ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಮೋದಿಯಿಂದ ಸಾಧ್ಯವೆಂಬ ಮಾತು ಸತ್ಯವಾಗಿದೆ: ಎಸ್. ದತ್ತಾತ್ರಿ..

Share Below Link

ಶಿವಮೊಗ್ಗ: ಬಹುತೇಕ ಕಾಂಗ್ರೆಸ್ ನಾಯಕರಿಗೆ ಸಂಸ್ಕತಿಯೇ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಸುದ್ದಿಗೋಷ್ಟಿಯಲ್ಲಿ ಕುಟುಕಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ನಾಯಕರುಗಳು ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸಂಸ್ಕೃತಿಯನ್ನೇ ಮರೆತ್ತಿzರೆ. ತಂಗಡಗಿ ಉದ್ಯೋಗ ಸೃಷ್ಠಿಯ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಅವರು ಯುವಕರಿಗೆ ಉದ್ಯೋಗ ಕೊಟ್ಟಿಲ್ಲ. ಮೋದಿಗೆ ಜೈಕಾರ ಹಾಕಿದವರಿಗೆ ಕಪಾಳ ಮೋಕ್ಷ ಮಾಡಬೇಕು ಎಂದು ಹೀನಾಯ ವಾಗಿ ಹೇಳಿzರೆ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಹೇಗೆ ಮಾತನಾಡಬೇಕೆಂಬ ಅರಿವು ಇವರಿಗೆ ಇಲ್ಲ. ಇವರಿಗೆ ಸಂಸ್ಕೃತಿ ಇದ್ದರೆ ತಾನೆ. ತಕ್ಷಣ ಈ ಇಲಾಖೆ ಯಿಂದ ಅವರನ್ನು ತೆಗೆಯಬೇಕು. ಅಷ್ಟೆ ಅಲ್ಲ ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದಲೇ ವಜ ಮಾಡಬೇಕು ಎಂದು ಆಗ್ರಹಿಸಿದರು.
ಹಾಗೆಯೇ ಕಾಂಗ್ರೆಸ್ ಮುಖಂಡರುಗಳಾದ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಕೂಡ ಪ್ರಧಾನಿ ಮೋದಿ ಅವರನ್ನು ಸಾವಿನ ವ್ಯಾಪಾರಿ, ವಿಷಸರ್ಪ, ಚೋರ್‌ಗುರು ಎಂದೇಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿzರೆ. ಇದು ಇವರುಗಳ ಹೀನ ಸಂಸ್ಕೃತಿ ಆಗಿದೆ ಎಂದರು.
ಮೋದಿ ಇದ್ದರೆ ಸಾಧ್ಯ ಎಂಬ ಮಾತು ಸತ್ಯವಾಗಿದೆ. ಲಕ್ಷಾಂತರ ಉದ್ಯೋಗಳನ್ನು ಅವರು ನೀಡಿzರೆ. ಡಿಜಿಟಲ್ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ನಾವು ನಂ.೧ ಸ್ಥಾನದಲ್ಲಿzವೆ. ೨೦೧೪ರಲ್ಲಿ ಕೇವಲ ೩೫೦ ಸ್ಟಾರ್ಟ್ ಅಪ್ ಗಳಿದ್ದವು. ಈಗ ೨೦೨೪ರಲ್ಲಿ ೧ಲಕ್ಷದ ೧೭ ಸಾವಿರ ಸ್ಟಾಟ್‌ಅಪ್ ಕಂಪನಿಗಳು ಕಾರ್ಯನಿರ್ವಹಿಸು ತ್ತಿವೆ. ಅಗ್ನಿಪಥ್ ಯೋಜನೆಯನ್ನು ತಂದು, ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿzರೆ. ಸೆಮಿಕಂಡಾಕ್ಟರ್‌ಗಳ ನಿರ್ಮಾಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಭಾರತ ಈಗ ನಂ.೧ ಸ್ಥಾನದಲ್ಲಿದೆ. ೮೦ ಕೋಟಿ ಜನರಿಗೆ ಆಹಾರ ಧಾನ್ಯವನ್ನು ಉಚಿತವಾಗಿ ನೀಡಿzರೆ. ವಿಶ್ವದ ಬಡತನದ ರೇಖೆಯಲ್ಲಿ ೨೪.೮ನೇ ಸ್ಥಾನದಲ್ಲಿದ್ದ ನಾವು ಈಗ ೧೪.೮ಕ್ಕೆ ಇಳಿದಿzವೆ. ಉಚಿತ ಗ್ಯಾಸ್ ಕನಿಕ್ಷನ್ ನೀಡಲಾಗಿದೆ. ನಾರಿ ಶಕ್ತಿ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾ ಗಿದೆ. ಅನೇಕ ಕಾನೂನುಗಳನ್ನು ಸರಳೀಕರಣ ಮಾಡಿ, ಯುವಕರಿಗೆ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಗುರುತಿಸುವಂತಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಯಿಂದ ವಿಶ್ವದ ನಂ.೧ ಸ್ಥಾನಗಳಿಸಿ zವೆ. ೬೪೧ ವೈದ್ಯಕೀಯ ಕಾಲೇಜು ಗಳಿದ್ದದ್ದು, ಈಗ ೧೩೪೧ ವೈದ್ಯಕೀಯ ಕಾಲೇಜುಗಳಾಗಿವೆ. ಕೇವಲ ೭೩ ವಿಮಾನ ನಿಲ್ದಾಣ ದೇಶದಲ್ಲಿತ್ತು.