಕ್ರಾಸ್ ಘಟಕ, ಪೋಶ್ ಮತ್ತು ಮಹಿಳಾ ಸಬಲೀಕರಣ ಕೋಶ ಸಹಯೋಗ ದಲ್ಲಿ ಶಿವಮೊಗ್ಗದ ಸದ್ಗುರು ಫೌಂಡೇಶನ್ ವತಿಯಿಂದ ನಡೆದ ಸ್ತನ ಕ್ಯಾನ್ಸರ್ ಕುರಿತು ಅರಿವು ನೆರವು ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅನಾದಿ ಕಾಲದಲ್ಲಿ ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಮೀಸಲಾ ಗಿದ್ದು, ಬದಲಾದ ಸಂದರ್ಭದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯ ಮೂಲಕ ಗುರುತಿಸಿಕೊಂಡಿzರೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು, ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಹಿಳೆಯರು ವೈಯುಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೆ ನಿರ್ಲಕ್ಷಿಸುತ್ತಿzರೆ. ಈ ದಿಸೆಯಲ್ಲಿ ಗ್ರಾಮೀಣ ಮಹಿಳೆ ಯರು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಹಲವು ಮಾರಣಾಂತಿಕ ಕಾಯಿಲೆಗಳಿಂದ ಪಾರಾಗುವಂತೆ ತಿಳಿಸಿದರು.
ಸ್ತನ ಕ್ಯಾನ್ಸರ್‌ಗೆ ಮಾದಕ ವಸ್ತುಗಳ ಸೇವನೆ,ಐಷಾರಾಮಿ ಜೀವನ ಶೈಲಿ, ಹಾರ್ಮೋನ್ ಉತ್ತೇಜಕ ಮಾತ್ರೆಗಳು, ಮುಟ್ಟು ಮುಂದೂಡುವ ಮತ್ತು ಗರ್ಭ ನಿರೋಧಕ ಮಾತ್ರೆಗಳ ಅತಿಯಾದ ಸೇವನೆ, ಸಮೀಪದ ರಕ್ತ ಸಂಬಂದಿಗಳಿಂದ, ವಂಶ ಪಾರಂಪರ್ಯವಾಗಿ ಕಾಯಿಲೆ ತಗಲುವ ಸಾದ್ಯತೆ ದಟ್ಟವಾಗಿದೆ ಎಂದರು.
ಕಾಯಿಲೆ ತಡೆಗಟ್ಟಲು ಮುಟ್ಟು ನಿಂತ ಒಂದು ವಾರದ ನಂತರ ೧೨ನೇ ದಿನದಿಂದ ೧೯ ದಿನದ ಒಳಗೆ ಪ್ರತೀ ತಿಂಗಳು ಸ್ತನಗಳನ್ನು ಖುದ್ದು ಪರೀಕ್ಷಿಸಿ ಕೊಳ್ಳಬೇಕು, ಫೈಬ್ರಾಯ್ಡ್ ಗೆಡ್ಡೆ ಉತ್ಪತ್ತಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು, ಸ್ತನಗಳಿಂದ ನೀರು ಅಥವಾ ಕೀವು ಒಸರುತ್ತಿರುವುದು ಖಚಿತವಾದಲ್ಲಿ ಕೂಡಲೇ ತಜ್ಞ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು.
ಇತ್ತೀಚಿನ ವರ್ಷದಲ್ಲಿ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಹೆಚ್ಚು ಹೆಚ್ಚು ಬಳಲುತ್ತಿದ್ದು, ಸಂಕೋಚ ಪ್ರವೃತ್ತಿಯಿಂದ ಕಾಯಿಲೆ ಉಲ್ಭಣಿಸಿ ಅನಿವಾರ್ಯ ಹಾಗೂ ಸಂದಿಗ್ದ ಸ್ಥಿತಿಯಲ್ಲಿ ವೈದ್ಯರ ಬಳಿ ತಪಾಸಣೆಗೆ ತೆರಳುತ್ತಿರುವುದರಿಂದ ರೋಗಕ್ಕೆ ಬಲಿಯಾಗುವ ಸಂದರ್ಬ ಹೆಚ್ಚಾಗುತ್ತಿದೆ ಈ ದಿಸೆಯಲ್ಲಿ ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿದಲ್ಲಿ ಅತ್ಯಾಧುನಿಕ ಚಿಕಿತ್ಸಾ ವಿಧಾನದಿಂದ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ಸಾಧ್ಯ. ಈ ದಿಸೆಯಲ್ಲಿ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ನಿರ್ಲಕ್ಷಿಸದೆ ಕೂಡಲೇ ತಜ್ಞ ವೈದ್ಯರ ಸಲಹೆ ಪಡೆಯಲು ತಿಳಿಸಿದರು.
