ಸಂಘಗಳನ್ನು ಕಟ್ಟುವುದರೊಂದಿಗೆ ಅದನ್ನು ಬೆಳೆಸುವುದು ಸದಸ್ಯರ ಜವಾಬ್ದಾರಿಯಾಗಿರುತ್ತದೆ: ಬಿ.ಕೆ. ಮೋಹನ್
ಭದ್ರಾವತಿ: ಸಂಘಗಳನ್ನು ಕಟ್ಟುವುದರೊಂದಿಗೆ ಬೆಳೆಸುವುದು ಸದಸ್ಯರ ಜವಾಬ್ದಾರಿಯಾಗಿರುತ್ತದೆ ಎಂದು ನಗರಸಭಾ ಸದಸ್ಯ ಬಿ.ಕೆ. ಮೋಹನ್ ನುಡಿದರು.
ಅವರು ಹೊಸಮನೆ ಮುಖ್ಯ ರಸ್ತೆಯಲ್ಲಿರುವ ಸಂಘದ ಕಛೇರಿ ಯಲ್ಲಿ ಎರ್ಪಡಿಸಿದ್ದ ಸೋಮವಂಶ ಆರ್ಯಕ್ಷತ್ರಿಯ ಸಮಾಜ ಪ್ರಾರಂಭೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟನ್ನು ಸಾಧಿಸಲು ಸಮಾಜದಲ್ಲಿನ ಉತ್ತಮ ಶಕ್ತಿಗಳು ಮುಂದೆ ಬರಬೇಕು ಇದರಿಂದ ಸಂಘ ಸಧೃಡವಾಗುವುದು ಎಂದು ಕರೆ ನೀಡಿದರು.
ಸಂಘ ಕಟ್ಡುವುದರೊಂದಿಗೆ ಸಂಘದ ಸದಸ್ಯರಿಗೆ ಅನುಕೂಲ ವಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಸದಸ್ಯರಲ್ಲಿ ಇರುವ ಕೌಶಲ್ಯತೆಯನ್ನು ಹೊತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಅನೇಕ ಉತ್ತಮ ಯೋಜನೆಗಳು ಜರಿಯಲ್ಲಿದ್ದು, ಅಂತಹವುಗಳನ್ನು ಜರಿಗೆ ತರಲು ಸಂಘವು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕೆಂದ ಅವರು, ಸಮಾಜ ಬಾಂಧವರಿಂದ ದೇಣಿಗೆ ಪಡೆದುಕೊಂಡಲ್ಲಿ ಸರಿಯಾದ ಲೆಕ್ಕ ಪತ್ರಗಳನ್ನು ಇಟ್ಟು ಸರ್ಕಾರದ ಸಂಬಂಧಿಸಿದ ಇಲಾಖೆಗೆ ಪ್ರತಿವರ್ಷ ನೊಂದಣಿಯನ್ನು ನವೀಕರಸಿಕೊಳ್ಳಬೇಕು ಹಾಗೂ ಸಮಾಜದ ಪ್ರತಿಯಬ್ಬರಿಗೂ ಸಂಘದಲ್ಲಿ ಸಮಾಜದ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದರು. ಇದರಿಂದ ಸಂಘ ಉನ್ನತ ಸ್ಥಾನಕ್ಕೇರುವುದು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆರ್ಯಕ್ಷತ್ರಿಯ ಮಹಿಳಾ ಮಂಡಳಿಯನ್ನು ಸಹಾ ರಚಿಸಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿ ಕಾಂಬ್ಳೆ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಶಿವಮೊಗ್ಗ ಸೋಮವಂಶ ಆರ್ಯಕ್ಷತ್ರಿಯ ಸಮಾಜದ ಪದಾಧಿಕಾರಿಗಳು, ಗೌರವ ಅಧ್ಯಕ್ಷ ಬಿ. ಅನಂದರಾವ್, ಉಪಾಧ್ಯಕ್ಷ ಗೋಪಿನಾಥ್ ರಾವ್, ಕಾರ್ಯದರ್ಶಿ ವಿನಾಯಕ್ ಗೌಳಿ ಹಾಗೂ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ರೂಪಲಕ್ಷ್ಮೀ ಸೇರಿದಂತೆ ಇತರರು ಇದ್ದರು.