ಶೈಕ್ಷಣಿಕವಾಗಿ ಮುಂದುವರಿದ ಇಂದಿನ ದಿನದಲ್ಲಿ ಪ್ರಸ್ತುತ ವಿದ್ಯಾರ್ಥಿನಿ ಯರು ಹೆಚ್ಚಿನ ತಿಳುವಳಿಕೆ ಹೊಂದಿ ದ್ದು, ಸ್ತನ ಕ್ಯಾನ್ಸರ್ ಬಗ್ಗೆ ಸೂಕ್ತ ಮಾಹಿತಿ ಹಾಗೂ ನಿಯಂತ್ರಣದ ಬಗ್ಗೆ ಸಮುದಾಯದಲ್ಲಿ ಜಗೃತಿ ಯನ್ನು ಉಂಟು ಮಾಡುವ ಜವಾ ಬ್ದಾರಿ ಯನ್ನು ವಹಿಸಿಕೊಳ್ಳಲು ತಿಳಿಸಿದ ಅವರು, ಕಾಯಿಲೆ ಬಗ್ಗೆ ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚಿ ನ ಜಗೃತಿ ಯನ್ನು ಮೂಡಿಸ ಬೇಕಾಗಿದೆ ಎಂದು ತಿಳಿಸಿದರು.
ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆ ಯರಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ತಿಳಿಸಿ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶೇಖರ್ ಮಾತನಾಡಿ, ಆರೋಗ್ಯದ ಬಗೆಗಿನ ಆಜಗರೂ ಕತೆಯಿಂದಾಗಿ ಇತ್ತೀಚಿನ ದಿನದಲ್ಲಿ ಹಲವು ಕಾಯಿಲೆಗಳು ಸಮುದಾ ಯವನ್ನು ಭಾದಿಸುತ್ತಿದ್ದು ಎಲ್ಲ ಕಾಯಿಲೆಗಳ ನಿಯಂತ್ರಣಕ್ಕೆ ವೈ ಯುಕ್ತಿಕ ಸ್ವಚ್ಚತೆ ಜತೆಗೆ ಸುತ್ತಮು ತ್ತಲಿನ ಪರಿಸರದ ಸ್ವಚ್ಚತೆ ಬಹು ಮಹತ್ವದ ಪಾತ್ರ ವಹಿಸುತ್ತದೆ ಕಾಯಿಲೆ ತಡೆಗಟ್ಟಲು ಮಾನಸಿಕ ಧೈರ್ಯ ಬಹು ಮುಖ್ಯ ಎಂದರು.
ವೈದ್ಯೆ ಡಾ.ರಂಜನಿರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಐಕ್ಯೂ ಎಸಿ ಸಂಯೊ ಜಕ ಡಾ.ಅಜಯ್ ಕುಮಾರ್ ಸಿ ಎಚ್, ವಿದ್ಯಾರ್ಥಿ ಕ್ಷೇಮಪಾಲನೆ ಅಧಿಕಾರಿ ಆರ್ ಕೆ ವಿನಯ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದರು. ಪ್ರಾಸ್ಥಾವಿಕವಾಗಿ ಮಹಿಳಾ ಸಬಲೀಕರಣ ಕೋಶದ ಸಂಚಾಲಕಿ ಸುಮ ಎಸ್ ಮಾತನಾಡಿದರು.
ಪ್ರಥಮ ಬಿಎಸ್ ಡಬ್ಲ್ಯೂ ವಿದ್ಯಾರ್ಥಿನಿ ವಾರುಣಿ ಪ್ರಾರ್ಥಿಸಿ, ಉಪನ್ಯಾಸಕ ಪಾಂಡುರಂಗ ಸ್ವಾಗತಿಸಿ, ಗಣಕ ವಿeನ ವಿಭಾಗದ ಮುಖ್ಯಸ್ಥರಾದ ಸರಿತಾ ಎನ್ ನಿರೂಪಿಸಿ, ಇತಿಹಾಸ ಪ್ರಾಧ್ಯಾಪಕ ರಾದ ಶಕುಂತಲಾ ಬಿ.ಹೆಚ್ ರವರು ವಂದಿಸಿದರು.